meeting ಶ್ರೀನಿವಾಸಪುರದ ತಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಸ್ವಚ್ಛ ಭಾರತ ಜಿಲ್ಲಾ ಸಂಯೋಜಕ ಜಗದೀಶ್​, ಎಇಇ ಸುರೇಶ, ತಾಪಂ ವ್ಯವಸ್ಥಾಪಕ ಮಂಜುನಾಥ್​ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು. 
ರಾಜ್ಯ

ಕಂದಾಯ ವಸೂಲಿಯಲ್ಲಿ ಶ್ರೀನಿವಾಸಪುರ ಪ್ರಥಮ meeting

ಪ್ರಮುಖ ಮುಖ್ಯಾಂಶಗಳು

  • ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಸರ್ವೇಶ್​ ಮಾಹಿತಿ
ಶ್ರೀನಿವಾಸಪುರ: ಕಂದಾಯ ವಸೂಲಿಯಲ್ಲಿ ಜಿಲ್ಲೆಯಲ್ಲಿ ಶ್ರೀನಿವಾಸಪುರ ಪ್ರಥಮ ಸ್ಥಾನದಲ್ಲಿದೆ. meeting ಕುಡಿಯುವ ನೀರು ಸಮಸ್ಯೆ ನಿವಾರಿಸಬೇಕು. ಜತೆಗೆ ಸ್ವಚ್ಛತೆ ಆದ್ಯತೆ ನೀಡಿ ಮಾದರಿ ತಾಲೂಕು ನಿರ್ಮಿಸಲು ಪಿಡಿಒಗಳು ಆಡಳಿತ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಸರ್ವೇಶ್​ ತಿಳಿಸಿದರು.
ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 25 ಗ್ರಾಪಂಗಳಿದ್ದು, ಮುಂದಿನ ವಾರದಿಂದಲೇ ಎಲ್ಲ ಗ್ರಾಮಗಳು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲಾಗುವುದು. ಜಿಲ್ಲೆಯಲ್ಲಿ ಶ್ರೀನಿವಾಸಪುರವನ್ನ ಸ್ವಚ್ಛತೆಯಲ್ಲಿ ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿ ಮಾಡಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಡಳಿತ ಅಧಿಕಾರಿಗಳನ್ನು ಸಮನ್ವಯ ಮಾಡಿಕೊಂಡು ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ವಂತ ಸಂಪನ್ಮೂಲಗಳಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ನಿರಂತರ ಸಭೆ ಮಾಡಿದ್ದರಿಂದ ಅನುಕೂಲವಾಯಿತು ಎಂದರು.
ಅದರಲ್ಲಿ ವಿಶೇಷವಾಗಿ ಗಡಿಭಾಗದ ಪುಲಗೂರಕೋಟೆ ಗ್ರಾಪಂನ ಶೇ.100 ನೂರರಷ್ಟು ತೆರಿಗೆ ಸಂಗ್ರಹ ಮಾಡಿ ಉತ್ತಮ ಹೆಸರು ಪಡೆದಿದೆ. ಹಾಗೆಯೇ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶ್ರಮವಹಿಸಿ ತೆರಿಗೆ ಸಂಗ್ರಹಿಸಬೇಕು ಎಂದರು.
ಗ್ರಾಪಂಗಳಿಗೆ ನೀಡಿರುವ ಸ್ವಚ್ಛ ವಾಹನಕ್ಕೆ ಇನ್ನು ಮುಂದೆ ಜಿಬಿಎಸ್​ ಕ್ಯಾಮರಾ ಅಳವಡಿಸಲಾಗುವುದು. ವಾಹನ ಎಲ್ಲೆಲ್ಲಿ ಹೋಗುತ್ತೆ ಎಂಬುದು ಕುಳಿತಲ್ಲೇ ವೀಸಬಹುದು ಯಾವ ಹಳ್ಳಿಗೆ ಹೋಗಿದೆ ಎಂಬುದು ನಿಖರವಾಗಿ ತಿಳಿಯಲಿದೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.