Srinivasa Swamy Brahmarathotsava Sampanna 
ರಾಜ್ಯ

ಶ್ರೀನಿವಾಸ್​ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿ ಶ್ರೀನಿವಾಸ್​ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಜಾತ್ರೆ ಪ್ರಯುಕ್ತ ಶ್ರೀನಿವಾಸ ಸ್ವಾಮಿಗೆ ವಿವಿಧ ಹೂಗಳಿದ ಅಲಂಕರಿಸಲಾಗಿತ್ತು. ದೇವಾಲಯ ಮತ್ತು ಗ್ರಾಮದ ರಾಜ ಬೀದಿಗಳನ್ನು ವಿದ್ಯುತ್​ ದೀಪಗಳಿಂದ ಅಲಂಕರಿಲಾಗಿತ್ತು. ದೇವಾಲಯದ ದ್ವಾರವನ್ನು ಬಾಳೆ ಕಂದುಗಳಿಂದ ಸಿಂಗರಿಸಲಾಗುತ್ತು. ಭಕ್ತರು ಸರತಿ ಸಾಲಿನಲ್ಲಿ ಸುಡುವ ಬಿಸಿಲನ್ನು ಲೆಕ್ಕಿಸದೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ದೇವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರಣಿಗೆ ಮಾಡಲಾಯಿತು. ಬಿಸಿಲ ತಾಪಕ್ಕೆ ಭಕ್ತರಿಗೆ ಪಾನಕ, ಮಜ್ಜಿಗೆ ನೀಡಲಾಯಿತು.