ಮಹಾಗಾಂವ್ ಕ್ರಾಸ್ ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಶಿವಪ್ರಭು ಪಾಟೀಲ್, ಪ್ರೊ.ಶಾರದಾದೇವಿ ಜಾಧವ್, ಪ್ರೊ.ಶರಣಪ್ಪ ಮಾಳಗಿ, ಗೋರಕನಾಥ ಶಾಖಾಪುರೆ, ಗಿರೀಶ ಮಾಲಿಪಾಟೀಲ್ ಇತರರಿದ್ದರು.
- ವಿದ್ಯಾರ್ಥಿಗಳಿಗೆ ಶಿವಪ್ರಭು ಪಾಟೀಲ್ ಕಿವಿಮಾತು
- ಸರ್ಕಾರಿ ಪದವಿ ಕಾಲೇಜಿನಲ್ಲಿ ಸಮಾರಂಭ
ಕಮಲಾಪುರ: ಇಂದಿನ ಆಧುನಿಕ ಮತ್ತು ತಂತ್ರಾನದ ಯುಗದಲ್ಲಿ ಪ್ರತಿಭಾವಂತರಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸಾಧನೆಯ ಶಿಖರ ಹತ್ತಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಹೇಳಿದರು.
ಮಹಾಗಾಂವ್ ಕ್ರಾಸ್ ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಎ, ಬಿಕಾಂ, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ವಿವಿಧ ಟಕಗಳ ಸಮಾರೋಪ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ, ಆದರೆ ಪ್ರತಿಭೆಗಳು ಕಮ್ಮಿಯಿಲ್ಲ. ವಿದ್ಯಾರ್ಥಿಗಳು ದುಶ್ಚಟ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ನಿರಂತರ ಅಧ್ಯಯನ ಹಾಗೂ ಕಠಿಣ ಅಭ್ಯಾಸದ ಮೂಲಕ ಅತ್ಯುನ್ನತ ಹುದ್ದೆ ಅಲಂಕರಿಸಬಹುದು ಎಂದರು.
ಕಲಬುರಗಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಪೋ.ಶಾರದಾದೇವಿ ಜಾಧವ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ, ನಿರಂತರ ಪ್ರಯತ್ನ, ತಾಳ್ಮೆ, ಮಾನವೀಯ ಮೌಲ್ಯಗಳು ಅಳವಡಿಸಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹನೀಯರ ಆದರ್ಶ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಪ್ರೊ.ಶರಣಪ್ಪ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗೋರಕನಾಥ ಶಾಖಾಪುರೆ, ಗಿರೀಶ ಮಾಲಿಪಾಟೀಲ್, ಮಲ್ಲಿಕಾರ್ಜುನ ಮರತೂರಕರ್, ಪೊ.ಮಹಾದೇವಪ್ಪ ಚವ್ಹಾಣ್, ಪೊ.ಕರಿಗೂಳೇಶ್ವರ, ಡಾ.ಸತೀಶಕುಮಾರ, ಸುರೇಶ ಲೇಂಗಟಿ, ನರೇಶ ಹರಸೂರಕರ, ಶ್ರೀಕಾಂತ ಪಾಟೀಲ್ ಇತರರಿದ್ದರು.
2023&24ನೇ ಸಾಲಿನ ಸ್ನಾತಕೋತ್ತರ ಪದವಿ ಎಂಎ ಇತಿಹಾಸ ವಿಭಾಗದಲ್ಲಿ ಗುಲ್ಬರ್ಗ ವಿವಿಗೆ ಮೊದಲ ರ್ಯಾಂಕ್ ಪಡೆದ ಆಶಾ ಹಾಗೂ ಎರಡನೇ ರ್ಯಾಂಕ್ ಪಡೆದ ದಾಕ್ಷಾಯಿಣಿ ಪಾಟೀಲ್ ಅವರನ್ನು ಸತ್ಕರಿಸಲಾಯಿತು. ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ ಪ್ರೊ.ಕರಿಗೂಳೇಶ್ವರ, ಡಾಕ್ಟರೇಟ್ ಪದವಿ ಪಡೆದ ಹಸ್ಮಾನಿಯಾ, ಅಂಕುರ ವಾರ್ಷಿಕ ಸಂಚಿಕೆ ಲೇಖಕಿ ಸಾವಿತ್ರಿ ಮಠ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.