ಕುಲಾಲಿ ರೈಲ್ವೆ ಸ್ಟೇಷನ್ ಬಳಿಯ ಹನುಮಾನ ಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಂಕರ ಚವ್ಹಾಣ್ ಮಾತನಾಡಿದರು. ಹಣಮಂತ್ರಾಯ ಪಾಟೀಲ್, ದತ್ತಾತ್ರೇಯ ಶಿರೂರ, ಭೀಮರಾಯ ಕುಮಸಿ ಇತರರಿದ್ದರು.
- ಶಂಕರ ಚವ್ಹಾಣ್ ಒತ್ತಾಯ
- ಹನುಮಾನ ಮಂದಿರ ಆವರಣದಲ್ಲಿ ಪೂರ್ವಭಾವಿ ಸಭೆ
ನಿಂಬರ್ಗಾ : ಕುಲಾಲಿ ರೈಲ್ವೆ ಸ್ಟೇಷನ್ನಲ್ಲಿ ಈ ಹಿಂದೆ ನಿಲ್ಲುತ್ತಿದ್ದ ಎಲ್ಲ ರೈಲುಗಳ ನಿಲುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ರೈಲು ರೋಕೊ ಹೋರಾಟ ಮಾಡಲಾಗುವುದು ಎಂದು ಮುಖಂಡ ಶಂಕರ ಚವ್ಹಾಣ್ ಹೇಳಿದರು.
ಕುಲಾಲಿ ರೈಲ್ವೆ ಸ್ಟೇಷನ್ ಬಳಿಯ ಹನುಮಾನ ಮಂದಿರ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕೋವಿಡ್ಗಿಂತ ಮುಂಚೆ ಹೈದರಾಬಾದ್-ವಿಜಯಪುರ, ವಾಡಿ- ಸೋಲಾಪುರ, ರಾಯಚೂರು- ವಿಜಯಪುರ, ಕಲಬುರಗಿ& ಸೋಲಾಪುರ, ಸೋಲಾಪುರ- ರಾಯಚೂರು, ಸೋಲಾಪುರ- ಫಲಕನಾಮ, ವಿಜಯಪುರ- ಹೈದರಾಬಾದ್ ಸೇರಿ ಹಲವು ಪ್ಯಾಸೆಂಜರ್ ರೈಲುಗಳು ಸ್ಟೇಷನ್ ಅಲ್ಲಿ ನಿಲ್ಲುತ್ತಿದ್ದವು. ಜನಜಂಗುಳಿ ಹೆಚ್ಚಿತ್ತು. ಆದರೆ ಇದೀಗ ಒಂದೆರಡು ರೈಲು ಮಾತ್ರ ನಿಲ್ಲುತ್ತಿದ್ದು, ನಿಲ್ದಾಣ ಅಕ್ಷರಶ-ಅನಾಥವಾಗಿದೆ. ಪ್ಯಾಸೆಂಜರ್ ರೈಲುಗಳ ಓಡಾಟ ನಿಂತಿದ್ದು, ಕೇವಲ ಸೂಪರ್ ಫಾಸ್ಟ್ ಗಾಡಿಗಳು ಸಂಚರಿಸುತ್ತಿವೆ. ಇವಾವು ನಿಲುಗಡೆ ಆಗುತ್ತಿಲ್ಲ. ಇದರಿಂದ ಜನರು ಸ್ಟೇಷನ್ಗೆ ಬರುವುದನ್ನೆ ಬಿಟ್ಟಿದ್ದಾರೆ ಎಂದು ತಿಳಿಸಿದರು.
ಔರಾದ್&ಸದಾಶಿವಗಡ ರಾಜ್ಯ ಹೆದ್ದಾರಿ ನಿರ್ಮಿಸಿ ದಶಕಗಳಾಗಿದೆ. ಆದರೆ ಕುಲಾಲಿ ರೈಲು ಹಳಿ ಬಳಿ ಕೆಳ ಅಥವಾ ಮೇಲ್ಸೇತುವೆ ನಿರ್ಮಿಸುವೆ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಈ ಕುರಿತು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಬೀದರ್ ಸಂಸದ ಸಾಗರ ಖಂಡ್ರೆ, ಆಳಂದ ಹಾಗೂ ಅಫಜಲಪುರ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಧರ್ಮರಾಜ ಮಾಶಾಳಕರ್, ಸುರೇಶ ಕುಂಬಾರ, ಬಸವರಾಜ ಪೂಜಾರಿ, ಹಣಮಂತ್ರಾಯ ಪಾಟೀಲ್, ದತ್ತಾತ್ರೇಯ ಶಿರೂರ, ಗುರುಪಾದಪ್ಪ ಕುಂಬಾರ, ಶಿವಲಾಲ್ ಗುತ್ತೇದಾರ್, ಭೀಮರಾಯ ಕುಮಸಗಿ, ಸುರೇಶ ಕಂಬಾರ, ಮಾಯಪ್ಪ ಕಟ್ಟೋಳಿ, ಜಗದೀಶ ಮಠಪತಿ, ಬಾಸು ಚವ್ಹಾಣ್, ಗುಂಡಪ್ಪ ಕುಲಾಲಿ, ಅನೀಲ್ ಚವ್ಹಾಣ್, ಹಣಮಂತ್ರಾಯ ಶಿರೂರ, ಸಂತೋಷ ಚವ್ಹಾಣ್, ಚಂದ್ರಕಾಂತ ಚವ್ಹಾಣ್, ರುಕುಂ ತೋಲಾ ಬೈರಾಮಡಗಿ ಇತರರಿದ್ದರು.