ಸೇಡಂನಲ್ಲಿ ಎಲ್ಲ ರೈಲುಗಳನ್ನು ನಿಲ್ಲಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈಲು ನಿಲ್ದಾಣದ ಮುಂಭಾಗದಲ್ಲಿ ಕರವೇ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. 
ರಾಜ್ಯ

ಸೇಡಂನಲ್ಲಿ ಎಲ್ಲ ರೈಲು ನಿಲುಗಡೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಕರವೇ ಕಾರ್ಯಕರ್ತರಿಂದ ಸ್ಟೇಷನ್​ ಎದುರು ಹೋರಾಟ
ಸೇಡಂ: ಇಲ್ಲಿನ ರೈಲ್ವೆ ನಿಲ್ದಾಣದ ಮೂಲಕ ಹಲವು ರೈಲುಗಳು ಸಂಚರಿಸುತ್ತವೆ. ಆದರೆ ಯಾವೊಂದು ನಿಲ್ಲದಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್​ ಹೇಳಿದರು.
ಸೇಡಂನಲ್ಲಿ ಎಲ್ಲ ರೈಲು ನಿಲ್ಲಿಸಬೇಕು ಎಂದು ಒತ್ತಾಯಿಸಿ ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಸಿ ಮಾತನಾಡಿ, ಬೀದರ್​& ಯಶವಂತಪುರ ಮತ್ತು ನಾಂದೆಡೆ-&ಬೆಂಗಳೂರು ರೈಲಿನಲ್ಲಿ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಬೇಕು. ವಿಶಾಖಪಟ್ಟಣ&-ಲೋಕಮಾನ್ಯ ತಿಲಕ್​, ಪುಣೆ ಶತಾಬ್ಧಿ, ತಿರುಪತಿ&-ಶಿರಡಿ, ಮಂಗಳೂರು& -ಹೈದರಾಬಾದ್​ ರೈಲುಗಳನ್ನು ಸೇಡಂನಲ್ಲಿ ನಿಲ್ಲಿಸಬೇಕು. ಜತೆಗೆ ನಿಲ್ದಾಣದ ಒಳಗಡೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರು ಪ್ರತಿಭಟನೆ ಮಧ್ಯೆ ರೈಲು ತಡೆಯುವುದಕ್ಕಾಗಿ ಮುಂದಾದಾಗ ರೈಲ್ವೆ ಮತ್ತು ಸ್ಥಳಿಯ ಪೊಲೀಸರು ಬಂಧಿಸಿ ಕೆಲಕಾಲದ ನಂತರ ಬಿಡುಗಡೆಗೊಳಿಸಿದರು.
ಮಹೇಶ ಪಾಟೀಲ್​ ಬಟಗೇರಾ, ದೇವುಕುಮಾರ ನಾಟೀಕರ, ಭೀಮಯ್ಯ ಗುತ್ತೇದಾರ್​, ಶ್ರೀನಿವಾಸರೆಡ್ಡಿ ಮದನಾ, ಚಂದ್ರಶೇಖರ ನಾಮವಾರ, ಪ್ರವಿಣಕುಮಾರ ಕೋಡ್ಲಾ, ರಾಘವೇಂದ್ರ ಕಡಗಂಚಿ, ಚಂದ್ರಶೇಖರ ಮಡಿವಾಳ, ರವಿ ಮದರಿ, ಗುಂಡಪ್ಪ, ರವಿಸಿಂಗ್​, ಅನೀಲ, ಮಹೇಶರೆಡ್ಡಿ ಜಾಕನಳ್ಳಿ, ಸುಭಾಷ, ಉಮಾಕಾಂತ, ಮಲ್ಲಿಕಾರ್ಜುನ ಬೆನಕನಹಳ್ಳಿ, ಭಗವಂತ, ರಾಜು ಗುತ್ತೇದಾರ್​, ವಿಶ್ವಾರಾಧ್ಯ, ಭೀಮು ಜಿಂಗಲ, ಮುಕುಂದ, ಗೀರಿಶ, ಶಪೋರ್ದ್ದಿನ್​ ಇತರರಿದ್ದರು.