ವಿಧಾನಸೌಧ 
ರಾಜ್ಯ

ಪಿಎಂಎಫ್ ಎಂಇ ಸಾಲ ವಿತರಣೆಯಲ್ಲಿ ರಾಜ್ಯ 2ನೇ ಸ್ಥಾನ

ಬೆಂಗಳೂರು: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆಯಡಿ ಸಾಲ ವಿತರಣೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ವಿಧಾನಸೌಧದಲ್ಲಿ ಆಯೋಜಿಸಿದ್ದ 175ನೇ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಸಭೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಾಧನೆಗಳು, ಸವಾಲುಗಳು ಮತ್ತು ಮುಂಬರುವ ಸಾಲಿನ ಮಹತ್ವದ ಸಾಲ ಯೋಜನೆಗಳನ್ನು ಚರ್ಚಿಸಲಾಯಿತು.
ಪಿಎಂಎಫ್ ಎಂಇ ಯೋಜನೆ ಅನುಷ್ಠಾನದ ನೋಡಲ್ ಏಜೆನ್ಸಿಯಾಗಿರುವ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರ್ತು ನಿಗಮ(ಕೆಪೆಕ್) ಪರಿಶ್ರಮದಿಂದ ದೇಶದಲ್ಲಿಯೇ ಪಿಎಂಎ್ಎಂಇ ಯೋಜನೆಯಡಿ ಸಾಲ ಮಂಜೂರಾತಿಯಲ್ಲಿ 6ನೇ ಸ್ಥಾನ ಮತ್ತು ಸಾಲ ವಿತರಣೆಯಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ, ಪಿಎಂಎಸ್‌ವಿಎ ನಿಧಿ ಯೋಜನೆಯಡಿ ಸಾಲ ವಿತರಣೆಯಲ್ಲಿ ದೇಶದಲ್ಲಿ ಕರ್ನಾಟಕ 7ನೇ ಸ್ಥಾನ ಪಡೆದರೆ, ಮುದ್ರಾ ಯೋಜನೆಯಡಿ 6ನೇ ಸ್ಥಾನವನ್ನು ಕಾಯ್ದುಕೊಂಡಿದೆ. 2026ರ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಬ್ಯಾಂಕ್ ಠೇವಣಿಗಳ ಬೆಳವಣಿಗೆ ದರವು ಶೇ.13.31 ಇದ್ದು, ರಾಷ್ಟ್ರೀಯ ಸರಾಸರಿಗಿಂತ (ಶೇ. 13.47) ಅಲ್ಪ ಕಡಿಮೆಯಾಗಿದೆ. ಸಾಲದ ಬೆಳವಣಿಗೆ ದರವು ಶೇ.12.77 ದಾಖಲಾಗಿದ್ದು, ರಾಷ್ಟ್ರೀಯ ಸರಾಸರಿ ಶೇ.16.08ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.