ಶ್ರೀ ಶ್ರೀಪಾದರಾಜರ ಆರಾಧನೆ ನಿಮಿತ್ತ ಶಹಾಪುರದಲ್ಲಿ ಭಾನುವಾರ ನಡೆದ ಪಾರಾಯಣದಲ್ಲಿ ಮಹಿಳೆಯರು ಮತ್ತು ಪ್ರಮುಖರು ಭಾಗವಹಿಸಿದ್ದರು. 
ರಾಜ್ಯ

ಶ್ರೀಪಾದರಾಜರು ಹರಿದಾಸ ಸಾಹಿತ್ಯದ ಪಿತಾಮಹ

ಪ್ರಮುಖ ಮುಖ್ಯಾಂಶಗಳು

  • ಪುರೋಹಿತ ನಾರಾಯಣಚಾರ್ಯ ಮಳ್ಳಿ ಬಣ್ಣನೆ
  • ಶಹಾಪುರದಲ್ಲಿ ಆರಾಧನಾ ಮಹೋತ್ಸವ, ವಿಶೇಷ ಪಾರಾಯಣ
ಶಹಪುರ: ಕನ್ನಡ ಭಾಷೆಯಲ್ಲಿ ಸರಳವಾಗಿ ಧರ್ಮ ಗ್ರಂಥಗಳನ್ನು ರಚಿಸಿದ ಶ್ರೀ ಶ್ರೀಪಾದರಾಜರು ಹರಿದಾಸ ಸಾಹಿತ್ಯದ ಪಿತಾಮಹ ಎಂದು ಪುರೋಹಿತ ನಾರಾಯಣಚಾರ್ಯ ಮಳ್ಳಿ ಹೇಳಿದರು.
ಹಳೆಪೇಟೆಯಲ್ಲಿ ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ ನಿಮಿತ್ತ ಭಾನುವಾರ ಕಲಬುರಗಿಯ ವಿಶ್ವ ಮಾಧ್ವ ಪರಿಷತ್​ನ ಸತ್ಯಪ್ರಮೋದ ಪಾರಾಯಣ ಸಂಘ ಹಾಗೂ ವೇದನಿಧಿ ತೀರ್ಥ ಪಾರಾಯಣ ಸಂಘದ ಸಹಯೋಗದಡಿ ಏರ್ಪಡಿಸಿದ್ದ ವಿಷ್ಣು ಸಹಸ್ರನಾಮ ಪಠಣ, ಸುಮಧ್ವ ವಿಜಯ, ವಾಯುಸ್ತುತಿ ಪುನಶ್ಚರಣ ಹಾಗೂ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಪದ್ಯಗಳ ಮೂಲಕ ಆಧ್ಯಾತ್ಮಿಕ ಸ್ಥಾನಮಾನ ಕಲ್ಪಿಸಿ ಸರ್ವರಿಗೂ ಸರಳವಾಗಿ ಅರ್ಥವಾಗುವಂತೆ ಸಿದ್ಧಾಂತ ತಿಳಿಸಿಕೊಟ್ಟ ಮಹಿಮಾನ್ವಿತರು ಎಂದು ಬಣ್ಣಿಸಿದರು.
ಪಾರಾಯಣ ಸಂಘದ ಪ್ರಮುಖರು ಮಾತನಾಡಿ, 60-70 ಜನರ ತಂಡ ಪ್ರತಿ ಭಾನುವಾರ ಮತ್ತು ಬಿಡುವಿನ ದಿನಗಳಲ್ಲಿ ಕಲಬುರಗಿ ಮತ್ತು ಸುತ್ತಲಿನ ಹಳ್ಳಿ, ನಗರಗಳಿಗೆ ತೆರಳಿ ವಿಷ್ಣು ಸಹಸ್ರನಾಮ, ಸುಮಧ್ವ ವಿಜಯ ಪಾರಾಯಣವನ್ನು ಯಾವುದೇ ಫಲಾಪೇೆ ಇಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಡಾ.ಗೌತಮ ಜಹಾಗಿದಾರ, ಬಿ.ಜಿ. ದೇಶಪಾಂಡೆ, ಶರದ ಕುಲಕರ್ಣಿ, ರವೀಂದ್ರ ದೇಶಪಾಂಡೆ, ರಾವೇಂದ್ರ ಕುಲಕರ್ಣಿ, ಅರವಿಂದ ಹೇರೂರ, ಕೊನೇರಾಚಾರ್ಯ, ವಾಸುದೇವಾಚಾರ್ಯ ಸಗರ, ಪ್ರಸನ್ನ ದೇಸಾಯಿ, ಅರ್ಚಕ ನರಸಿಂಹಾಚಾರ್ಯ, ಶ್ರೀನಿವಾಸ ಆಚಾರ್ಯ, ಸತ್ಯನಾರಾಯಣ ದೇಸಾಯಿ, ಗುಂಡೇರಾವ ದೇಶಪಾಂಡೆ, ಶ್ರೀನಿವಾಸರಾವ ಅರಿಕೇರಾ, ಮುರಳೀಧರ ಸುಂಬಡ, ಪ್ರಸನ್ನ ದೇಸಾಯಿ ಇತರರಿದ್ದರು.
ಶ್ರೀಪಾದರಾಜರ ಭಾವಚಿತ್ರದ ಜತೆ ದೇವರ ನಾಮ ಹೇಳುತ್ತ ಗ್ರಾಮ ಪ್ರದಕ್ಷಿಣೆ ನಡೆಸಲಾಯಿತು. ಶ್ರೀ ರಾವೇಂದ್ರ ಸ್ವಾಮಿಗಳ ಮಠ ಮತ್ತು ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.