- ಸಿದ್ದರಾಮಯ್ಯಗೆ ಶಾಸಕ ಕಂದಕೂರ ಪ್ರಶ್ನೆ
- ಸಿಎಂ ರಾಜ್ಯಕ್ಕೆ, ಮೈಸೂರು ಜಿಲ್ಲೆಗೋ ?
ಯಾದಗಿರಿ: ತಾವು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ ಅಥವಾ ನಿಮ್ಮ ತವರು ಮೈಸೂರು ಜಿಲ್ಲೆಯ ಮುಖ್ಯಮಂತ್ರಿಯೋ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.ಕಾರಣ, ಗಿರಿಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಕಳೆದ ಮಾ.29ರಂದು ನಾಲ್ವರು ಮಕ್ಕಳು ಧಾರುಣವಾತಿ ಮೃತಪಟ್ಟಿದ್ದಾರೆ, ಕಳೆದ ಏ.17ರಂದು ಶಾಂತಪುರ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಜನರು ಮೃತಪಟ್ಟರು. ಈ ಎರಡು ಮನಕಲುಕುವ ಈ ಎರಡು ಟನೆಗಳು ಸಂಭವಿಸಿದರೂ ಸಿಎಂ ಸಿದ್ದರಾಮಯ್ಯ ಅವರು ಕನಿಷ್ಠ ಪ್ರಜ್ಞೆಯಿಂದ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲಿಲ್ಲ, ಮುಖ್ಯಮಂತ್ರಿಗಳಾಗಿ ಪರಿಹಾರನೂ ೂಷಣೆ ಮಾಡಲಿಲ್ಲ. ಆದರೇ ಕಳೆದ 19ರಂದು ಮೈಸೂರು ಜಿಲ್ಲೆಯಲ್ಲಿ ಕೆರೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಕೂಡಲೇ ಸಾಂತ್ವನ ಹೇಳುವುದರ ಜತೆ ಪ್ರತಿಯೊಬ್ಬರಿಗೂ ತಲಾ ಐದು ಲಕ್ಷ ರೂ. ಪರಿಹಾರ ೂಷಣೆ ಮಾಡಿದ್ದಿರಿ. ಇದು ಯಾವ ನ್ಯಾಯ ಸಿದ್ದರಾಮಯ್ಯನವರೇ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ತರಹ ನಡೆದುಕೊಂಡಿದ್ದು ನಿಮ್ಮ ಆತ್ಮ ಸಾಕ್ಷಿ ಒಪ್ಪುತ್ತದೆಯೇ ಎಂದು ಶಾಸಕ ಶರಣಗೌಡ ಕಂದಕೂರ ಪತ್ರದಲ್ಲಿ ನೇರ ಚಾಟಿ ಬೀಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮೃತಪಟ್ಟವರು ಸಹ ಮನುಷ್ಯರೇ, ಗಿರಿಜಿಲ್ಲೆಯಲ್ಲಿ ಮೃತಪಟ್ಟವರು ಸಹ ಮನುಷ್ಯರೇ. ಅವರೇ ಸಾಂತ್ವನ ಹೇಳಿ, ಪರಿಹಾರ ೂಷಿಸಿದ್ದು ತಪ್ಪು ಅಂತ ನಾನು ಹೇಳುತ್ತಿಲ್ಲ, ಆದರೇ ಹೀಗೆ ಮಲತಾಯಿ ದೋರಣೆ ಮಾಡುವುದು ಬಿಟ್ಟು ನಗನೂರಿನ ಕೃಷಿಹೊಂಡದಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ಕೂಡಲೇ ತಲಾ 5 ಲಕ್ಷ ರೂ. ಪರಿಹಾರ ೂಷಣೆ ಮಾಡಿರಿ ಎಂದು ಮನವಿಯಲ್ಲಿ ಕೋರಿದ್ದಾರೆ.