ಎಸ್‌ಎಸ್‌ಎಲ್ಸಿ ಪರೀಕ್ಷೆ -1 ಕ್ಕೆ ಹಾಜರಾಗಲು ವಿದ್ಯಾರ್ಥಿಗಳಿಗೆ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ.  
ರಾಜ್ಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿಗೆ ದಿನಾಂಕ ವಿಸ್ತರಣೆ

ಪ್ರಶಾಂತ ರಿಪ್ಪನ್​ಪೇಟೆ

ಪ್ರಮುಖ ಮುಖ್ಯಾಂಶಗಳು

  • ಎಸ್‌ಎಸ್‌ಎಲ್ಸಿ ನೋಂದಣಿ ದಿನಾಂಕ ವಿಸ್ತರಣೆ
  • ವಿದ್ಯಾರ್ಥಿ, ಪೋಷಕರ ಕೋರಿಕೆಗೆ ಸ್ಪಂದನೆ
  • ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ

ಬೆಂಗಳೂರು:ಮುಂದಿನ ಮಾರ್ಚ್‌ನಲ್ಲಿನಡೆಯಲಿರುವ ಎಸ್‌ಎಸ್‌ಎಲ್ಸಿಪರೀಕ್ಷೆ -1 ಕ್ಕೆಹಾಜರಾಗಲು ವಿದ್ಯಾರ್ಥಿಗಳಿಗೆನೋಂದಣಿ ದಿನಾಂಕವನ್ನು ನ.29ರವರೆಗೆವಿಸ್ತರಿಸಲಾಗಿದೆ.

ಸರ್ಕಾರಿ,ಅನುದಾನಿತ,ಅನುದಾನ ರಹಿತಶಾಲೆಗಳ ವಿದ್ಯಾರ್ಥಿಗಳು,ಖಾಸಗಿ ಅಭ್ಯರ್ಥಿಗಳು,ಪುನರಾವರ್ತಿತವಿದ್ಯಾರ್ಥಿಗಳು ನೋಂದಣಿಗೆವಿಸ್ತರಿಸಿದ ಗಡುವಿನ ಪ್ರಯೋಜನವನ್ನುಪಡೆದುಕೊಳ್ಳಬಹುದು ಎಂದು ಕರ್ನಾಟಕಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ಇದುನಾಲ್ಕನೆ ಬಾರಿಯ ಗಡುವು ವಿಸ್ತರಣೆಯಾಗಿದೆ.ಈ ಮೊದಲು ನ.20ಕ್ಕೆ ನೋಂದಣಿಗೆಕೊನೆಯ ದಿನವಾಗಿತ್ತು.ಆದರೆ ರಾಜ್ಯದಕೆಲವು ಶಾಲೆಗಳು ಮತ್ತು ಪೋಷಕರಿಂದಗಡುವು ವಿಸ್ತರಣೆಗೆ ಮನವಿ ಬಂದಹಿನ್ನೆಲೆಯಲ್ಲಿ ದಿನಾಂಕ ವಿಸ್ತರಣೆಮಾಡಲಾಗಿದೆ.ಇದು ಅಂತಿಮವಿಸ್ತರಣೆ ಎಂದು ಮಂಡಳಿ ಹೇಳಿದೆ.