HD Kumaraswamy vs DK Shivakumar) 
ರಾಜ್ಯ

'ಗ್ಯಾರಂಟಿ ಪರಿಷ್ಕರಣೆ ಹಿಂದೆ 2028ರ ಚುನಾವಣೆಗೆ ಮಾಹಿತಿ ಸಂಗ್ರಹಿಸುವ ತಂತ್ರವಿದೆ':HD Kumaraswamy

ಪ್ರಮುಖ ಮುಖ್ಯಾಂಶಗಳು

  • ಡಿಕೆ ಶಿವಕುಮಾರಗೆ ಮತ್ತೆ ಹೆಚ್​ಡಿ ಕುಮಾರಸ್ವಾಮಿ ಮತ್ತೆ ಕೌಂಟರ್
  • ರಾಮನಗರದ ನಿಯೋಗ ಬಂದಿದ್ದು ನಗರದ ಅಭಿವೃದ್ಧಿ ಬಗ್ಗೆ ಮಾತನಾಡೋಕೆ
  • ದಂಧೆ ಮಾಡುವವರ ವಿರುದ್ಧ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಎಚ್​ಡಿ ಕುಮಾರಸ್ವಾಮಿ ಮನವಿ
ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್​ ಹಾಗೂ ಕೇಂದ್ರ ಸಚಿವ HD ಕುಮಾರಸ್ವಾಮಿ ವಿರುದ್ಧ  ವಾಗ್ದಾಳಿ ಮುಂದುವರೆದಿದೆ. ಹಳೆಯ ಇತಿಹಾಸ ಹಾಗೂ ರಾಮನಗರದ ಅಭಿವೃದ್ಧಿ ಬಗ್ಗೆ ಮಾತನಾಡುವ ಮೂಲಕ ಕೌಂಟರ್​ ಕೊಟ್ಟಿದ್ದಾರೆ. 
ಬಿಡದೊ ಟೌಟ್​ ಶಿಪ್​ ಹಾಗೂ ಗ್ಯಾರಂಟಿ ಪರಿಷ್ಕರಣೆಗೆ ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸಿರುವ ಬಗ್ಗೆ ಹಾಗೂ ರಾಮನಗರದಲ್ಲಿ ಕಲ್ಲು ಕ್ವಾರಿ ಬಳಿ ನಡೆದ ಅಪಘಾತದ ಬಗ್ಗೆ ಜೆಪಿ‌ ಭವನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರು ಮಾತನಾಡಿದರು ಜೊತೆಗೆ ಡಿಕೆ ಶಿವಕುಮಾರ್​ ವಿರುದ್ಧ ಕೌಂಟರ್​ ಕೊಟ್ಟಿದ್ದಾರೆ.

ನಗರದ ಅಭಿವೃದ್ಧಿ ಬಗ್ಗೆ ಮಾತು

ರಾಮನಗರದ ನಿಯೋಗ ನಿನ್ನೆ ಬಂದಿದೆ ನಗರದ ಅಭಿವೃದ್ಧಿಗೆ 770 ಕೋಟಿ ಅನುದಾನದ ಬಗ್ಗೆ ಕೇಳಲು ಬಂದಿದ್ರು. ಬಿಡದಿ ಟೌನ್ ಶಿಪ್ ಬಗ್ಗೆ ಅವರು ಕೇಳಲು ಬಂದಿರಲಿಲ್ಲ. ಅವರ ಮುಂದೆ ಬಿಡದಿ ಬಗ್ಗೆ ಭಾಷಣ ಮಾಡಿದ್ದು ನಾನು ನೋಡಿದೆ. ನಾನು ನೋಡಿದ್ದೇನೆ ಪಾಪಾ ಅವರು ನಾಲ್ಕು ತಾಲೂಕು ಮುಖ್ಯ ಅಂದಿದ್ದಾರೆ. ಇವ್ರು ನಾಲ್ಕು ತಾಲೂಕಿಗೆ ಸಿಎಂ? ಕರ್ನಾಟಕಕ್ಕೆ ಸಿಎಂ? ಬೆಂಗಳೂರು ದಕ್ಷಿಣಕ್ಕೆ ಸಿಎಂ? ಎಂದು ಪ್ರಶ್ನೆ ಮಾಡಿದ್ದಾರೆ. 
ರಾಮನಗರ, ಕನಕಪುರ ಅಭಿವೃದ್ಧಿ ಆಗಿಲ್ಲ ಎನ್ನುತ್ತಾರೆ. ನಾನು ರಾಮನಗರಕ್ಕೆ ಪಾದಾರ್ಪಣೆ ಮಾಡಿದಾಗ ಒಂದು ಹಳ್ಳಿ ರಸ್ತೆ ಆಗಿರಲಿಲ್ಲ. ಈ ರೀತಿ ಹಲವಾರು ನಿರ್ದಶನ ಕೊಡಬಲ್ಲೆ. ಕನಕಪುರಕ್ಕೆ ಕರೆಂಟ್ ಇತ್ತ?. ಬೆಂಗಳೂರಿನಿಂದ 53 ಕಿಮೀ ಇದೆ , ಕರೆಂಟ್, ಕುಡಿಯೋ ನೀರು ಇತ್ತ?. ಇದೆಲ್ಲ ಯಾರ ಕಾಲದಲ್ಲಿ ಆಗಿದ್ದು? ಹೇಗೆ ಇತ್ತು ಮೊದಲು ಕನಕಪುರ?ನಾನೇನು ಬಂಡೆ ಒಡೆಯಲು ಹೋಗಿರಲಿಲ್ಲ? ಬಂಡೆ ಒಡೆದು ವಿದೇಶಕ್ಕೆ ಸಾಗಿಸಲಿಲ್ಲ ಕನಕಪುರದ ಜನಕ್ಕೆ ಏನು ಮಾಡಬೇಕು ಮಾಡಿದ್ದೇನೆ ಎಂದು ಕಿಡಿಕಾರಿದರು

ನಾನೇನು ಕೆಲಸ ಮಾಡಿದ್ದೇನೆ ಗೊತ್ತಾ? 

ಒಂದು ರಸ್ತೆ ಇರಲಿಲ್ಲ ನೆಟ್ಟಗೆ.. ಹಳ್ಳಿಗಳಲ್ಲಿ ಹೆರಿಗೆಗೆ ಚಿಬ್ಲಲ್ಲಿ ಎತ್ತಿಕೊಂಡು ಬರ್ತಿದ್ರು. ನಾನು ಅದನ್ನ ಮಾಡಲು ಆಗಿಲ್ಲ ಅಂತ ಹೇಳ್ತಾರೆ ಅಲ್ವಾ ನಾನು ಮಾಡಲು ಹೊರಟಾಗ ಮಾಡಬೇಡ ಅಂತ ಹೇಳಿದವರು ಯಾರು? ಆವಾಗ ನಿಮಗೆ ಯಾರು ಜ್ಞಾನೋದಯ ಕೊಟ್ಟವರು ಯಾರು?. ಈಗ ಮಾಡಿ ಅಂತ ಜ್ಞಾನೋದಯಕೊಟ್ಟವರು ಯಾರು?4೦೦೦ ಸಾವಿರ ಅರ್ಜಿ ಹಾಕಿದವರಿಗೆ ಉತ್ತರ ಕೊಟ್ಟಿಲ್ಲ ಇವರು ಇದು ಕತೆ ಹೇಳಿಕೊಂಡು ಹೊರಟಿದ್ದಾರೆ ರೈತರು ಕಾನೂನು ಹೋರಾಟ ಮಾಡುತಿದ್ದಾರೆ, ನ್ಯಾಯಾಲಕ್ಕೆ ಹೊರಟಿದ್ದಾರೆ. 
ನಾನು ಅವತ್ತೆ ಹೇಳಿದ್ದೆ ಟೌನ್ಶಿಪ್ ಮಾಡಲ್ಲ ಅಂತ ಹೇಳಿದ್ದೇನೆ. ಸ್ವಾತಂತ್ರ ದಿನಾಚರಣೆ ದಿನವೇ ವಿಶ್ವೇಶ್ವರಯ್ಯ ಬಡಾವಣೆ,ಕಾರಂತ ಬಡಾವಣೆ ಘೋಷಣೆ ಮಾಡಿದ್ದೆ. ಎಸ್ ಎಂ ಕೃಷ್ಣ ರಸ್ತೆ ಅಂತ ದೊಡ್ಡದಾಗಿ ಹೇಳ್ತಿದ್ದಾರೆ, 20 ವರ್ಷ ಆಯ್ತ ಸೈಟ್ ಕೊಟ್ಟಿದ್ದೀರಾ. ಅರ್ಕಾವತಿ ಬಿಡಿ ಮುಂದಾಯಿಸಿಬಿಟ್ಟರು. ಇದಕ್ಕೆಲ್ಲ ತೀರ್ಮಾನ ಮಾಡಿದ್ದೆ ಕುಮಾರಸ್ವಾಮಿ ಡಿನೋಟಿಪಿಕೇಶನ್ ಕುಮಾರಸ್ವಾಮಿ ಮಾಡಿಲ್ಲ ಅಂತಾರೆ

ಗ್ಯಾರಂಟಿ ಪರಿಷ್ಕರಣೆ ವಿಚಾರ‌

ಸುಜಾತ ಟ್ಯಾಕಿಸ್ ಎದುರು ಬ್ಯುಲ್ಡಿಂಗ್ ನ ಟಾಪ್ ಫ್ಲೋರ್ ನಲ್ಲಿ ಮುಂದಿನ 2028ರ ಚುನಾವಣೆ ಸ್ಟ್ರಾಟಜಿ ಮಾಡ್ತಿದ್ದಾರೆ. ಡೆಟಾಗೋಸ್ಕರ ಗೃಹ ಲಕ್ಷ್ಮಿ ಆಯ್ತು,  ಈಗ ಗೃಹ ಜ್ಯೋತಿ ಯೋಜನೆಗೆ ಮನೆ ಮನೆಯಲ್ಲಿ ಜಾತಿ ಕೇಳ್ತಿದ್ದಾರೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆಗೆ ಒಂದು ಫೋಟೊ ಹಾಕಬೇಕಂತೆ. ಈ ಫೋಟೊಗೆ ಜನ ಎಷ್ಟು ದುಡ್ಡು ಖರ್ಚು ಮಾಡಬೇಕು. ಅನರ್ಹ ಹೆಸರನ್ನ  ಡಿಲಿಟ್ ಮಾಡ್ತಾರಂತೆ. ಈಗ ಜ್ಞಾನೋದಯ ಆಗಿದೆ ಮೂರು ವರ್ಷ ಅದ್ಮಲೆ. ಇಲ್ಲಿವರೆಗೆ ಏನ್ ಮಾಡ್ತಿದ್ರು.ಕಸ ಬೀದಿಯಲ್ಲಿ ಎಷ್ಟು ಬೀಳ್ತಿದೆ ಅಂತ ಮಾಧ್ಯಮದಲ್ಲಿ ತೋರಿಸ್ತಿದ್ದಾರೆ. ಅದರ ಬಗ್ಗೆ ಸರ್ಕಾರ ಗಮನಕೊಡಲಿ ಎಂದರು.

ಕಲ್ಲು ಕ್ವಾರಿ  ಸಾವು

ಕಲ್ಲು ಕ್ವಾರಿ ದುರುಂತ ಪ್ರಕರಣದಲ್ಲಿ ಬೆಂಗಳೂರು,ಮಾಗಡಿ ರಸ್ತೆಯಲ್ಲಿರುವ ಮಾದಪಟ್ಟಣ ಗ್ರಾಮದಲ್ಲಿ ಕ್ವಾರಿ ಕೆಲಸ ಮಾಡುವ ಕೂಲಿ ಕಾರ್ಮಿಕರರು ಎಳೇಂಟು ಜನ ಮೃತರಾಗಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲಾಇಂತಹ ಪ್ರಕರಣವನ್ನ ನಾವು ಇಲ್ಲಿವರೆಗು ನೋಡಿಲ್ಲಾ. ಇದ್ರಲ್ಲಿ ದೊಡ್ಡ ದಂದೆ ಮಾಡೋವರು ಇದ್ದಾರೆ
ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಇದರ ಹಿಂದೆ ಇರೋರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಗುಡುಗಿರು, (ಏಜೆನ್ಸೀಸ್).