25ರಿಂದ ಶ್ರೀಶೈಲ ಜಗದ್ಗುರುಗಳ ಪ್ರವಚನ; ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ 
ರಾಜ್ಯ

25ರಿಂದ ಶ್ರೀಶೈಲ ಜಗದ್ಗುರುಗಳ ಪ್ರವಚನ; ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ

ಪ್ರಮುಖ ಮುಖ್ಯಾಂಶಗಳು

  • ಜು.25 ರಿಂದ ಶ್ರೀಶೈಲ ಜಗದ್ಗುರುಗಳ ಪ್ರವಚನ
  • ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ
  • ಗುರುಪೌರ್ಣಿಮೆ ಅಂಗವಾಗಿ ಕಾರ್ಯಕ್ರಮ ಆಯೋಜನೆ

ಬೆಂಗಳೂರು: ಗುರುಪೌರ್ಣಿಮೆಅಂಗವಾಗಿ ಶ್ರೀಶೈಲ ಜಗದ್ಗುರುಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರಇಷ್ಟಲಿಂಗ ಮಹಾಪೂಜೆ ಹಾಗೂಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕಆಶೀರ್ವಚನ ಕಾರ್ಯಕ್ರಮವು ಶನಿವಾರದಿಂದ(ಜು.25)5 ದಿನಗಳ ಕಾಲನಡೆಯಲಿದೆ.

ಶ್ರೀಶೈಲಮಲ್ಲಿಕಾರ್ಜುನ ಸಮಾಜೋತ್ಥಾನೌಂಡೇಶನ್ ಆಯೋಜಿಸಿರುವ ಈ ಕಾರ್ಯಕ್ರಮವುವಿಜಯನಗರದ ಹೊಸಹಳ್ಳಿ ಮೆಟ್ರೋಸ್ಟೇಷನ್ ಮುಂಭಾಗದಲ್ಲಿರುವ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿನಡೆಯಲಿದೆ. ಶನಿವಾರ ಸಂಜೆ6ಕ್ಕೆನಡೆಯಲಿರುವ ಸಮಾರಂಭವನ್ನು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಉದ್ಘಾಟಿಸಲಿದ್ದು,ಕರ್ನಾಟಕ ವೀರಶೈವವಿದ್ಯಾಭಿವೃದ್ಧಿ ಸಂಸ್ಥೆಯಅಧ್ಯಕ್ಷ ಬಿ.ಎಸ್.ಪರಮಶಿವಯ್ಯಅಧ್ಯಕ್ಷತೆ ವಹಿಸಲಿದ್ದಾರೆ.5 ದಿನಗಳಕಾರ್ಯಕ್ರಮದಲ್ಲಿ ಎಡೆಯೂರು,ಸಿಂಧಗಿ,ವಿಭೂತಿಪುರ,ಶಿವಗಂಗೆ ಸೇರಿದಂತೆವಿವಿಧ ಮಠಗಳ ಶ್ರೀಗಳು,ರಾಜಕೀಯ ಮುಖಂಡರು,ವಿವಿಧ ಕ್ಷೇತ್ರದಗಣ್ಯರು ಆಗಮಿಸಲಿದ್ದಾರೆ.

ಜು.26ರಿಂದ29ರವರೆಗೆಪ್ರತಿದಿನ ಬೆಳಗ್ಗೆ 8ಗಂಟೆಗೆ ಶ್ರೀಶೈಲಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗಮಹಾಪೂಜೆ ನೆರವೇರಲಿದ್ದು,ಭಕ್ತರುಶುಚೀರ್ಭೂತರಾಗಿ ಮಡಿಯಿಂದ ಹೂವು,ಪತ್ರೆಗಳೊಂದಿಗೆಪಾಲ್ಗೊಳ್ಳುವಂತೆ ಆಯೋಜಕರುವಿನಂತಿಸಿದ್ದಾರೆ.ಸಂಜೆ ಶ್ರೀಸಿದ್ಧಾಂತ ಶಿಖಾಮಣಿ ಆಶೀರ್ವಚನಸಮಾರಂಭ ನಡೆಯಲಿದ್ದು, ಜು.29ರಂದು ವಿಶೇಷವಾಗಿಜಗದ್ಗುರು ಶ್ರೀಪತಿ ಪಂಡಿತಾರಾಧ್ಯಭಗವತ್ಪಾದರ ಜಯಂತಿ. ಗುರುಪೌರ್ಣಿಮೆಅಂಗವಾಗಿ ಜಗದ್ಗುರುಗಳ ಪಾದಪೂಜೆನೆರವೇರಲಿದೆ.