ಆನೇಕಲ್​ ತಾಲೂಕಿನ ಅಲಯನ್ಸ್​ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯಕ್ಷಗಾನ ಪ್ರದರ್ಶನ ನಡೆಯಿತು. 
ರಾಜ್ಯ

ಅಲಯನ್ಸ್​ ವಿವಿಯಲ್ಲಿ ರಾಜ್ಯೋತ್ಸವ ಸಂಭ್ರಮ / ANEKAL

ಆನೇಕಲ್​ : ಪಟ್ಟಣಕ್ಕೆ ಸಮೀಪದ ಅಲಯನ್ಸ್​ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾ ಕೇಂದ್ರ, ಭಾಷೆ ಮತ್ತು ಸಾಹಿತ್ಯ ವಿಭಾಗದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಕಲರವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎರಡು ಗಂಟೆಗೂ ಹೆಚ್ಚು ಕಾಲ ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು. ಯಕ್ಷಗಾನ ಮತ್ತು ಹುಲಿ ಕುಣಿತ ಕಲಾವಿದರ ಆಕರ್ಷಕ ಪ್ರದರ್ಶನ ನೀಡಿದರು. ಡೊಳ್ಳುಕುಣಿತ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾವಿದರು ಪ್ರದರ್ಶನ ನೀಡಿದರು. ಕನ್ನಡ ಕಲವರದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇಷಭೂಷಣ, ಆಶುಭಾಷಣ, ಭಾಷಣ, ಪ್ರಬಂಧ, ಕವನ ರಚನೆ, ಗಾಯನ, ರಂಗೋಲಿ, ರಸಪ್ರಶ್ನೆ, ಕನ್ನಡ ಸಂಭಾಷಣೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಯಕ್ಷ ಸಂಭ್ರಮ ಕಲಾ ತಂಡದ ಯಕ್ಷಗಾನ ಪ್ರದರ್ಶನ ಹಾಗೂ ಡೊಳ್ಳು ಚಂದ್ರು ಹಾಗೂ ಕಲಾ ತಂಡದ ವತಿಯಿಂದ ಡೊಳ್ಳು ಕುಣಿತ ಹಾಗೂ ಹುಲಿವೇಷ ಪ್ರದರ್ಶನದಿಂದ ಶಾಸಿಯ ಹಾಗೂ ಜಾನಪದ ಕಲೆಗಳ ಸಮಾಗಮಕ್ಕೆ ಕನ್ನಡ ರಾಜ್ಯೋತ್ಸವ ಸಮಾರಂಭ ಸಾಯಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಶ್ವವಿದ್ಯಾಲಯದಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ವಿವೇಕಾನಂದ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲಯನ್ಸ್​ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಶೈಲ ಚೆಬ್ಬಿ, ಗ್ರಂಥಪಾಲಕ ಡಾ.ಪ್ರಕಾಶ್​, ಸಹಾಯಕ ಪ್ರಾಧ್ಯಾಪಕ ಡಾ.ವಿವೇಕಾನಂದ್​ ಸಜ್ಜನ್​, ಕಸನಿಯಾ ನಾಯಕ್​ ಇದ್ದರು.
"

ಮಾತೃಭಾಷೆ ಅತ್ಯಂತ ಮುಖ್ಯವಾಗಿದೆ. ಮಾತೃಭಾಷೆಯಿಂದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಕನ್ನಡ ಉಳಿಸಬೇಕಾದರೆ ಮತ್ತು ಬೆಳೆಸಬೇಕಾದರೆ ಕನ್ನಡವನ್ನು ಬಳಸಬೇಕಾದ ಅವಶ್ಯಕತೆಯಿದೆ. ಕನ್ನಡೇತರರಿಗೆ ಕನ್ನಡ ಕಲಿಸುವ ಸಂಕಲ್ಪವನ್ನು ಕನ್ನಡಿಗರ ಮಾಡಬೇಕಾಗಿದೆ.

ಕಾನೂನು ೇತ್ರದಲ್ಲಿ ಕನ್ನಡ ಹೆಚ್ಚು ಬಳಕೆಯಾಗಬೇಕು. ಇದರಿಂದಾಗಿ ಕದಾರರಿಗೆ ಸಾರ್ವಜನಿಕರಿಗೆ ಕಾನೂನು ಅರ್ಥವಾಗುತ್ತದೆ. ಕಾನೂನು ಕನ್ನಡದಲ್ಲಿ ಬರುವಂತಾಗಲು ಕಾನೂನು ಕನ್ನಡ ಶಬ್ಧಕೋಶವನ್ನು ರಚಿಸಬೇಕು.