ಜಿಲ್ಲಾಧಿಕಾರಿ ರಾಹುಲ್ ತುಕರಾಮ್ ಪಾಂಡ್ವೆ
- ಡಿಸಿ ರಾಹುಲ್ ಪಾಂಡ್ವೆ ಸೂಚನೆ
ಯಾದಗಿರಿ: ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮತ್ತು ಮುರುಮ್ ಇತರೆ ಉಪ ಖನಿಜಗಳ ಗಣಿಗಾರಿಕೆ, ಸಾಗಣೆ ತಡೆಗಟ್ಟಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಾಹುಲ್ ತುಕರಾಮ್ ಪಾಂಡ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ ಹಾಗೂ ಇತರ ತಾಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು, ಮುರುಮ್ ಇತರೆ ಉಪ ಖನಿಜಗಳ ಗಣಿಗಾರಿಕೆಯಾಗುತ್ತಿದೆ ಎಂದು ಹಲವಾರು ದೂರುಗಳು ಸ್ವೀಕೃತಿಯಾಗುತ್ತಿದ್ದು, ಈ ಸಂಬಂಧ ಯಂತ್ರಗಳ, ವಾಹನಗಳನ್ನು ಜಪ್ತಿ ಮಾಡಿಕೊಂಡು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು. ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮ ಮುರುಮ್ ಗಣಿಗಾರಿಕೆಯಲ್ಲಿ ತೊಡಗಿದ್ದ ಹಿಟಾಚಿ ಯಂತ್ರವನ್ನು ಜಪ್ತಿ ಮಾಡಿ ದಂಡದ ಮೊತ್ತ ರೂ. 50 ಸಾವಿರ ರೂ.ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳು ವಿಫಲರಾದಲ್ಲಿ ಸಮಿತಿಯ ಸದಸ್ಯರುಗಳನ್ನೆ ನೇರ ಹೊಣೆಗಾರರನ್ನಾಗಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಹಾಯಧನ ಸೌಲಭ್ಯ ಅರ್ಜಿ ಆಹ್ವಾನ
ಯಾದಗಿರಿ: ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರ ಸಮ್ಮಾನ್ ಯೋಜನೆಯಡಿ 2026&27ನೇ ಸಾಲಿಗೆ ಕೈಮಗ್ಗ ನೇಕಾರಿಕೆ ಹಾಗೂ ಇತರೆ ಕೈಮಗ್ಗ ನೇಕಾರಿಕೆ ವೃತ್ತಿಯನ್ನು ಹೊಂದಿದ ನೇಕಾರರಿಗೆ ವಾರ್ಷಿಕವಾಗಿ 5000 ರೂ.ಆರ್ಥಿಕ ನೆರವು ಡಿಬಿಟಿ ಮೂಲಕ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಕಡ್ಡಾಯವಾಗಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಾ ಭೀಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. ಜೂ.30ರ ಸಂಜೆ 5ರೊಳಗಾಗಿ ಅರ್ಜಿ ಸಲ್ಲಿಸಬೇಕು.