ವಿಜಯಪುರ ನಗರದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಕುಮಾರ ಬಂಗಾರಪ್ಪ, ಜಿಲ್ಲಾಧಿಕಾರಿ ಡಾ.ಆನಂದ ಕೆ ಮತ್ತಿತರರಿದ್ದಾರೆ. 
ರಾಜ್ಯ

ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ, ಬೆಂಗಳೂರು ಆಟಗಾರರ ಪ್ರಾಬಲ್ಯ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೇತೃತ್ವ
  • ಯೊನೆಕ್ಸ್ ಸನ್ ರೈಸ್ ಪ್ರಾಯೋಜಕತ್ವ
  • ಬಿಎಲ್‌ಡಿಇ ಹಾಗೂ ಜಿಲ್ಲಾಡಳಿತದ ಸಹಯೋಗ
  • ಏಳು ದಿನದ ಪಂದ್ಯಾವಳಿಗೆ ವಿದ್ಯುಕ್ತ ತೆರೆ
ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಆಟಗಾರರು ಪ್ರಾಬಲ್ಯ ಮೆರೆದಿದ್ದಾರೆ.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್ ಸನ್ ರೈಸ್ ಪ್ರಾಯೋಜಕತ್ವ, ಬಿಎಲ್‌ಡಿಇ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕಳೆದೊಂದು ವಾರದಿಂದ (ಮೇ 17 ರಿಂದ 23) ನಡೆದ ಪಂದ್ಯಾವಳಿ ಶನಿವಾರ ಸಂಪನ್ನಗೊಂಡಿತು.
ವಿಜಯಪುರ ನಗರದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.


ಬೆಂಗಳೂರಿನ ಗೌತಮ್ ಎಸ್, ನಾಯರ್, ಪಿಯೂಷ್ ತ್ರಿಪಾಠಿ, ಮಹಿತಾ ನಾಯ್ಡು ಸುರಿಸೆಟ್ಟಿ ಹಾಗೂ ಆದಿತಿ ಸುಶಾಂತ್ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದ 15 ಹಾಗೂ 17 ವರ್ಷ ವಯೋಮಿತಿಯ ಸಿಂಗಲ್ಸ್ ಪಂದ್ಯದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ 760 ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸೆಣಸಾಡಿದರು.
7 ದಿನಗಳ ಈ ಪಂದ್ಯಾವಳಿಯಿಂದ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕಿತಾದರೂ ದಕ್ಷಿಣ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಬಾಲಕ-ಬಾಲಕಿಯರೇ ಅತ್ಯುತ್ತಮ ಆಟದೊಂದಿಗೆ ಪ್ರಶಸ್ತಿ ಗಿಟ್ಟಿಸಿಕೊಂಡರು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ ಬಂಗಾರಪ್ಪ ಹಾಗೂ ಸ್ಥಳೀಯ ಗಣ್ಯರು ಪ್ರಶಸ್ತಿ ವಿತರಿಸಿದರು.

ಅಂತಿಮ ಫಲಿತಾಂಶ

ಬಾಲಕರ ಸಿಂಗಲ್ಸ್ ಯು-15 (ಬಿಎಸ್ ಯು 15) : ಗೌತಮ್ ಎಸ್. ನಾಯರ್, ಬೆಂಗಳೂರು ಅರ್ಬನ್, ಯಶವರ್ಧನ್ ಎಸ್.ಆರ್ (13), ಬೆಂಗಳೂರು ರೂರಲ್ ವಿರುದ್ಧ 21-12, 21-19 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಸಿಂಗಲ್ಸ್ ಯು-15 (ಜಿಎಸ್ ಯು 15) : ಮಹಿತಾ ನಾಯ್ಡು ಸುರಿಸೆಟ್ಟಿ (1), ಬೆಂಗಳೂರು ಅರ್ಬನ್, ಸ್ಮತಿ ಎಸ್, ಬೆಂಗಳೂರು ಅರ್ಬನ್ ವಿರುದ್ಧ 21-10, 21-7 ಅಂತರದಿಂದ ಜಯಗಳಿಸಿದರು.
ಬಾಲಕರ ಡಬಲ್ಸ್ ಯು-15 (ಬಿಡಿ ಯು 15) : ಚೇತಸ್ ಮುಂಡರ್ಗಿ, ಬೆಂಗಳೂರು ಅರ್ಬನ್ ಮತ್ತು ವಿಶಾಲ್ ಡಿ.ಆನಂದ್ ಕೊಡಗು, ಗೌತಮ್ ಎಸ್ ನಾಯರ್ ಮತ್ತು ಸಿದ್ಧಾರ್ಥ ಎಸ್. ನಾಯರ್ (5), ಬೆಂಗಳೂರು ಅರ್ಬನ್ ವಿರುದ್ಧ 14-21, 21-14, 21-16 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಡಬಲ್ಸ್ ಯು-15 (ಜಿಡಿ ಯು15) : ಹಂಸಾ ಮುರಳಿಧರ ಮತ್ತು ಮಹಿತಾ ನಾಯ್ಡು ಸುರಿಸೆಟ್ಟಿ, ಬೆಂಗಳೂರು ಅರ್ಬನ್, ಜೀವಿಕಾಹ ಸಾಯಿ ರಾಜೇಶ್‌ಕುಮಾರ್, ಬೆಂಗಳೂರು ಅರ್ಬನ್ ಮತ್ತು ಮನಿಕಾ ನವೀನ್ (2), ಬೆಂಗಳೂರು ರೂರಲ್ ವಿರುದ್ಧ 21-18, 21-15 ಅಂತರದಿಂದ ಜಯಗಳಿಸಿದರು.
ಮಿಶ್ರ ಡಬಲ್ಸ್ ಯು-15 (ಎಕ್ಸ್ ಡಿ ಯು15) : ಯಶವರ್ಧನ್ ಎಸ್ ಆರ್ ಮತ್ತು ಆದಿತಿ ಸುಶಾಂತ್ (2), ಬೆಂಗಳೂರು ರೂರಲ್, ಬಿ.ಬಿ. ವಿಶಾಲ್ ಉತ್ತಪ್ಪ ಹಾಗೂ ಹನ್ಸಿಕಾ ರಾಕೇಶ, ಮೈಸೂರು ವಿರುದ್ಧ 21-11, 21-16 ಅಂತರದಿಂದ ಜಯಗಳಿಸಿದರು.
ಬಾಲಕರ ಸಿಂಗಲ್ಸ್ ಯು-17 (ಬಿಎಸ್ ಯು 17) : ಪೀಯೂಷ್ ತ್ರಿಪಾಠಿ (3), ಬೆಂಗಳೂರು ಅರ್ಬನ್, ಡಿಲನ್ ಪಿ ತೋಕ್ಚೊಂ, ಬೆಂಗಳೂರು ಅರ್ಬನ್ ವಿರುದ್ಧ 21-19, 10-21, 21-17 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಸಿಂಗಲ್ಸ್ ಯು-17 (ಜಿಎಸ್ ಯು17) : ಆದಿತಿ ಸುಶಾಂತ್, ಬೆಂಗಳೂರು ರೂರಲ್, ಕೀರ್ತಿ ಬಾಲಾಜಿ (1), ಬೆಂಗಳೂರು ಅರ್ಬನ್ ವಿರುದ್ಧ 21-18, 21-16 ಅಂತರದಿಂದ ಜಯಗಳಿಸಿದರು.
ಬಾಲಕರ ಡಬಲ್ಸ್ ಯು-17 (ಬಿಡಿ ಯು 17) : ಮೆಹುಲ್ ಮನವ ಅರುಳ್ಮುರುಗನ್, ಬೆಂಗಳೂರು ಅರ್ಬನ್ ಹಾಗೂ ಸಾತ್ವಿಕ್ ಎಸ್ ಪ್ರಭು (2), ದಕ್ಷಿಣ ಕನ್ನಡ, ಚಿರಾಗ್ ಪ್ರಕಾಶ ಮತ್ತು ನಿಕೇತನ ಹರಿ ಎನ್‌ಡಿ, ಬೆಂಗಳೂರು ಅರ್ಬನ್ ವಿರುದ್ಧ 15-21, 21-19, 21-18 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಡಬಲ್ಸ್ ಯು-17 (ಜಿಡಿ ಯು 17) : ದಿಶಾ ರವಿ ಭಟ್ ಮತ್ತು ತನ್ವಿ ಮುನೋತ್, ಬೆಂಗಳೂರು ಅರ್ಬನ್, ರಕ್ಷಾ ಎನ್ ಮತ್ತು ಶ್ರಿಯಾ ಜೋಶಿ, ಬೆಂಗಳೂರು ಅರ್ಬನ್ ವಿರುದ್ಧ 21-11, 21-13 ಅಂತರದಿಂದ ಜಯಗಳಿಸಿದರು.
ಮಿಶ್ರ ಡಬಲ್ಸ್ ಯು-17 (ಎಕ್ಸ್ ಡಿ ಯು 17) : ಈಶ್ವರ ಸಾಯಿ ಕಟಂ ಮತ್ತು ಡೆಬೋರಾ ಜಾನ್, ಬೆಂಗಳೂರು ಅರ್ಬನ್, ಚಿರಾಗ್ ಪ್ರಕಾಶ ಮತ್ತು ತನ್ವಿ ಮುನೋತ, ಬೆಂಗಳೂರು ಅರ್ಬನ್ ವಿರುದ್ಧ 21-17, 21-16 ಅಂತರದಿಂದ ಜಯಗಳಿಸಿದರು.