Start an additional millet procurement unit 
ರಾಜ್ಯ

ಹೆಚ್ಚುವರಿ ರಾಗಿ ಖರೀದಿ ಘಟಕ ಆರಂಭಿಸಿ

ತುಮಕೂರು ಡೆಸ್ಕ್
ತುರುವೇಕೆರೆ: ತಾಲೂಕಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಕೇವಲ ಒಂದು ರಾಗಿ ಖರೀದಿ ವಾಡುವ ಟಕವಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದ್ದು, ಕೂಡಲೇ ಹೆಚ್ಚುವರಿಯಾಗಿ ಎರಡು ಖರೀದಿ ಟಕವನ್ನು ಪ್ರಾರಂಭಿಸಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಶುಭ ಕಲ್ಯಾಣ್ ರೈತರ ದೂರುಗಳನ್ನು ಆಲಿಸಿದರು. ರಾಗಿ ಖರೀದಿ ವೇಳೆ ರೈತರಿಂದ 50 ಕೆಜಿ 600 ಗ್ರಾಂ ರಾಗಿ ಖರೀದಿಸಬೇಕೆಂದು ನಿಯಮವಿದೆ. ಆದರೆ, ಇಲ್ಲಿಯ ಅಧಿಕಾರಿಗಳು ಸರಿ ಸುವಾರು 52 ಕೆಜಿ ರಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಅಲ್ಲದೇ ರೈತರಿಂದ ಪ್ರತಿ ಕ್ವಿಂಟಾಲ್ ರಾಗಿಗೆ 100 ರೂ ಹವಾಲಿ ಹಣ ಎಂದು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ತಾಲೂಕು ತೆಂಗು ಮತ್ತು ಅಡಕೆ ಬೆಳೆಗಾರರ ಸಂದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜು ಮತ್ತು ರೈತ ಸಂದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಜಿಲ್ಲಾಧಿಕಾರಿಗೆ ದೂರು ನೀಡಿದರು.
ರೈತರು ತೂಕದಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ದೂರಿದ ಮೇರೆಗೆ ದಾಸ್ತಾನು ಕೊಠಡಿಗೆ ತೆರಳಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ದಾಸ್ತಾನಿನ ಮಧ್ಯದಲ್ಲಿದ್ದ ಎರಡು ಚೀಲಗಳನ್ನು ತೂಕ ವಾಡುವಂತೆ ಸೂಚಿಸಿದರು. ಆ ವೇಳೆ ಒಂದು 51.600 ಕೆಜಿ ಬಂತು. ರಾಗಿ ಖರೀದಿ ವೇಳೆ ರೈತರೇ ತೂಕ ವಾಡಲು ರಾಗಿಯನ್ನು ಸುರಿದರೆ ಯಾವುದೇ ಹಣ ನೀಡುವಂತಿಲ್ಲ ಎಂದರು.
ಬಳಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ರೋಗಿಗಳಿಂದ ಸಮಸ್ಯೆ ಸುರಿಮಳೆ ಆಯಿತು. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಬಡವರಾಗಿರುವ ನಾವು ಹೆರಿಗೆ ವಾಡಿಸಲು ಖಾಸಗಿ ಆಸ್ಪತ್ರೆಗೆ ಹೋಗಬೇಕಿದೆ. ಸಾವಿರಾರು ರೂ. ಖರ್ಚು ವಾಡುವ ಶಕ್ತಿ ತಮಗಿಲ್ಲ. ಹಲವಾರು ಔಷಧ ಬೇರೆಡೆ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುತ್ತಾರೆ ಎಂದು ರೋಗಿಗಳು ದೂರಿದರು. ಈ ವೇಳೆ ಆಸ್ಪತ್ರೆಗೆ ಸೂಕ್ತ ಸಿಬ್ಬಂದಿ ಮತ್ತು ವೈದ್ಯರ ಕೊರತೆ ಇದೆ ಎಂದು ತಾಲೂಕು ಆಡಳಿತಾಧಿಕಾರಿ ಡಾ.ರಂಗನಾಥ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮೀಕಾಂತ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ನಂತರ ತಾಲೂಕಿನ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೂ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು. ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕುಂಇಅಹಮದ್, ಇಒ ಅನಂತರಾಜು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಸನ್ನ ಕುವಾರ್, ಆಹಾರ ನಿರೀಕ್ಷರಾದ ಕೃಷ್ಣೇಗೌಡ, ಹರೀಶ್, ಬಿಇಒ ಸೋಮಶೇಖರ್ ಮತ್ತಿತರರು ಇದ್ದರು.