ಸಚಿವ ಡಾ. ಜಿ. ಪರಮೇಶ್ವರ  
ರಾಜ್ಯ

ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಪ್ರವಾಸ

ಕಲಬುರಗಿ: ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಏಪ್ರೀಲ್ 27 ರಂದು ಸಂಜೆ 4.30 ಗಂಟೆಗೆ ಬೆಂಗಳೂರು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 5.45 ಗಂಟೆಗೆ ಹೈದರಬಾದ ವಿಮಾನ ನಿಲ್ದಾಣ ತೆಲಂಗಣ ರಾಜ್ಯಕ್ಕೆ ಆಗಮಿಸಿ ರಸ್ತೆ ಮೂಲಕ ರಾತ್ರಿ 9 ಗಂಟೆಗೆ ಕಲಬುರಗಿ ಆಗಮಿಸಿ ವಾಸ್ತವ್ಯ ಮಾಡುವರು.
ಏಪ್ರೀಲ್ 28 ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ತಾಲೂಕಿನ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ತರಬೇತಿ ಹೊಂದಿದ 13 ತಂಡದ ಪಿ.ಎಸ್.ಐ.ಗಳು(ಸಿವಿಲ್), 12ನೇ ತಂಡದ ಆರ್.ಎಸ್.ಐ/ಸ್ಪೇಆರ್‌ಎಸ್‌ಐ ಮತ್ತು 6ನೇ ತಂಡದ ಪಿ.ಎಸ್.ಐ (ಕೆಎಸ್‌ಯಎಸ್‌ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರ ಪೊಲೀಸ ಆಯುಕ್ತಾಲಯ ಕಲಬುರಗಿಯಲ್ಲಿ ಹೊಸದಾಗಿ ಖರೀದಿಸಿರುವ ಪೊಲೀಸ್ ವಾಹನಗಳಿಗೆ ಚಾಲನೆ ಮತ್ತು ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು.
ಅಂದು ಮಧ್ಯಾಹ್ನ 12 ಗಂಟೆಗೆ ಕಲಬುರಗಿ ಸಿಎಆರ್ ಕಲಬುರಗಿಯಲ್ಲಿ ಪೊಲೀಸ್ ಗೃಹ 2025 ಹಂತ 4ರ ಯೋಜನೆಯಡಿಯಲ್ಲಿ ಕಲಬರಗಿ ನಗರ ಮತ್ತು ಕಲಬುರಗಿ ಜಿಲ್ಲಾ ಪೊಲೀಸ ಘಟಕದಿಂದ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಕಾನ್ಸ್ಟೇಬಲ್ ವಸತಿ ಗೃಹಗಳ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 12 ರಿಂದ 1.00 ಗಂಟೆಯವರೆಗೆ ಸಮಯ ಕಾಯ್ದಿರಿಸಲಾಗಿದೆ.
ಅಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದ್‌ಗೆ ಪ್ರಯಾಣಿಸುವರು.