ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 'ಕನ್ನಡ ದೀಪ' ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಕೆ. ಎಚ್. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಮುನಿವೀರಣ್ಣ, ಸಂದ ಕಾರ್ಯದರ್ಶಿ ಸುಬ್ರಮಣಿ, ಕಾರ್ಯದರ್ಶಿ ಗೋವಿಂದರಾಜು, ಹಿರಿಯ ಕಲಾವಿದರಾದ ಬೈರೇಗೌಡ, ನಾಗರಾಜು ಇದ್ದರು.
ವಿಜಯಪುರ : ರಂಗಭೂಮಿಯಲ್ಲಿಯೇ ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ&ಬೆಳೆಸುವ ಕೆಲಸ ನಡೆಯಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ ತಿಳಿಸಿದರು.
ದೇವನಹಳ್ಳಿಯಲ್ಲಿ ತಾಲೂಕು ಕನ್ನಡ ಕಲಾವಿದರ ಸಂಘದಿಂದ ಹಮ್ಮಿಕೊಂಡಿದ್ದ 134ನೇ ಮಾಸಿಕ ಕನ್ನಡ ದೀಪ ಕಾರ್ಯಕ್ರಮದಲ್ಲಿ ಮಾತನಾಡಿ, "ರಂಗಭೂಮಿಯ ಹಿಂದೆ ಒಂದು ಒಳ್ಳೆಯ ಕಥೆ, ದಕ್ಷ ನಿರ್ದೇಶಕ, ರಂಗಸ್ಥಳ, ಪೂರಕ ಸಂಗೀತ, ಶ್ರೇಷ್ಠ ನಟನೆ ಹಾಗೂ ಸಮಾಜಕ್ಕೆ ಕೊಡುವ ಉತ್ತಮ ಸಂದೇಶ ಇರುತ್ತದೆ. ಇವುಗಳೇ ರಂಗಭೂಮಿಯ ಜೀವಂತಿಕೆಯ ಮುಖ್ಯ ಲಕ್ಷಣಗಳಾಗಿದ್ದು, ಇಂದಿನ ಆಧುನಿಕ ಯುಗದಲ್ಲೂ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಗುಣಗಳೇ ಕಾರಣ, ಎಂದು ಅಭಿಪ್ರಾಯಪಟ್ಟರು.
ಹಿರಿಯ ರಂಗಭೂಮಿ ಕಲಾವಿದ ಕೆ.ಎಚ್. ಚಂದ್ರಶೇಖರ್ ಮಾತನಾಡಿ, ನಾಟಕ ನೋಡಿ ಚಪ್ಪಾಳೆ ತಟ್ಟುವ ಸಾರ್ವಜನಿಕರು ಕೇವಲ ಕನಿಕರದ ಮಾತುಗಳನ್ನಾಡುತ್ತಾರೆಯೇ ವಿನ@ ರಂಗಭೂಮಿಗೆ ಸಿಗಬೇಕಾದ ನೈಜ ಪ್ರೋತ್ಸಾಹ ಇಂದಿಗೂ ಕಡಿಮೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಸಿ. ಮೋಹನ್ ಬಾಬು ಮಾತನಾಡಿ, ಪ್ರಸ್ತುತ ವೃದ್ಧ ಹಾಗೂ ಅರ್ಹ ಕಲಾವಿದರಿಗೆ ಸರ್ಕಾರದಿಂದ ಸಿಗಬೇಕಾದ ಮಾಸಾಶನ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕಾಗಿದೆ ಎಂದರು.