- 13 ಠಾಣೆಯಲ್ಲಿನ 70 ಪ್ರಕರಣ ಭೇದಿಸಿ, 94 ಆರೋಪಿಗಳ ಬಂಧನ
ಬೆಂಗಳೂರು: ಉತ್ತರ ವಿಭಾಗದ 13 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 70 ಪ್ರಕರಣಗಳನ್ನು ಭೇದಿಸಿದ ಪೊಲೀಸರು, 94 ಆರೋಪಿಗಳನ್ನು ಬಂಧಿಸಿ ಅವರಿಂದ 4.91 ಕೋಟಿ ರೂ. ಮೌಲ್ಯದ ಕಳ್ಳತನ ವಸ್ತು ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದರು. ಶುಕ್ರವಾರ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಕಳೆದ ಆರು ತಿಂಗಳಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 2 ಕೆ.ಜಿ 462 ಗ್ರಾಂ ಚಿನ್ನಾಭರಣ, 11 ಗ್ರಾಂ ಡೈಮಂಡ್ ಆಭರಣ, 2 ಕೆ.ಜಿ 381 ಗ್ರಾಂ ಬೆಳ್ಳಿ ಆಭರಣ, 64 ದ್ವಿಚಕ್ರ ವಾಹನ, 4 ತ್ರಿಚಕ್ರ ವಾಹನ, 71 ವಿವಿಧ ಕಂಪನಿಯ ಮೊಬೈಲ್ ೆನ್‌ಗಳು, 1 ಲ್ಯಾಪ್‌ಟಾಪ್, 1 ಟಿವಿ, 5 ಸಿಲಿಂಡರ್, 11 ಸಿರೆಗಳು, 45 ಕೆ.ಜಿ ಶ್ರೀಗಂಧ ಮರದ ತುಂಡುಗಳು ಸೇರಿ 34.34 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದರು.
ಮಲ್ಲೇಶ್ವರ ಠಾಣೆಯಲ್ಲಿ ದಾಖಲಾಗಿದ್ದ 14 ಪ್ರಕರಣಗಳನ್ನು ಭೇದಿಸಿದ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಶ್ರೀರಾಮಪುರ ಠಾಣೆಯ 2 ಪ್ರಕರಣ, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. (ರಾಜಾಜಿನಗರ-8 ಪ್ರಕರಣ, 8 ಆರೋಪಿಗಳು), (ಸುಬ್ರಮಣ್ಯನಗರ-3 ಪ್ರಕರಣ, ಒಬ್ಬ ಆರೋಪಿ), (ಮಹಾಲಕ್ಷ್ಮೀ ಲೇಔಟ್-2 ಪ್ರಕರಣ, 4 ಆರೋಪಿಗಳು), (ನಂದಿನಿ ಲೇಔಟ್-7 ಪ್ರಕರಣ, 3 ಆರೋಪಿಗಳು), (ಯಶವಂತಪುರ-9 ಪ್ರಕರಣ, 6 ಆರೋಪಿಗಳು), (ಆರ್‌ಎಂಸಿ ಯಾರ್ಡ್- 1 ಪ್ರಕರಣ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಜಾಲಹಳ್ಳಿ-1 ಪ್ರಕರಣ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. (ಆರ್.ಟಿ.ನಗರ-9 ಪ್ರಕರಣ, 14 ಆರೋಪಿಗಳ ಬಂಧನ), (ಸಂಜಯನಗರ-19 ಪ್ರಕರಣ, 7 ಆರೋಪಿಗಳು) ಹೆಬ್ಬಾಳ ಠಾಣೆಯ 6 ಪ್ರಕರಣಗಳನ್ನು ಪತ್ತೆಮಾಡಿ 5 ಜನ ಆರೋಪಿಯನ್ನು ಬಂಧಿಸಿದ್ದಾರೆ.
ಜನರ ಆಸ್ತಿ-ಪಾಸ್ತಿ ಹಾಗೂ ಅವರಿಗೆ ಸಂಬಂಧಿಸಿದ ವಸ್ತುಗಳಿಗೆ ರಕ್ಷಣೆ ನೀಡುವುದು ಇಲಾಖೆಯ ಜವಾಬ್ದಾರಿ. ಆಕಸ್ಮಿಕವಾಗಿ ಅವುಗಳನ್ನು ಕಳೆದುಕೊಂಡಾಗ ಇಲ್ಲವೇ ಕಳ್ಳತನ ಆದಾಗ ಅವನ್ನು ಪತ್ತೆ ಮಾಡಿ ವಾರಸುದಾರರಿಗೆ ತಲುಪಿಸುವುದು ಪೊಲೀಸ್ ಧರ್ಮ.
— B.S ನೇಮಗೌಡ | ಡಿಸಿಪಿ, ಉತ್ತರ ವಿಭಾಗ