ಜಿ¯್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಕೂಡಲೇ ತಡೆಯುವಂತೆ ಆಗ್ರಹಿಸಿ ಯಾದಗಿರಿಯಲ್ಲಿ ಸೋಮವಾರ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಪೋಲಪ್ಪ ಎಂ. ನಾರಾಯಣೋರ ಮನವಿಪತ್ರ ಸಲ್ಲಿಸಿದರು. ಮಲ್ಲಿಕಾರ್ಜುನ ಹುಲಿಬೆಟ್ಟ, ಭೀಮರಾಯ ಬಾವುರ, ಮಲ್ಲಿಕಾರ್ಜುನ ಮುಷ್ಟುರ, ಚಂದ್ರಶೇಖರ ಇತರರಿದ್ದರು. 
ರಾಜ್ಯ

ಅಕ್ರಮ ಮದ್ಯ ಮಾರಾಟ ತಡೆಯರಿ

ಚನ್ನಬಸಯ್ಯ ಗುರುವಿನ
ಯಾದಗಿರಿ : ಜಿ¯್ಲÉಯ ಗ್ರಾಮೀಣ ಪ್ರದೇಶಗಳಲ್ಲಿ ವೈನ್ ಶಾಪ್‌ಗಳು ಹಾಗೂ ಬಾರ್‌ಗಳಿಂದ ಅಕ್ರಮವಾಗಿ ಮದ್ಯ ಸಾಗಾಟ ನಡೆಯುತ್ತಿರುವುದನ್ನು ಕೂಡಲೇ ತಡೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆ ಜಿ¯್ಲÁ ಘಟಕದ ಪದಾಽಕಾರಿಗಳು ಸೋಮವಾರ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿ¯್ಲÁಧ್ಯಕ್ಷ ಪೋಲಪ್ಪ ಎಂ. ನಾರಾಯಣೋರ, ಕೆಲವು ವೈನ್ ಶಾಪ್‌ಗಳು ಮತ್ತು ಬಾರ್‌ಗಳಿಂದ ಟಂಟA ವಾಹನಗಳು, ದ್ವಿಚಕ್ರ ವಾಹನಗಳು ಸೇರಿ ವಿವಿಧ ವಾಹನಗಳ ಮೂಲಕ ಗ್ರಾಮೀಣ ಭಾಗಗಳಿಗೆ ಅಕ್ರಮವಾಗಿ ಮದ್ಯ ಸಾಗಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮಗಳಲ್ಲಿನ ಹೋಟೆಲ್‌ಗಳು, ಅಂಗಡಿಗಳು ಹಾಗೂ ಇತರೆ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಸಾರ್ವಜನಿಕರ ಜೀವನದ ನೇರವಾಗಿ ದುಷ್ಪರಿಣಾಮ ಬೀರುತ್ತಿದೆ. ಮದ್ಯದ ದುಶ್ಚಟದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಮಹಿಳೆಯರು ತೊಂದರೆ ಅನುಭವಿಸುತ್ತಿz್ದÁರೆ. ಯುವಕರು ಹಾಗೂ ಮಕ್ಕಳು ಕೂಡ ದುಶ್ಚಟಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿz್ದÁರೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಆದ್ದರಿಂದ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವೈನ್ ಶಾಪ್‌ಗಳು ಹಾಗೂ ಬಾರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ಪರವಾನಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಹಾಗೊಂದು ವೇಳೆ ನಿರ್ಲಕ್ಷ್ಯವಹಿಸಿದರೆ ಅಕ್ರಮ ಮದ್ಯ ಸಾಗಾಟ ಮಾಡುವ ವಾಹನಗಳ ಜಿಪಿಎಸ್ ಮಾಹಿತಿ ಸೇರಿ ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿ¯್ಲÁ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹುಲಿಬೆಟ್ಟ, ತಾಲೂಕು ಅಧ್ಯಕ್ಷ ಭೀಮರಾಯ ಬಾವುರ, ಮಲ್ಲಿಕಾರ್ಜುನ ಮುಷ್ಟುರ, ಚಂದ್ರಶೇಖರ್ ಎಚ್, ಲಕ್ಷ್ಮಣ ಹಡಪದ್, ಹಣಮಂತ ದಾಸರ, ಮಲ್ಲು ಟೈಲರ ಇತರರಿದ್ದರು.