State-level kite festival in Doddaballapura tomorrow 
ರಾಜ್ಯ

ನಾಳೆ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಗಾಳಿಪಟ ಉತ್ಸವ

ದೊಡ್ಡಬಳ್ಳಾಪುರ:

ನಗರದ ಭಗತ್​ ಸಿಂಗ್​ ಕ್ರೀಡಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್​ ಮತ್ತು ಗಾಳಿಪಟ ಕಲಾ ಸಂದಿಂದ

ಆ.2ರಂದು ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂದ ಅಧ್ಯಕ್ಷ ಎಲ್​.ಎನ್​. ಶ್ರೀನಾಥ್​ ತಿಳಿಸಿದರು.

ನೇಕಾರ ಉದ್ಯಮದ ತವರೂರಾಗಿರುವ ದೊಡ್ಡಬಳ್ಳಾಪುರದ ಅತ್ಯಂತ ಪ್ರಾಚಿನ ಹಾಗೂ ಜನಪ್ರಿಯ ಕಲೆ ಗಾಳಿಪಟ ತಯಾರಿಸುವ ಹಾಗೂ ಹಾರಿಸುವುದನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಗಾಳಿಪಟ ಕಲಾ ಸಂವು ಕಳೆದ 19 ವರ್ಷಗಳಿಂದ ಗಾಳಿಪಟ ಉತ್ಸವ ಹಾಗೂ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಈ ಬಾರಿಯೂ ಶಾಲಾ ಮಕ್ಕಳಿಗಾಗಿ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ವಿಭಾಗಗಳಲ್ಲಿ ಸ್ಪರ್ಧೆ

ರಾಜ್ಯದ ವಿವಿಧ ಭಾಗಗಳಿಂದ ಶಾಲಾ ಮಕ್ಕಳು ಭಾಗವಹಿಸಲಿದ್ದು, ಬಾಲಕ ಮತ್ತು ಬಾಲಕಿಯರು ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಶಾಲಾ ಗುರುತಿನ ಚೀಟಿ ಅಥವಾ ಸಮವಸ್ತ್ರದೊಂದಿಗೆ ಹಾಜರಾಗಿ, ಹೆಸರು ನೋಂದಾಯಿಸಿಕೊಳ್ಳಬಹುದು.

ಜಾನಪದ ತ ಎಚ್​.ಎಲ್​.ನಾಗೇಗೌಡ ಅವರ ಆಸಕ್ತಿ ಮತ್ತು ಪರಿಶ್ರಮದಿಂದ ಸ್ಥಾಪನೆಯಾದ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂವು ಯುನೆಸ್ಕೋ ಮಾನ್ಯತೆ ಪಡೆದಿದ್ದು, ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ತಾಲೂಕಿಗೆ ಹೆಮ್ಮೆ ಎಂದರು.
ಗಾಳಿಪಟ ಕಲಾಸಂದ ಕಾರ್ಯದರ್ಶಿ ಎ.ಎನ್​.ಪ್ರಕಾಶ್​ ಮಾತನಾಡಿ, ಗಾಳಿಪಟ ಸ್ಪರ್ಧೆಯನ್ನು ಶಾಸಕ ಧೀರಜ್​ ಮುನಿರಾಜ್​ ಉದ್ಘಾಟಿಸಲಿದ್ದು, ಸಂದ ಅಧ್ಯಕ್ಷ ಎಲ್​.ಎನ್​. ಶ್ರೀನಾಥ್​ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್​ ಅಧ್ಯಕ ಪ್ರೊ.ಹಿ.ಚಿ.ಬೋರಲಿಂಗಯ್ಯ, ಮ್ಯಾನೇಜಿಂಗ್​ ಟ್ರಸ್ಟಿ ಆದಿತ್ಯ ನಂಜರಾಜ್​, ಜಿಲ್ಲಾ ಟಕದ ಅಧ್ಯಕ್ಷ ಎ.ಎನ್​. ಪ್ರಕಾಶ ಉಪಸ್ಥಿತಲಿರಲಿದ್ದಾರೆ. ಇನ್ನು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯೆ ಪ್ರಭಾ ನಾಗರಾಜ್​, ಉಪಾಧ್ಯಕ್ಷ ವೆಂಕಟೇಶ್​.ಆರ್​ ಮತ್ತಿರರು ಭಾಗವಹಿಸಲಿದ್ದು, ವಿವಿಧ ೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.