ಕಲಬುರಗಿ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ರಾಜ್ಯಮಟ್ಟದ 'ಕನಕ ಕವನ ಸ್ಪರ್ಧೆ ಏರ್ಪಡಿಸಲು ಉದ್ದೇಶಿಸಿದ್ದು, 18 ರಿಂದ 30 ವರ್ಷ ವಯೋಮಿತಿಯುಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವರಚಿತ ಕವನವನ್ನು ಆಹ್ವಾನ ನೀಡಿದ ದಿನಾಂಕದಿಂದ ಎರಡು ತಿಂಗಳ ಒಳಗೆ ಅಂದರೆ 2026ರ ಜೂನ್ 22 ರೊಳಗಾಗಿ ಸ್ಪರ್ಧೆಗೆ ಒಂದು ಕವನವನ್ನು ರಚಿಸಿ ಕಳುಹಿಸಿಕೊಡಬೇಕು. ಭಾಗವಹಿಸುವ ಸ್ಪರ್ಧಿಯು ಅರ್ಜಿ ಮತ್ತು ಕವನವನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ಇಲ್ಲಿಗೆ ಅರ್ಜಿಯನ್ನು ಅಂಚೆ/ಕೊರಿಯರ್/ಇ-ಮೇಲ್ ಅಥವಾ ಖುದ್ದಾಗಿ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆಯನ್ನು https://kanakadasaresearchcenter.karnataka.gov.in/ ವೆಬ್‍ಸೈಟ್‍ನಲ್ಲಿ ಡೌನಲೋಡ್ ಮಾಡಿ ಪಡೆಯಬಹುದಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ 9743545865ಗೆ ಸಂಪರ್ಕಿಸಲು ಕೋರಲಾಗಿದೆ.