ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಪಾಟೀಲ, ಸಿದ್ದಗೌಡ ಮಗದುಮ್ಮ, ಶ್ರೀಕಾಂತ ಉಮ್ರಾಣಿ, ಪಿಂಟು ಹಿರೇಕುರುಬರ, ಪ್ರುಲ್​ ಶೆಟ್ಟಿ, ವಿವೇಕ ಕಮತೆ, ಅನಿಲ ಪಾಟೀಲ, ದೇವೇಂದ್ರ ಕರೋಶಿ ಇತರರಿದ್ದರು. 
ರಾಜ್ಯ

ಸಿಬ್ಬಂದಿ ಹಿತ ಕಾಯಲು ಡಾ.ಕೋರೆ ಸೊಸೈಟಿ ಆದ್ಯತೆ

ವಿಜಯವಾಣಿ ಸುದ್ದಿಜಾಲ ಮಾಂಜರಿ
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕೋ& ಆಪ್​ ಕ್ರೆಡಿಟ್​ ಸೊಸೆಟಿಯ ಎಲ್ಲ ಸಿಬ್ಬಂದಿಗೆ ಶೇ.15 ವೇತನ ಹೆಚ್ಚಳ ಮಾಡಿದ್ದು, ಸೇವಾ ಹಾಗೂ ಆರ್ಥಿಕ ಭದ್ರತೆ ಒದಗಿಸಲಾಗಿದೆ ಎಂದು ಅಧ್ಯಕ್ಷ ಮಹಾಂತೇಶ ಪಾಟೀಲ ಮಾಹಿತಿ ನೀಡಿದರು.
ಅಂಕಲಿ ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸಭೆ ಮಾಜಿ ಸದಸ್ಯ, ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಮಾರ್ಗದರ್ಶನ, ನಿರ್ದೇಶಕಿ ಡಾ.ಪ್ರೀತಿ ದೊಡವಾಡ, ಆಮಂತ್ರಿತ ನಿರ್ದೇಶಕ ಅಮಿತ ಕೋರೆ ಮುಂದಾಳತ್ವದಲ್ಲಿ ಸೊಸೈಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪದ್ಮಶ್ರೀ ಪ್ರಶಸ್ತಿ ಪಡೆಯುವ ಶುಭ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರು ಸಿಬ್ಬಂದಿ ವೇತನವನ್ನು ಶೇ.15ರಷ್ಟು ಹೆಚ್ಚಿಸಲು ಆಡಳಿತ ಮಂಡಳಿಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸೊಸೈಟಿ ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ, ನಿರ್ದೇಶಕರಾದ ಅಣ್ಣಾಸಾಹೇಬ ಸಂಕೇಶ್ವರಿ, ಪಿಂಟು ಹೀರೆಕುರಬರ, ಬಸನಗೌಡ ಅಸಂಗಿ, ಡಾ. ಸುಕುಮಾರ ಚೌಗಲೆ, ಅಮಿತ ಜಾಧವ, ಪ್ರುಲ್​ ಶೆಟ್ಟಿ, ಅಶೋಕ ಚೌಗಲಾ,
ಅನಿಲ ಪಾಟೀಲ, ವಿವೇಕಾನಂದ ಕಮತೆ, ಶ್ರೀಕಾಂತ ಉಮರಾಣೆ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್​.ಕರೋಶಿ ಇದ್ದರು.
ಆರೋಗ್ಯ, ಸಮಾಜ ಮತ್ತು ಶಿಕ್ಷಣ ಸೇವೆ ಜತೆ ಸಹಕಾರ ಸಂದಲ್ಲಿ ಜನರ ಆರ್ಥಿಕ ಸಮಸ್ಯೆ ನಿವಾರಣೆಗೆ ಸಂಸ್ಥೆ ಸ್ಥಾಪಿಸಿದ್ದು, ಹೆಮ್ಮೆರವಾಗಿ ಬೆಳೆದಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಲ್ಲೂ ಶಾಖೆಯನ್ನು ಪ್ರಾರಂಭಿಸಲಾಗುವುದು. ಸಹಕಾರ ಸಂಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸಲಿದೆ.
> ಡಾ.ಪ್ರಭಾಕರ ಕೋರೆ
ಪದ್ಮಶ್ರೀ ಪುರಸತರು

ಯುವಕರಿಗೆ ಉದ್ಯೋಗಾವಕಾಶ ನೀಡಿ ಅವರ ಕುಟುಂಬಕ್ಕೆ ಸಹಾಯವಾಗುವ ಕೆಲಸ ಮಾಡುವ ಸಲುವಾಗಿ ಡಾ.ಪ್ರಭಾಕರ ಕೋರೆ ಸ್ಥಾಪಿಸಿರುವ ಸಂಸ್ಥೆಯಲ್ಲಿ ಸುಮಾರು 400 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸೇವಾ ಮತ್ತು ಆರ್ಥಿಕ ಭದ್ರತೆ ನೀಡಲಾಗಿದೆ.
> ಡಾ.ಪ್ರೀತಿ ದೊಡವಾಡ
ನಿರ್ದೇಶಕಿ