ಬೈಲಹೊಂಗಲ ನಗರಸಭೆಯ ರಾಯಣ್ಣ ಪ್ರೌಢಶಾಲೆಗೆ ಡಿಡಿಪಿಐ ಲೀಲಾವತಿ ಹಿರೇಮಠ ಭೇಟಿ ನೀಡಿದರು. ಎಂ.ಸಿ.ಹಂಗರಕಿ, ಎಂ.ಐ.ಪೂಜಾರ, ಶ್ರೀದೇವಿ ನಾಗನೂರ, ಮಂಗಲಾ ಕೊರಬು ಇತರರಿದ್ದರು. 
ರಾಜ್ಯ

ಎಸ್ಸೆಸ್ಸೆಲ್ಸಿ ಜೀವನದ ಪ್ರಮುಖ ಘಟ್ಟ

ಬೈಲಹೊಂಗಲ: ಭವಿಷ್ಯದ ಬದುಕು ರೂಪಿಸುವ ವಿದ್ಯಾರ್ಥಿ ಜೀವನ ಸರ್ವಶ್ರೇಷ್ಠವಾದದು, ಪ್ರತಿಯೊಬ್ಬರೂ ಶ್ರಮದಿಂದ ಅಧ್ಯಯನ ಮಾಡಿ ಯಶಸ್ವಿಯಾಗಿ ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಹೇಳಿದರು.ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಶನಿವಾರ ಭೇಟಿ ನೀಡಿ ಇಲ್ಲಿಯ ನಗರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಭಯ ಪಡದೆ ಧೈರ್ಯದಿಂದ ಪರೀೆ ಎದುರಿಸಬೇಕು. ಮಾದರಿ ಪ್ರಶ್ನೆ ಪತ್ರಿಕೆಗಳಿಂದ ಕನಿಷ್ಠ 30 ಅಂಕಗಳ ಪ್ರಶ್ನೆಗಳು ಪುನರಾವರ್ತನೆ ಆಗುತ್ತಿವೆ. ಇದೇ ಅಂಶವನ್ನು ಪರಿಗಣಿಸಿ ಓದಿದರೆ ತೇರ್ಗಡೆ ಕಟ್ಟಿಟ್ಟ ಬುತ್ತಿ. ಹೆಚ್ಚು ಅಂಕ ಪಡೆಯುವ ಮಕ್ಕಳು ಶಿಕರ ಮತ್ತು ಇಲಾಖೆಯ ಮಾರ್ಗದರ್ಶನದಂತೆ ಓದಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಆಗಬೇಕು ಎಂದರು.ಮುಖ್ಯಶಿಕ್ಷಕ ಎಂ.ಸಿ.ಹಂಗರಕಿ, ಇಂಗ್ಲಿಷ್​ ವಿಷಯ ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಐ.ಪೂಜಾರ, ವಿಷಯ ಪರಿವೀಕಿ ಶ್ರೀದೇವಿ ನಾಗನೂರ, ಮಂಗಲಾ ಕೊರಬು, ಎಪಿಸಿ ದೀಪ್ತಿ ಅಪ್ಪಯ್ಯ, ಗಂಗಾಧರ ಕಾಮಕರ, ರಾಜು ಹಕ್ಕಿ, ಸಿಆರ್​ಪಿ ಗೌಡಪ್ಪ ಪಾಟೀಲ, ಬಾಳೇಶ ಬೋರಗಲ್​ ಇತರರಿದ್ದರು.