ಯಾದಗಿರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಯುವ ಟಕ ಉಪಾಧ್ಯಕ್ಷ ಮಹೇಶರಡ್ಡಿ ಮುದ್ನಾಳ್​ ಅವರನ್ನು ಸನ್ಮಾನಿಸಲಾಯಿತು. ಶರಣಗೌಡ ಬಾಡಿಯಾಳ,ಸಿದ್ದಪ್ಪ ಹೊಟ್ಟಿ, ಮಹಾದೇವ ಎಲಸತ್ತಿ, ಖಂಡಪ್ಪ ದಾಸನ, ಸೋಮು ಜೈನ್​,ಮಹಾದೇವಪ್ಪ ಅಬ್ಬೆತುಮಕೂರು, ರುದ್ರಗೌಡ ಪಾಟೀಲ್​, ವಿಲಾಸ ಪಾಟೀಲ್​ ಇತರರಿದ್ದರು. 
ರಾಜ್ಯ

ಮಹಾಸಭಾ ಸಂಟನೆ ಬಲಪಡಿಸುವೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಯುವ ಉಪಾಧ್ಯ ಮಹೇಶರಡ್ಡಿ ಮುದ್ನಾಳ್​ ಭರವಸೆ
  • ಯಾದಗಿರಿಯಲ್ಲಿ ಅಭಿಮಾನಿಗಳಿಂದ ಸನ್ಮಾನ
ಯಾದಗಿರಿ: ಗುರುತರವಾದ ಹೊಣೆಗಾರಿಕೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯರಾದ ಈಶ್ವರ ಖಂಡ್ರೆ ನೀಡಿದ್ದು, ಅದು ಹುಸಿಯಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಹಾಸಭಾ ಸಂಟನೆಗೆ ಶಕ್ತಿ ತುಂಬುವ ಕೆಲಸ ಮಾಡುವೆ ಎಂದು ಮಹಾಸಭಾ ರಾಷ್ಟ್ರೀಯ ಯುವ ಟಕದ ನೂತನ ಉಪಾಧ್ಯ ಮಹೇಶರಡ್ಡಿ ಮುದ್ನಾಳ್​ ಹೇಳಿದರು.
ನಗರದಲ್ಲಿ ಭಾನುವಾರ ಸಂಜೆ ಮುದ್ನಾಳ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಾಸಭಾಕ್ಕೆ ನಮ್ಮ ತಾತ ಲಿಂ.ವಿಶ್ವನಾಥರೆಡ್ಡಿ ಮುದ್ನಾಳ, ತಂದೆ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳರ ಕೊಡುಗೆ ಅಪಾರವಾಗಿದೆ. ಅದರ ಮುಂದುವರೆದ ಭಾಗವಾಗಿ ತಮಗೆ ಈ ಬಹುದೊಡ್ಡ ಸ್ಥಾನ ನೀಡುವ ಮೂಲಕ ಸಮಾಜದ ಕೆಲಸ ಮಾಡುವ ಅವಕಾಶ ನೀಡಿದ್ದಾರೆ.ಬರುವ ದಿನಗಳಲ್ಲಿ ಎಲ್ಲಡೆ ಸಂಚರಿಸಿ ಮಹಾಸಭಾದ ಸಂಟನೆ ಮಾಡಲಾಗುವುದು ಎಂದರು.
ಆಯೋಜಕ ಶರಣಗೌಡ ಬಾಡಿಯಾಳ ಮಾತನಾಡಿ, ಮುದ್ನಾಳ ಕುಟುಂಬಕ್ಕೂ ಮತ್ತು ಮಹಾಸಭಾಕ್ಕೂ ಅವಿನಾಭಾವ ಸಂಬಂಧವಿದೆ.ಮುದ್ನಾಳ ಮನೆತನ ಕೊಡುಗೆ ಅಪಾರವಾಗಿದೆ.ದಶಕಗಳ ಹಿಂದೆಯೇ ಸಮಾಜವನ್ನು ಗಟ್ಟಿಯಾಗಿ ಸಂಟಿಸಿದ್ದಾರೆ. ಈಗ ಆ ಮನೆತನದ ಯುವಕುಡಿ ಮಹೇಶರಡ್ಡಿ ಗುರುತರ ಹೊಣೆಗಾರಿಕೆ ನೀಡಿದ್ದು ಸಂತಸ ತಂದಿದೆ ಎಂದರು.
ಕಸಾಪ ಜಿಲ್ಲಾಧ್ಯ ಸಿದ್ದಪ್ಪ ಹೊಟ್ಟಿ, ಪ್ರಮುಖರಾದ ಮಹಾದೇವ ಎಲಸತ್ತಿ, ಖಂಡಪ್ಪ ದಾಸನ, ಸೋಮು ಜೈನ್​, ಮಹಾದೇವಪ್ಪ ಅಬ್ಬೆತುಮಕೂರು, ರುದ್ರಗೌಡ ಪಾಟೀಲ್​, ವಿಲಾಸ ಪಾಟೀಲ್​, ರಾಜಶೇಖರ ಅನೆಪಲ್ಲಿ, ರವಿ ಬಾಪುರೆ, ರಮೇಶ ದೊಡ್ಡಮನಿ, ನಾಗಪ್ಪ ಬೆನಕಲ್​, ಬಸವರಾಜ ಸೊನ್ನದ, ಸ್ವಾಮಿದೇವ ದಾಸನಕೇರಿ, ಲಕ್ಷಿ$್ಮಪುತ್ರ ಪಾಟೀಲ್​, ಅಪ್ಪಣ್ಣ ಜೈನ್​, ಸಿದ್ದಣ್ಣಗೌಡ ಕಾಡಮನೂರ, ಭೀಮರಾಯ, ಸುನೀತಾ ಚವ್ಹಾಣ, ವಿಜಯಲಕ್ಷಿ$್ಮ ಇತರರಿದ್ದರು.