ಹುಲಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಗ್ರೇಡ್-1 ತಹಸೀಲ್ದಾರರಾಗಿ ಪದೋನ್ನತ್ತಿ ಹೊಂದಿದ್ದ ಶಿವಾನಂದ ಮೇತ್ರೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಮೆಂಟೆ ಅವರನ್ನು ಸನ್ಮಾನಿಸಲಾಯಿತು. ರಾಜಪ್ಪ ನಂದೋಡೆ, ಸೂರ್ಯಕಾಂತ ಅಡಕೆ, ಹರಿನಾಥ, ಡಿಸಿ ಪಾಟೀಲ್ ಇತರರಿದ್ದರು.
- ತಹಸೀಲ್ದಾರ್ ಶಿವಾನಂದ ಮೇತ್ರೆ ಅಭಿಮತ
- ಹುಲಸೂರಿನಲ್ಲಿ ಸನ್ಮಾನ ಸಮಾರಂಭ
ಹುಲಸೂರು: ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿಗೆ ತಂತ್ರಾಜ್ಞಾನದ ಮಾಹಿತಿ ಅವಶ್ಯಕವಾಗಿದೆ ಎಂದು ಗ್ರೇಡ್-1 ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಶನಿವಾರ ಆಯೋಜಿಸಿ ಗ್ರೇಡ್- 1 ತಹಸೀಲ್ದಾರರಾಗಿ ಪದೋನ್ನತ್ತಿ ಹೊಂದಿದ್ದ ಶಿವಾನಂದ ಮೇತ್ರೆ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವರ್ಷ ಮಳೆ ಅಭಾವವಿದ್ದು, ಸಾರ್ವಜನಿಕರು ಭೂಮಿಯಲ್ಲಿ ನೀರು ಇಂಗುವ ಕೆಲಸ ಮಾಡಬೇಕು. ಮೈಸೂರು ಭಾಗದಲ್ಲಿ ಕೆಆರ್ಎಸ್ ನಿರ್ಮಾಣವಾಗಿದ್ದರಿಂದ ಮೈಸೂರು, ತುಮಕೂರ, ಚಾಮರಾಜನಗರ ಭಾಗದಲ್ಲಿ ವರ್ಷದ ಎಲ್ಲ ದಿನಗಳಲ್ಲೂ ಹಚ್ಚ-ಹಸುರು ಕಾಣುತ್ತದೆ. ನಮ್ಮ ಭಾಗದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಬರೀ ಮಳೆಗಾಲದಲ್ಲಿ ಹಸಿರು ಕಾಣುತ್ತದೆ ಎಂದರು.
ಹಿಂದೆ ಗ್ರೇಡ್-2 ತಹಸೀಲ್ದಾರ್ ಇದ್ದ ಸಮಯದಲ್ಲಿ ಕಾರ್ಯನಿರ್ವಹಿಸುರುವುದು ತೃಪ್ತಿ ತಂದಿದೆ. ಹುಲಸೂರು ಸಣ್ಣ ತಾಲೂಕು ಕೇಂದ್ರ ಎಂದು ಅನ್ಯತಾ ಭಾವಿಸಬಾರದು. ರಾಜ್ಯದಲ್ಲಿ 9 ಹಾಗೂ 14 ಗ್ರಾಮಗಳು ಒಳಗೊಂಡ ತಾಲೂಕು ಕೇಂದ್ರಗಳಿವೆ. ಸಣ್ಣ ತಾಲೂಕು ಇದ್ದರೆ ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ನಂದೋಡೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿದರು. ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಡಕೆ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಮೆಂಟೆ, ಪ್ರಮುಖರಾದ ಬಾಲಾಜಿ ಜಾಧವ್, ಸುರೇಶ ಪಾಟೀಲ್, ಪುಷ್ಪಾವತಿ ಪಾಟೀಲ್, ಶೈಲಜಾ, ಶಾಂತಮ್ಮ, ಸಂತೋಷ ಎಕಲೂರೆ, ಪ್ರವಿಣ ಪಾತಂಗೆ, ಓಂಕಾರ ವಾಂಜರಖೇಡೆ, ವಿಜಯಕುಮಾರ ಮೇಹಕರೆ ಇತರರಿದ್ದರು. ಡಿ.ಸಿ.ಪಾಟೀಲ್ ಸ್ವಾಗತಿಸಿ ನಿರೂಪಣೆ ಮಾಡಿದರು. ಗ್ರೇಡ್-1 ತಹಸೀಲ್ದಾರರಾಗಿ ಪದೋನ್ನತ್ತಿ ಹೊಂದಿದ್ದ ಶಿವಾನಂದ ಮೇತ್ರೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಮೆಂಟೆ ಅವರನ್ನು ಸನ್ಮಾನಿಸಲಾಯಿತು.