- ಕಲಬುರಗಿ ಜಿಲ್ಲೆಯ 141 ಕೇಂದ್ರಗಳಲ್ಲಿ ಎಕ್ಸಾಮ್
- ಒಟ್ಟು 45230 ವಿದ್ಯಾರ್ಥಿಗಳು ಹಾಜರು
ಕಲಬುರಗಿ: ಜಿಲ್ಲೆಯಾದ್ಯಂತ ಸೋಮವಾರ ಜರುಗಿದ ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆಯ ಕೋರ್ ವಿಷಯ (ವಿಜ್ಞಾನ ಇತರೆ) ಸುಸೂತ್ರವಾಗಿ ನಡೆದಿದ್ದು, ಯಾವುದೇ ನಕಲು, ಅಕ್ರಮ ಸೇರಿ ಯಾವುದೇ ಅಹಿತಕರ ಟನೆ ನಡೆದಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ 1729 ಜನ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
46959 ವಿದ್ಯಾರ್ಥಿಗಳ ಪೈಕಿ 45230 ವಿದ್ಯಾರ್ಥಿಗಳು ಹಾಜರಾಗಿ, 1729 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ವೇಳಾಪಟ್ಟಿ ಹೀಗಿದೆ
2025&26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಚ್ 18ರಂದು ನಡೆಯಬೇಕಿದ್ದ ಪ್ರಥಮ ಭಾಷೆ (ಕನ್ನಡ, ಹಿಂದಿ ಇತರೆ), 23ರಂದು ನಡೆಯಬೇಕಿದ್ದ ಕೋರ್ ವಿಷಯ (ವಿಜ್ಞಾನ ಇತರೆ) ಪೂರ್ಣಗೊಂಡಿದೆ. 25ರಂದು ದ್ವೀತಿಯ ಭಾಷೆ (ಇಂಗ್ಲಿಷ, ಕನ್ನಡ), 28ರಂದು ಗಣಿತ, 30ರಂದು ತೃತೀಯ ಭಾಷೆ (ಕನ್ನಡ, ಹಿಂದಿ, ಸಂಸತ, ಇಂಗ್ಲಿಷ ಇತರೆ), ಏಪ್ರಿಲ್ 1ರಂದು ಜೆಟಿಎಸ್ ವಿಷಯ, ಅರ್ಥಶಾಸ, ಏಪ್ರಿಲ್ 2ರಂದು ಕೋರ್ ವಿಷಯ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಸಿಸಿಟಿವಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಹಂತದಲ್ಲಿ 25 ತಂಡ ರಚಿಸಲಾಗಿದೆ. ಪ್ರತಿ ಆರು ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯ ವಿಸಿ ಸಭಾಂಗಣದಲ್ಲಿ ನಿರ್ವಹಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳನ್ನು ಬಿಡುವಾಗ ಭೌತಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಒಬ್ಬ ಪುರುಷ, ಒಬ್ಬ ಮಹಿಳಾ ಶಿಕ್ಷಕರನ್ನು ನಿಯೋಜಿಸಲಾಗಿದೆ.