ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಾರಾಯಿ ಮಾರಾಟವನ್ನು ಬಂದ್ ಮಾಡಲು ಕ್ರಮಕೈಗೊಳ್ಳಬೇಕು ಎಂದು ಯುವ ಕ್ರಾಂತಿ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಗಮೇಶ ಭೂರೆ ನೇತೃತ್ವದಲ್ಲಿ ಸೋಮವಾರ ಶಿರಸ್ತೇದಾರ್ ಆಶ್ವಿನ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕ ಅಧ್ಯಕ್ಷ ನವನಾಥ ಮೇತ್ರೆ, ಮಂಠಾಳ ವಲಯ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಸಚಿನ ಮೊಳಕೆರೆ, ವೀರೇಶ ಗುಡ್ಡಾ ಇತರರಿದ್ದರು.
- ಯುವ ಕ್ರಾಂತಿ ಸಂಘಟನೆಯಿಂದ ಮನವಿಪತ್ರ ಸಲ್ಲಿಕೆ
ಬಸವಕಲ್ಯಾಣ: ತಾಲೂಕಿನ ಮಂಠಾಳ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಾರಾಯಿ ಮಾರಾಟವನ್ನು ಕೂಡಲೇ ಬಂದ್ ಮಾಡಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಯುವ ಕ್ರಾಂತಿ ಸಂಘಟನೆ ಒತ್ತಾಯಿಸಿದೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗಮೇಶ ಭೂರೆ ನೇತೃತ್ವದಲ್ಲಿ ಸೋಮವಾರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಬೇಡಿಕೆ ಕುರಿತು ತಹಸೀಲ್ದಾರ್ಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ್ ಆಶ್ವಿನ್ ಪಾಟೀಲ್ ಅವರಿಗೆ ಸಲ್ಲಿಸಲಾಯಿತು.
ಮಂಠಾಳದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಸಾರ್ವಜನಿಕರ ಆರೋಗ್ಯ, ಶಾಂತಿ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅನೇಕ ಯುವಕರು ಮತ್ತು ಬಡ ಕುಟುಂಬಗಳು ಇದರ ಪರಿಣಾಮಕ್ಕೆ ಒಳಗಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ದಾಳಿ ನಡೆಸಿ ಅಕ್ರಮ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘಟನೆಯ ತಾಲೂಕ ಅಧ್ಯಕ್ಷ ನವನಾಥ ಮೇತ್ರೆ, ಮಂಠಾಳ ವಲಯ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಸಚಿನ ಮೊಳಕೆರೆ, ವೀರೇಶ ಗುಡ್ಡಾ, ಆಶೀಶ್ ಬಿರಾದಾರ, ಸತೀಶ ಜಮಾದಾರ, ಸುನೀಲ ಜುಂಜ, ಸಾಗರ, ಮಹಾಂತೇಶ, ಸುಮಿತ ಜಮಾದಾರ, ಕಂಠೆಪ್ಪ ಜಮಾದಾರ, ಸಿದ್ದರಾಮ ಕುಂಬಾರೆ ಇತರರಿದ್ದರು.