ಎಚ್‌ಎಸ್‌ಆರ್ ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಶಾಸಕ ಸತೀಶ್ ರೆಡ್ಡಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.  
ರಾಜ್ಯ

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಶ್ರೀನಿವಾಸ ಕಲ್ಯಾಣ; ಶ್ರಾವಣ ಶನಿವಾರದಂದು ಕಾರ್ಯಕ್ರಮ

ಪ್ರಮುಖ ಮುಖ್ಯಾಂಶಗಳು

  • ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ
  • ಶ್ರಾವಣ ಶನಿವಾರದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ
  • ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ದಾಸ ಸಾಹಿತ್ಯ ಪ್ರಚಾರ

ಬೆಂಗಳೂರು: ಎಚ್‌ಎಸ್‌ಆರ್ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿಕ್ರೀಡಾಂಗಣದಲ್ಲಿ ಶ್ರೀನಿವಾಸಕಲ್ಯಾಣ ಮಹೋತ್ಸವ ಸಮಿತಿ ಹಾಗೂಎಚ್‌ಎಸ್‌ಆರ್ ಬಡಾವಣೆ ಸಾಂಸ್ಕೃತಿಕಅಕಾಡೆಮಿಯ 17ನೇವಾರ್ಷಿಕೋತ್ಸವದ ಅಂಗವಾಗಿ,ಶ್ರಾವಣ ಶನಿವಾರದಂದುಶ್ರೀನಿವಾಸ ಕಲ್ಯಾಣ ಮಹೋತ್ಸವವಿಜೃಂಭಣೆಯಿಂದ ನಡೆಯಿತು.

ಡಾ.ತಾಯಲೂರು ವಾದಿರಾಜನೇತೃತ್ವದ ತಂಡದಿಂದ ಭೂದೇವಿಶ್ರೀದೇವಿ ಸಹಿತ ಶ್ರೀನಿವಾಸದೇವರ ಅದ್ದೂರಿ ಕಲ್ಯಾಣೋತ್ಸವನಡೆಯಿತು. ಗಾಯಕಪಂಡಿತ್ ಸಂತೋಷ್ ಗದ್ದನಕೇರಿ,ವಿದುಷಿ ಶುಭಸಂತೋಷ್ ಹಾಗೂ ಅಪೂರ್ವ ಲಕ್ಷ್ಮಿಅವರು ಶ್ರೀನಿವಾಸ ಕಲ್ಯಾಣದ ವಿವಿಧಘಟನಾವಳಿಗಳನ್ನು ಗಾಯನದ ಮೂಲಕಪ್ರಸ್ತುತಪಡಿಸಿದರು .ವಾದಿರಾಜ ಸಂಶೋಧನಾಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಗೋಪಾಲಾಚಾರ್ಅವರು ಅರ್ಥವಿವರಣೆ ಹಾಗೂ ವ್ಯಾಖ್ಯಾನದಮೂಲಕ ಶ್ರೀನಿವಾಸ ದೇವರ ಮಹಿಮೆಯನ್ನುಭಕ್ತರಿಗೆ ಪರಿಚಯಿಸಿದರು.

ಕಾರ್ಯಕ್ರಮದಲ್ಲಿಸ್ಥಳೀಯ ಶಾಸಕ ಸತೀಶ್ ರೆಡ್ಡಿ,ಗೌರವಾಧ್ಯಕ್ಷಎ.ಎನ್.ಎಲ್ಲಪ್ಪರೆಡ್ಡಿ, ಅಧ್ಯಕ್ಷಪ್ರೊ. ಪಿ.ಸದಾಶಿವರೆಡ್ಡಿ, ಕಾರ್ಯದರ್ಶಿಕೆ. ವಾಸುದೇವ,ಜಯರಾಮ್ ರೆಡ್ಡಿ,ಸಲಹೆಗಾರ ಕೆ.ಟಿ.ರಾಮರಾಜು ಮತ್ತಿತರಗಣ್ಯರು ಪಾಲ್ಗೊಂಡಿದ್ದರು.

ಶ್ರೀನಿವಾಸಉತ್ಸವ ಬಳಗದ ದಾಸ ಸಾಹಿತ್ಯ ಪ್ರಚಾರ

ಬಾರೋಮನೆಗೆ ಗೋವಿಂದ ಎಂಬ ಧ್ಯೇಯದೊಂದಿಗೆ2012ರಲ್ಲಿಆರಂಭವಾದ ಶ್ರೀನಿವಾಸ ಉತ್ಸವಬಳಗವು ಆಧ್ಯಾತ್ಮಿಕ,ಸಾಂಸ್ಕೃತಿಕ,ಸಾಹಿತ್ಯ ಹಾಗೂಸಂಗೀತ ಪರಂಪರೆಯನ್ನು ಜನಮಾನಸಕ್ಕೆತಲುಪಿಸುವ ಕಾರ್ಯದಲ್ಲಿ ತೊಡಗಿದೆ.ದಾಸ ಸಾಹಿತ್ಯಪ್ರಚಾರ ಹಾಗೂ ಅದಕ್ಕೆ ಪೂರಕವಾದವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡುಬರುತ್ತಿದೆ.