Srinivas Kalyana's glory at Kunigal festival 
ರಾಜ್ಯ

ಕುಣಿಗಲ್ ಉತ್ಸವದಲ್ಲಿ ಶ್ರೀನಿವಾಸ ಕಲ್ಯಾಣ ವೈಭವ

ಕುಣಿಗಲ್ : ಎರಡನೇ ದಿನದ ಕುಣಿಗಲ್ ಉತ್ಸವದ ಕಾರ್ಯಕ್ರಮದಲ್ಲಿ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಸಾವಿರಾರು ಮಂದಿ ಕಣ್ಣು ತುಂಬಿಕೊಂಡರು.\
ತಿರುಪತಿಯಿಂದ ವೆಂಕಟೇಶ್ವರ ಸ್ವಾಮಿ, ಪದ್ಮಾವತಿ ಮೂರ್ತಿಗಳನ್ನು ತಂದು ತಿರುಪತಿ ದೇವಾಲಯದ ಮಾದರಿ ಅಲಂಕರಿಸಿ, ದೇವರನ್ನು ಕುರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀನಿವಾಸ ಕಲ್ಯಾಣೋತ್ಸಕ್ಕೆ ಸಚಿವ ರಾಮಲಿಂಗರೆಡ್ಡಿ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ತೆಗೆ ಶಾಸಕ ಡಾ.ರಂಗನಾಥ್ ಕೂಡ ಸಾಥ್ ನೀಡಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ನಾಗಮಂಗಲ ಮಾಜಿ ಶಾಸಕ ಶಿವರಾಮೇಗೌಡ, ಸಾಹಿತಿ ಹಾಗೂ ಹಾಸ್ಯ ಕಲಾವಿಧ ಪ್ರೊ.ಕಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್, ರಾಜ್ಯ ಮಹಿಳಾ ಕಾಂಗ್ರೆಶ್ ಪ್ರಧಾನ ಕಾರ್ಯದರ್ಶಿ ಸುಮತಿ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್ ಮುಂತಾದವರು ಇದ್ದರು.
4 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದ 4 ಸಾವಿರ ಮಕ್ಕಳಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಭಾ ಪುರಸ್ಕಾರ ವಿತರಿಸಿ, ಮಾತನಾಡಿದ ಅವರು ಕುಣಿಗಲ್ ಉತ್ಸವದ ಅಂಗವಾಗಿ ತಾಲೂಕಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗಿದೆ. ಮನೆಯಲ್ಲಿ ಮೊದಲ ಗುರುಗಳಾದ ತಂದೆ0ತಾಯಿಗೆ ಗೌರವ ನೀಡುವ ತೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಮನಸ್ಥಿತಿಯೊಂದಿಗೆ ವಿದ್ಯೆ ಕಲಿಸಿದ ಶಿಕ್ಷಕರಿಗೂ ಗೌರವ ನೀಡುವ ಸಂಸ್ಖಾರ ಬೆಳಿಸಿಕೊಂಡು ಹುಟ್ಟಿದ ಊರಿಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಕೊಡಿಗೆ ನೀಡಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.