ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್​ ನಲ್ಲಿರುವ ವಚನ ಕೋಚಿಂಗ್​ ಸೆಂಟರ್​ ನಲ್ಲಿ ಹಮ್ಮಿಕೊಂಡ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ 10ನೇ ಮತ್ತು ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭವನ್ನು ತಹಸೀಲ್ದಾರ್​ ಮಹಮದ್​ ಮೋಹಸಿನ್​ ಉದ್ಘಾಟಿಸಿದರು, ತಾಪಂ ಇಓ ರಮೇಶ್​ ಪಾಟೀಲ್​, ಸಿಪಿಐ ಶಿವಶಂಕರ ಸಾಹು, ಕಸಾಪ ತಾಲ್ಲೂಕು ಅಧ್ಯ ಸುರೇಶ ಲೇಂಗಟಿ, ದಾಸಿಮಯ್ಯ ವಡ್ಡನಕೇರಿ , ನಾಗಣ್ಣ ಬಡಿಗೇರ, ಮಹಾದೇವ ಬಡಾ ಇತರರು ಇದ್ದರು. 
ರಾಜ್ಯ

ಮಹಾಗಾಂವ ಕ್ರಾಸ್​ ನಲ್ಲಿ ತಹಶಿಲ್ದಾರ ಮಹಮ್ಮದ್​ ಮೊಹಸಿನ್​ ಹೇಳಿಕೆ.

ಪ್ರಮುಖ ಮುಖ್ಯಾಂಶಗಳು

  • ಸಾಟ್​9ಕಟ್​ ದಾರಿ ಬಿಟ್ಟು , ಹಾಡ್​9 ವಕ್​9 ಮಾಡಿದರೆ ಅಧಿಕಾರಿಗಳಾಗುತ್ತಿರಿ.
ಕಮಲಾಪುರ: ಆಧುನಿಕ ತಂತ್ರಾನ ಯುಗದಲ್ಲಿ ಇರುವ ನೀವುಗಳು ರ್ನಿದಿಷ್ಟ ಗುರಿ ಸಾಧನೆಗಾಗಿ ವಾಮ ಮಾರ್ಗ ಅನುಸರಿಸದೇ ಹಾರ್ಡ್​ ವರ್ಕ್​ ಮಾಡಿದರೆ ಅಧಿಕಾರಿಗಳಾಗಿ ನೇಮಕವಾಗುತ್ತೀರಿ ದುಶ್ಚಟಗಳಿಂದ ದೂರವಿದ್ದು ಸ್ವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಯಾವುದೇ ಹುದ್ದೆ ಸ್ಥಾನದಲ್ಲಿ ಇದ್ದರೂ ಸಹ ನಮ್ಮ ಕನ್ನಡ ಭಾಷೆ ಉಳಿಸಿ ಬೆಳೆಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಕಮಲಾಪುರ ತಹಸಿಲ್ದಾರ್​ ಮಹಮದ್​ ಮೊಹಸಿನ್​ ಹೇಳಿದರು.
ಮಂಗಳವಾರ ತಾಲೂಕಿನ ಮಹಾಗಾವ್​ ಕ್ರಾಸ್​ ನಲ್ಲಿರುವ ವಚನ ಕೋಚಿಂಗ್​ ಸೆಂಟರ್​ ನಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಟಕ ವತಿಯಿಂದ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ, ಹಿರಿಯ ಸದಸ್ಯರಿಗೆ ಸತ್ಕಾರ ಹಾಗೂ ಹತ್ತನೇ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಕಸಾಪ ಕೊಡುಗೆ ಅಪಾರವಾಗಿದೆ ನಾನು ಉರ್ದು ಮಾಧ್ಯಮದಲ್ಲ್​ಿ ಶಿಣ ಪಡೆದು ಹೈಸ್ಕೂಲ್​ ಶಿಕನಾಗಿ ನೇಮಕವಾಗಿದ್ದೆ , ಕೆ ಎಸ್​ ಪರೀೆ ಬರೆಯುವಾಗ ಕನ್ನಡ ಭಾಷೆಯ ಐತಿಹಾಸಿಕ ಹಿನ್ನೆಲೆ , ಪರಂಪರೆ ಸೊಗಡನ್ನು ಕಂಡು ನಾನು ಕನ್ನಡ ಭಾಷೆ ಕಲಿತಿದ್ದು ಇಂದು ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಹಾಗೂ ಕುಟುಂಬ ಸಹ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದೇವೆ ಎಂದರು.
ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್​ ಪಾಟೀಲ್​ ಮಾತನಾಡಿ ಕನ್ನಡ ನಾಡು ನುಡಿ ನೆಲ ಜಲ ಕೆ ಸತ್ಯ ಉಂಟಾದಾಗ ಅದನ್ನು ವಿರೋಧಿಸಿ ಮುಂದಿನಗೆ ಬರುವ ಯಾವುದಾದರೂ ಸಂಸ್ಥೆ ಇದ್ದರೆ ಅದು ಕನ್ನಡ ಸಾಹಿತ್ಯ ಪರಿಷತ್ತು ಈ ಸಂಸ್ಥೆ ನಿರಂತರವಾಗಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಮೂಲಕ ರ್ನಿದಿಷ್ಟ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.
ಕಮಲಾಪುರ ಸಿಪಿಐ ಶಿವಶಂಕರ ಸಾಹು ಮಾತನಾಡಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೆಂದು ಕೀಳರಿನೇ ಬೇಡ ನಾನು ಸಹ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿ ಪೊಲೀಸ್​ ಸಬ್​ ಇನ್ಸೆ$್ಪಕ್ಟರ್​ ಆಗಿ ಇವತ್ತು ಸರ್ಕಲ್​ ಇನ್ಸೆ$್ಪಕ್ಟರ್​ ಆಗಿ ಸೇವಿಸಲ್ಲಿ ಸುತ್ತಿದ್ದೇನೆ ಕನ್ನಡ ಭಾಷೆ ಮಾಧ್ಯಮದಲ್ಲಿ ಶಿಣ ಪಡೆದವರು ಎಲ್ಲಾ ಹುದ್ದೆಗಳನ್ನು ಅಲಂಕರಿಸಲು ಸಾಮರ್ಥ್ಯ ಪಡೆಯುತ್ತಾರೆ ಪ್ರಸ್ತುತವಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಹೆತ್ತವರ ಈ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ತದನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರುಗಳಿಗೆ ಸತ್ಕರಿಸಲಾಯಿತು.
2025&26 ನೇ ಸಾಲಿನ ಹತ್ತನೇ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯ ಸುರೇಶ್​ ಅಂಗಡಿ ಪ್ರಾಸ್ತವಿಕವಾಗಿ ಮಾತನಾಡಿದರು ಮೌಂಟ್​ ವೇವ್​ ಪಿಯು ಕಾಲೇಜಿನ ಪ್ರಾಂಶುಪಾಲ ಮಹದೇವ್​ ಬಡಾ ನಿರೂಪಿಸಿದರು, , ಪ್ರೀತಿ, ಸುಸ್ಮಿತಾ ಮತ್ತು ಕೋಮಲ ಪ್ರಾರ್ಥಿಸಿದರು, ಕಸಾಪ ಪ್ರತಿನಿಧಿ ಸಂಜಯಕುಮಾರ್​ ನಾಟಿಕರ್​ ಸ್ವಾಗತಿಸಿದರು , ಅನಂತಕುಮಾರ್​ ಪಾಟೀಲ್​ ವಂದಿಸಿದರು.
ಈ ಸಂದರ್ಭ ದಲ್ಲಿ ಕಮಲಾಪುರ ಕಸಾಪ ನಿಕಟ ಪೂರ್ವ ಅಧ್ಯ ದಾಸಿಮಯ್ಯ ವಡ್ಡನಕೇರಿ, ಹಿರಿಯ ಸಾಹಿತಿ ನಾಗಣ್ಣ ವಿಶ್ವಕರ್ಮ, ತಾಲ್ಲೂಕು ಶಿಕರ ಸಂದ ನೂತನ ಸದಸ್ಯ ಮೆಹಬೂಬ್​ ಮಡಕಿ, ಶರಣಬಸಪ್ಪ ದೋಣಿ ಸುಗೂರ, ರಾಜಣ್ಣ ಮಾಸ್ತರ್​, ಕುಶ್​ ಮಂಠಾಳ, ಸಂತೋಷ ಪಾಟೀಲ್​, ಸುರೇಶ ಕಲಶೆಟ್ಟಿ, ಪ್ರೇಮಾ ಅಂತಪನಾಳ, ಕಾವೇರಿ, ಭಾಗ್ಯಶಿ ಇತರರು ಇದ್ದರು.