ಗೋ ಹತ್ಯೆ ಕಾಯ್ದೆ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ಕೊಟ್ಟೂರಿನಲ್ಲಿ ತಾಲೂಕು ಹಿಂದೂ ಪರ ಸಂಘಟನೆಗಳ ಪ್ರಮುಖರು ತಹಸೀಲ್ದಾರ್ ಅಮರೇಶ್ ಜಿ.ಕೆ. ಗೆ ಮನವಿ ಸಲ್ಲಿಸಿದರು. ವಿಎಚ್‌ಪಿ ತಾಲೂಕು ಅಧ್ಯಕ್ಷ ಕಸಾಲ ಮಂಜುನಾಥ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಬಿ.ಆರ್.ವಿಕ್ರಮ್, ತಾಲೂಕು ಘಟಕ ಮಾಜಿ ಅಧ್ಯಕ್ಷ ವೀರೇಶಗೌಡ ಇತರರಿದ್ದರು. 
ರಾಜ್ಯ

ಗೋ ಅಕ್ರಮ ಸಾಗಣೆ ತಡೆಯಿರಿ

JAGADEESH KUMBAR
ಕೊಟ್ಟೂರು: ಗೋ ಅಕ್ರಮ ಸಾಗಣೆ ತಡೆ ಹಾಗೂ ಹತ್ಯೆ ಕಾಯ್ದೆ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಅಮರೇಶ್ ಜಿ.ಕೆ.ಗೆ ಸೋಮವಾರ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಬಿ.ಆರ್.ವಿಕ್ರಮ್ ಮಾತನಾಡಿ, ಗೋ ಅಕ್ರಮ ಸಾಗಣೆ ಹಾಗೂ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ನಿಲ್ಲಬೇಕು. ಚೆಕ್‌ಪೋಸ್ಟ್ ನಿರ್ಮಿಸುವ ಮೂಲಕ ರಾತ್ರಿ ನಡೆಯುತ್ತಿರುವ ಗೋ ಸಾಗಣೆಯನ್ನು ಪೊಲೀಸರು ತಡೆಯಬೇಕೆಂದರು. 
ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕಸಾಲ ಮಂಜುನಾಥ ಮಾತನಾಡಿ, ಗೋ ಹಂತಕರಿಗೆ ಕೆಲವರು ರಕ್ಷಣೆಯಾಗಿ ನಿಂತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. 
ಬಿಜೆಪಿ ಪಟ್ಟಣ ಘಟಕದ ಮಾಜಿ ಅಧ್ಯಕ್ಷ ವೀರೇಶಗೌಡ, ಪಕ್ಷದ ಪ್ರಮುಖರಾದ ಎಂ.ಮಲ್ಲಿಕಾರ್ಜುನ, ಕೋನಾಪುರ ಬಸವರಾಜ್, ಸಿ.ಬಸವರಾಜ್, ವಿಎಚ್‌ಪಿ ತಾಲೂಕು ಕಾರ್ಯದರ್ಶಿ ಕಲ್ಲೇಶ, ಬಜರಂಗದಳ ಸಂಯೋಜಕ ನೂತನ್ ಪ್ರಸಾದ್, ಪ್ರಮುಖರಾದ ಎಂಎಂಜೆ ವಾಗೀಶಯ್ಯ, ಉತ್ತಂಗಿ ಚಂದ್ರಪ್ಪ, ಜಿ.ಎಸ್.ಮಂಜುನಾಥ, ಬಿ.ಎಂ ಶಿವರಾಜ್, ಸಂದೀಪ್ ಇತರರಿದ್ದರು.