Steps for the development of the education sector 
ರಾಜ್ಯ

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕ್ರಮ

ಬೂದಿಕೋಟೆ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದಾನಿಗಳು ಮುಂದೆ ಬಂದು ಶಾಲಾ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.
ಹೋಬಳಿಯ ಮಾಗೊಂದಿ ಗ್ರಾಮದಲ್ಲಿ ಸೆಂಟ್​ ಫಿಲೋಮಿನಾ ಸಿಬಿಎಸ್​ಸಿ ಶಾಲೆಯ ಅಧ್ಯಕ್ಷ ಚಂದ್ರಯ್ಯ, ವಿಆರ್​ ಬಿಲ್ಡರ್ಸ್​ ರಮೇಶ್​ ನಾಯ್ಡು, ಲಕ್ಷಿ$್ಮ ವೆಂಕಟೇಶ್ವರ ಟ್ರೇಡರ್ಸ್​ ರಾಮನಾಥ್​ ತಮ್ಮ ಸ್ವಂತ ಜಾಗದಲ್ಲಿ ಸರ್ಕಾರಿ ಶಾಲೆಗಾಗಿ 4.50 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿ ಹಾಗೂ ಶೌಚಗೃಹ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ದಾನ ಮಾಡಿದರೂ ಕಾಲಕ್ರಮೇಣ ಜನರು ಮರೆತುಬಿಡಬಹುದು. ಆದರೆ ಶಿಕ್ಷಣಕ್ಕೆ ಮಾಡಿದ ದಾನ ಎಂದಿಗೂ ಮರೆಯಲಾಗದು. ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂಬ ಉದ್ದೇಶದಿಂದ ದಾನಿಗಳು ಕೊಠಡಿಗಳನ್ನು ಜತೆಗೆ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್​, ಪೆನ್ಸಿಲ್​ ವಿತರಿಸುತ್ತಿರುವುದು ಸಂತಸದ ಸಂಗತಿ. ಗ್ರಾಮದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಿ ಸಮಾಜ ಸೇವೆ ಸಲ್ಲಿಸಬೇಕು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೊರತೆ ಉಂಟಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಧಾರ್ಮಿಕ ವೈಭವದಲ್ಲಿ ಪ್ರತಿಷ್ಠಾಪನಾ ಮಹೋತ್ಸವ: ಗ್ರಾಮದಲ್ಲಿ ನೂತನವಾಗಿ ನಿಮಾರ್ಣಗೊಂಡ ಗಂಗಾಂಬಿಕೆ, ಕಾಟೇರಮ್ಮ, ಮುನೇಶ್ವರಸ್ವಾಮಿ ದೇವಸ್ಥಾನಗಳ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು. ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ, ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದರ್ಶನ ಪಡೆದರು.