ರಾಜ್ಯ ಸರ್ಕಾರ ಟೌನ್ಶಿಪ್ ನಿರ್ಧಾರ ಕೈ ಬಿಡಲಿ state government
ಹುತ್ರಿದುರ್ಗ: state government ಅಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸತ್ವ ಗ್ರೂಪ್ನ ಸಹಭಾಗಿತ್ವದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಪಂ ವ್ಯಾಪ್ತಿಯ ಸೀನಪ್ಪನಹಳ್ಳಿಯಲ್ಲಿ ಸಿಎಸ್ಆರ್ ಅನುದಾನದಡಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕುಣಿಗಲ್ ತಾಲೂಕಿನಲ್ಲಿ ಹತ್ತು ಕಡೆಗಳಲ್ಲಿ ಶುದ್ಧ ಕುಡಿಯುವ ಘಟಕ ಸ್ಥಾಪಿಸಲಾಗಿದೆ ಹಾಗೂ ಹತ್ತು ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಿಎಸ್ಆರ್ ಅನುದಾನದಡಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ತಪಾಸಣೆ ನಡೆಸಲು ಐದು ತಾಲೂಕು ಕೇಂದ್ರದ ಆಸ್ಪತ್ರೆಗಳಿಗೆ ಯಕೋ ಯಂತ್ರ ನೀಡಲಾಗುತ್ತಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರ ಫಲವತ್ತಾದ ಭೂಮಿಯನ್ನು ಅತಿಕ್ರಮಿಸಿಕೊಂಡು ಟೌನ್ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ ಬೆಂಗಳೂರಿನಲ್ಲಿ ಮೂರು ಲಕ್ಷ ಅಪಾರ್ಟ್ಮೆಂಟ್ ಖಾಲಿ ಉಳಿದಿವೆ. ರಾಜ್ಯ ಸರ್ಕಾರ ಕೂಡಲೆ ಈ ನಿರ್ಧಾರ ಕೈ ಬಿಡಬೇಕು ಟೌನ್ಶಿಪ್ ಯಾರು ಕೇಳಿಲ್ಲ ರೈತರ ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ, ರಾಗಿ, ಜೋಳ ತರಕಾರಿಯ ಹಣ್ಣು ಬೇಳೆದು ಜೀವನ ಸಾಗಿಸುತ್ತಿರುವ ರೈತರ ಬದುಕನ್ನು ಕಸಿಯುವ ಕೆಲಸ ಮಾಡಬಾರದು ಎಂದರು.
ಕೇಂದ್ರ ಸರ್ಕಾರ ರೈತರ ರಸಗೊಬ್ಬರದ ಬೆಲೆ ಇಳಿಸಲು ತೀಮಾರ್ನ ಕೈಗೊಂಡಿದೆ. ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿದ್ದು, ಪಿಎಂ ಕಿಸಾನ್ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ನೀಡುವ ಸಾಲವನ್ನು ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ರಂಜಿತಾ ರಾಜು, ಮಾಜಿ ಅಧ್ಯಕ್ಷ ಬಿಳಿಲಿಂಗೇಗೌಡ, ಪ್ರಸನ್ನ, ಜೆಡಿಎಸ್ ವಕ್ತಾರ ತರಿಕೆರೆ ಪ್ರಕಾಶ್ ಇದ್ದರು.