ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಿಕ್ಕೋಡಿ ಸಜ್ಜು
- ನಾಳೆಯಿಂದ ಎಸ್ಸೆಎಸ್ಸೆಎಲ್ ಸಿ ಪರೀಕ್ಷೆ
- ಪರೀಕ್ಷೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಜ್ಜಾಗಿದೆ
- ಪರೀಕ್ಷೆ ಸಿದ್ಧತೆ ಕುರಿತು ಡಿಡಿಪಿಐ ಮಾಹಿತಿ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಚಿಕ್ಕೋಡಿ ಜಿಲ್ಲೆ ಸಜ್ಜು
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-೧ ಒಟ್ಟು ೧೩೨ ಪರೀಕ್ಷಾ ಕೇಂದ್ರ ತೆರೆದಿದ್ದು, ಹೊಸದಾಗಿ ಮತ್ತು ಪುನರಾವರ್ತಿತರು ಸೇರಿ ಒಟ್ಟು 45,598 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಪರೀಕ್ಷೆಗೆ ಬೇಕಾದ ಎಲ್ಲ ಸಕಲ ಸಿದ್ಧತೆ ಇಲಾಖೆ ಮಾಡಿಕೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೀತಾರಾಮು ಆರ್.ಎಸ್. ತಿಳಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದ್ದಾರೆ.ಮಾ೧೮ ರಿಂದ ಪರೀಕ್ಷೆ ಆರಂಭವಾಗಲಿದೆ,
ಈ ಬಾರಿ ಹೊಸದಾಗಿ 41,671 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು, 3,927 ವಿದ್ಯಾರ್ಥಿಗಳು ಪುನವರ್ತಿತರಾಗಿದ್ದಾರೆ.ಪರೀಕ್ಷೆಗೆ ಬಳಸುತ್ತಿರುವ ೨೧೩೪ ಕೊಠಡಿಗಳಲ್ಲಿ ಸಿಸಿ ಕ್ಯಾಮರ್ ಅಳವಡಿಸಲಾಗಿದೆ. ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲು ೩೪೦೨ ಸಿಬ್ಬಂದಿ ನೇಮಿಸಿದರು, ವೆಬ್ ಕಾಸ್ಟಿಂಗ್ ವ್ಯವಸ್ಥೆ ಸೇರಿ ಎಲ್ಲ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು ಈ ಬಾರಿ ಚಿಕ್ಕೋಡಿ ಶಿಕ್ಷಣ ಜಿಲ್ಲೆ ಫಲಿತಾಂಶ ಸುಧಾರಣೆಯಾಗಲಿದೆ, ಜಿಲ್ಲೆ ಟಾಪ್ 10ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ೬೨೫ಕ್ಕೆ ೬೨೫ ಅಂಕಗಳನ್ನು ಈ ಬಾರಿ ಕೆಲ ವಿದ್ಯಾರ್ಥಿಗಳು ಪಡೆಯುತ್ತಾರೆ ವಿಶ್ವಾಸವಿದೆ.ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಿದೆ.
ಫಲಿತಾಂಶವನ್ನು ಉತ್ತಮ ಪಡಿಸಲು ಆಯ್ದ ಪ್ರೌಡ ಶಾಲೆಗಳ ಓದಿನ ಪೂರಕ ವಾತಾವರಣ ನಿರ್ಮಿಸಲು 2500ಕ್ಕೂ ಅಧಿಕ ಓದಿನ ಮನೆ ಪ್ರಾರಂಭಿಸಲಾಗಿದೆ. ಹಾಗೂ ಡಿಡಿಪಿಐ ಸೇರಿ ಅಧಿಕಾರಿಗಳಿಂದ ಮನೆ ಮನೆ ಭೇಟಿ ಕಾರ್ಯಕ್ರಮ,ಶಾಲಾ ದತ್ತು ಯೋಜನೆ, ವಿಷಯವಾರು ಪರಿಣಿತ ಶಿಕ್ಷಕರ ಮೌಲ್ಯಮಾಪನ, ಕಾರ್ಯಾಗಾರ, ವಿಶೇಷ ಭೋದನೆ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲಾಗಿದೆ.ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು.
ಡಯಟ್ ಪ್ರಾಚಾರ್ಯ ಸಂಜು ಹುಲೊಳ್ಳಿ, ರಾಜು ದೇವಋಷಿ ಇಬ್ಬರು.