Street lights challenge the sun itself!
ಪಾತಪಾಳ್ಯ: ರೇಚನಾಯನಪಲ್ಲಿ ಗ್ರಾಮದಲ್ಲಿ ತಿಂಗಳಿನಿಂದ ನಿರಂತರವಾಗಿ ಹಗಲಲ್ಲಿ ಬೀದಿ ದೀಪಗಳು ಬೆಳಗುತ್ತಿವೆ. ಇವುಗಳನ್ನು ನೋಡಿ ಹಲವು ಬಾರಿ ಸ್ಥಳಿಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. "
ರೇಚನಾಯಕನಪಲ್ಲಿ ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ಡಿಪಿ ಸ್ವಿಚ್ ಅಳವಡಿಸಿದರೆ ಪೋಲಾಗುತ್ತಿರುವ ವಿದ್ಯುತ್ ನಿಯಂತ್ರಿಸಬಹುದು.
> ಮದ್ದಿರೆಡ್ಡಿ, ಸ್ಥಳಿಯ
ನಾರೇಮದ್ದೇಪಲ್ಲಿ ಗ್ರಾಪಂ ವ್ಯಾಪ್ತಿಯ ರೇಚನಾಯಕನಹಳ್ಳಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 600ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗಲ್ಲಿಗೊಂದರಂತೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬ ಅಳವಡಿಸಿದ್ದು, ಪ್ರತಿಯೊಂದು ಕಂಬಕ್ಕೂ ವಿದ್ಯುತ್ ಬಲ್ಬ್ ಅಳವಡಿಸಲಾಗಿದೆ. ವಿದ್ಯುತ್ ಕಂಬಗಳಿಗೆ ಡಿಪಿ ಸ್ವಿಚ್ ಅಳವಡಿಸದ ಕಾರಣ ಬೀದಿ ದೀಪಗಳು ಹಗಲಲ್ಲೂ ಬೆಳಗಿ ವಿದ್ಯುತ್ ಪೋಲಾಗುತ್ತಿದೆ. ಇದರಿಂದ ಗ್ರಾಪಂ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
"
ರೇಚನಾಯಕನಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ವಿದ್ಯುತ್ ಕಂಬಗಳಿಗೆ ಡಿಪಿ ಸ್ವಿಚ್ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.
> ಶಂಕರಪ್ಪ, ಪಿಡಿಒ, ಗ್ರಾಪಂ ನಾರೇಮದ್ದೇಪಲ್ಲಿ
ಪ್ರತಿ ದಿನ ಪಂಚಾಯಿತಿ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ, ಗಮನ ಹರಿಸುತ್ತಿಲ್ಲ. ಪೋಲಾಗುತ್ತಿರುವ ವಿದ್ಯುತ್ ನಿಯಂತ್ರಿಸಿದರೆ ಗ್ರಾಮ ಪಂಚಾಯಿತಿಗೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆಯಾಗಿ ಸಿಬ್ಬಂದಿ ವೇತನ ನೀಡಲು ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಗಳು ವಿದ್ಯುತ್ ಕಂಬಗಳಿಗೆ ಡಿಪಿ ಸ್ವಿಚ್ ಅಳವಡಿಸಿ ವಿದ್ಯುತ್ ಪೋಲಾಗದಂತೆ ನಿಯಂತ್ರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.