ಔರಾದ್​ ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮ ಮತ್ತು ರಾಷ್ಟ್ರೀಯ ಧ್ವಜ ದಿನ ಕಾರ್ಯಕ್ರಮದಲ್ಲಿ ಪಿಎಸ್​ಐ ದಿನೇಶ್​ ಎಂ.ಟಿ., ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ದ್ರಾಕ್ಷಾಯಿಣಿ ಸ್ವಾಮಿ, ಪ್ರಿಯಾಂಕ ಗೊನ್ನಳಿಕರ್​, ಗುಪ್ರೀರ್ತ್​ ಕೌರ್​, ಶೇಷರಾವ್​, ಏಕನಾಥ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ವನದೇವಿ ಎಕ್ಕಳೆ, ಶಿಲಾದಾರ ಉಚಬಾಳ ಇದ್ದರು. 
ರಾಜ್ಯ

ಮಾದಕ ವಸ್ತುಗಳಿಂದ ದೂರವಿರಿ

 ಔರಾದ್​: ಮಾದಕ ವಸ್ತುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು. ಕೆಟ್ಟ ವ್ಯಸನಗಳಿಗೆ ಬಲಿಯಾಗದಂತೆ ತಮ್ಮ ಜೀವನ ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಪಿಎಸ್​ಐ ದಿನೇಶ್​ ಎಂ.ಟಿ. ಹೇಳಿದರು.
ತಾಲೂಕಿನ  ಸಂತಪುರ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಮಾದಕ ವಸ್ತುಗಳ ಸೇವನೆಯಿಂದ  ಆಗುವ  ದುಷ್ಪರಿಣಾಮ ಹಾಗೂ ರಾಷ್ಟ್ರೀಯ ಧ್ವಜ ದಿನ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಇದಕ್ಕೆ ದಾಸರಾದ ವ್ಯಕ್ತಿಗಳ ಕುಟುಂಬಗಳು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಹಾಳು ಮಾಡಿಕೊಳ್ಳುವುದಲ್ಲದೆ, ಇಡೀ ಬದುಕು  ಸರ್ವನಾಶ ಆಗುತ್ತಿದೆ. ಯುವ ಜನತೆ ಇಂತಹ ದುಷ್ಟ ವ್ಯಸನಗಳಿಂದ ದೂರ ಇರುವಂತೆ ಎಲ್ಲರಿಗೂ ಜಾಗರೂಕತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಮುಖ್ಯಗುರು  ದ್ರಾಕ್ಷಾಯಿಣಿ ಸ್ವಾಮಿ, ಉಪನ್ಯಾಸಕಿ ಪ್ರಿಯಾಂಕ ಗೊನ್ನಳಿಕರ್​ ಮಾತನಾಡಿದರು. ಪ್ರಾಂಶುಪಾಲೆ ಗುಪ್ರೀರ್ತ್​ ಕೌರ್​,  ಎಎಸ್​ಐಗಳಾದ ಶೇಷರಾವ್​, ಏಕನಾಥ, ಉಪನ್ಯಾಸಕರಾದ ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ವನದೇವಿ ಎಕ್ಕಳೆ, ಶಿಲಾದಾರ ಉಚಬಾಳ, ಶಿವಪುತ್ರ ಧರಣಿ, ಅಶ್ವಿನಿ ಹಿಂದೊಡ್ಡಿ, ರಾಜಕುಮಾರ ಹಳ್ಳಿಕರ್​, ಮಹಾಂತೇಶ ಪಾಂಚಾಳ, ಸುಧೀರ ಆಲೂರೆ, ಸಂತೋಷ ಧೂಳ್ಗೊಂಡೆ, ಬಾನುಪ್ರಕಾಶ ಇದ್ದರು.