ಕಲಬುರಗಿ ಎಸ್ಪಿ ಹಳೆ ಕಚೇರಿ ಪಕ್ಕದ ಬಾಲಕಿರ ಸರ್ಕಾರಿ ಪಿಯು ಕಾಲೇಜಿನ ಕೇಂದ್ರದಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸಿದ ಮಕ್ಕಳನ್ನು ಪರೀಕ್ಷಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದರು.
- ಕಲಬುರಗಿ ಜಿಲ್ಲೆಯ 141 ಕೇಂದ್ರಗಳಲ್ಲಿ ಎಕ್ಸಾಮ್
- ಒಟ್ಟು 1591 ವಿದ್ಯಾರ್ಥಿಗಳು ಗೈರು
ಕಲಬುರಗಿ: ಜಿಲ್ಲೆಯಾದ್ಯಂತ ಬುಧವಾರ ಜರುಗಿದ ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ನಕಲು, ಅಕ್ರಮ ಸೇರಿ ಯಾವುದೇ ಅಹಿತಕರ ಟನೆ ನಡೆದಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ 1591 ಜನ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಈ ದಿನದ ಕನ್ನಡ, ಹಿಂದಿ ಇತರೆ ಭಾಷೆ ಪತ್ರಿಕೆಗೆ ಒಟ್ಟು 44574 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು, ಈ ಪೈಕಿ 42983 ವಿದ್ಯಾರ್ಥಿಗಳು ಹಾಜರಾಗಿ, 1591 ಗೈರು ಹಾಜರಾಗಿದ್ದಾರೆ.
2025&26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಚ್ 18ರಂದು ನಡೆಯಬೇಕಿದ್ದ ಪ್ರಥಮ ಭಾಷೆ (ಕನ್ನಡ, ಹಿಂದಿ ಇತರೆ) ಪೂರ್ಣಗೊಂಡಿದೆ. 23ರಂದು ಕೋರ್ ವಿಷಯ (ವಿಜ್ಞಾನ ಇತರೆ), 25ರಂದು ದ್ವೀತಿಯ ಭಾಷೆ (ಇಂಗ್ಲಿಷ, ಕನ್ನಡ), 28ರಂದು ಗಣಿತ, 30ರಂದು ತೃತೀಯ ಭಾಷೆ (ಕನ್ನಡ, ಹಿಂದಿ, ಸಂಸತ, ಇಂಗ್ಲಿಷ ಇತರೆ), ಏಪ್ರಿಲ್ 1ರಂದು ಜೆಟಿಎಸ್ ವಿಷಯ, ಅರ್ಥಶಾಸ, ಏಪ್ರಿಲ್ 2ರಂದು ಕೋರ್ ವಿಷಯ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಕಲಬುರಗಿ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಮೂರು ಜಾಗೃತದಳ ತಂಡ ರಚಿಸಿದರೆ, ಡಯಟ್ ಕಚೇರಿಯಿಂದ ಒಂದು ತಂಡ ರಚಿಸಲಾಗಿದೆ. 141 ಅಧಿಕಾರಿಗಳ ಸ್ಥಾನಿಕ ಜಾಗೃತದಳ ತಂಡವೂ ಕಾರ್ಯನಿರ್ವಹಿಸಿದೆ. ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಸಿಟಿವಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಹಂತದಲ್ಲಿ 25 ತಂಡ ರಚಿಸಲಾಗಿದೆ. ಪ್ರತಿ ಆರು ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯ ವಿಸಿ ಸಭಾಂಗಣದಲ್ಲಿ ನಿರ್ವಹಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳನ್ನು ಬಿಡುವಾಗ ಭೌತಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಒಬ್ಬ ಪುರುಷ, ಒಬ್ಬ ಮಹಿಳಾ ಶಿಕ್ಷಕರನ್ನು ನಿಯೋಜಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆ ಬುಧವಾರ ಸುಸೂತ್ರ ನಡೆದಿದ್ದು, ಯಾವುದೇ ಅಕ್ರಮ ಪ್ರಕರಣ ನಡೆದಿಲ್ಲ. ಮುಂಜಾಗ್ರತಾ ಕ್ರಮವಾಗಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ಜಾಗೃತದಳ ತಂಡ, ವೆಬ್ಕ್ಯಾಸ್ಟಿಂಗ್ ಸೇರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲೆಯ ಎಲ್ಲ 141 ಕೇಂದ್ರಗಳಲ್ಲೂ ಪರೀಕ್ಷೆ ಸುಲಲಿತವಾಗಿ ನಡೆದಿದೆ.