ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬಾಲಗಂಗಾಧರತಿಲಕ್ ಮತ್ತು ಗೋಪಾಲಕೃಷ್ಣಗೋಖಲೆಯವರ ಪರಿಕಲ್ಪನೆಯಲ್ಲಿಆರಂಭವಾದ ಸಾರ್ವಜನಿಕ ಗಣೇಶೋತ್ಸವವುಇಂದು ದೇಶದ ಉದ್ದಗಲಕ್ಕೂವಿಸ್ತರಿಸಿರುವುದು ಇತಿಹಾಸ.ಅಂತೆಯೇ 1980ರದಶಕದಲ್ಲಿ ಹುಟ್ಟುಹಾಕಿದ ಹಲವುಸಂಸ್ಥೆಗಳು ಇಂದಿಗೂ ಗಣೇಶೋತ್ಸವವನ್ನುಆಚರಿಸುತ್ತಿದ್ದು,ಜಯನಗರ 8ನೇಬ್ಲಾಕ್‌ನ ಶ್ರೀವಿನಾಯಕ ಮಿತ್ರಮಂಡಳಿಯು ಒಂದು.
1982ರಲ್ಲಿಕೆಲ ಉತ್ಸಾಹಿ ತರುಣರು ಮತ್ತುಕಾಲೇಜು ವಿದ್ಯಾರ್ಥಿಗಳಿಂದಪ್ರಾರಂಭವಾದ ವಿನಾಯಕ ಮಿತ್ರಮಂಡಳಿಯು ಹಿಂದೂ ಸಮಾಜದ ಸಾಂಪ್ರದಾಯಿಕಮೌಲ್ಯಗಳ ಪ್ರಚಾರದ ಜೊತೆಗೆ,ಗಣೇಶೋತ್ಸವಕ್ಕೆಜನರನ್ನು ಒಗ್ಗೂಡಿಸುವಲ್ಲಿಮಹತ್ವದ ಪಾತ್ರ ವಹಿಸಿದೆ.
ಧಾರ್ಮಿಕಉತ್ಸವದ ನೆಪದಲ್ಲಿ ಮಿತ್ರ ಮಂಡಳಿಮಾಡಿದ ಬಹುದೊಡ್ಡ ಕೆಲಸ ಉದಯೋನ್ಮುಖಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು.ವಿನಾಯಕ ಮಿತ್ರಮಂಡಳಿಯವೇದಿಕೆಯಲ್ಲಿ ಘಟಾನುಘಟಿ ಗಾಯಕರು,ಕಲಾವಿದರುಪಾಲ್ಗೊಂಡ ಇತಿಹಾಸವಿದೆ.
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ,ಕುನ್ನಕುಡಿವೈದ್ಯನಾಥನ್,ಕದ್ರಿ ಗೋಪಾಲನಾಥ್,ಸಿ.ಅಶ್ವತ್,ಮಾಸ್ಟರ್ಹಿರಣ್ಣಯ್ಯ,ಪುತ್ತೂರು ನರಸಿಂಹನಾಯಕ್, ನಾಗರಾಜ್ಹವಲ್ದಾರ್,ಡಾ.ವಿದ್ಯಾಭೂಷಣ್,ರತ್ನಮಾಲಾಪ್ರಕಾಶ್, ಮಂಜುಳಾಗುರುರಾಜ್,ಎಂ.ಡಿ.ಪಲ್ಲವಿ,ಬಿ.ಕೆ.ಸುಮಿತ್ರಾ,ಬಿ.ಆರ್.ಛಾಯಾ,ರಾಜು ಅನಂತಸ್ವಾಮಿ,ಪ್ರವೀಣ್ಗೋಡ್ಖಿಂಡಿ,ಸಂಗೀತಾ ಕಟ್ಟಿ,ಸುಧಾ ಬರಗೂರು,ದಯಾನಂದ್,ಎಂ.ಎಸ್.ನರಸಿಂಹಮೂರ್ತಿ,ಸರಿಗಮ ವಿಜಿ,ಉಪಾಸನೆ ಸೀತಾರಾಂ,ಮೇಕಪ್ ನಾಣಿಮುಂತಾದ ಪ್ರಸಿದ್ಧ ಕಲಾವಿದರುಕಾರ್ಯಕ್ರಮಗಳನ್ನು ನೀಡಿದ್ದಾರೆ.
1989ರಿಂದ ಪ್ರತಿವರ್ಷ ‘ಗಣಪತಿ ಹೋಮ’ನಡೆಸಿಕೊಂಡು ಬಂದಿರುವುದು ಒಂದುಧಾರ್ಮಿಕ ದಾಖಲೆ.ದತ್ತಿ ಕಾಯ್ದೆಯನ್ವಯನೋಂದಣಿಯಾಗಿರುವ ಸಂಸ್ಥೆಯುಅನುದಾನ ರಹಿತ ಶಾಲೆಗಳಿಗೆ ವಿವಿಧಸೌಲಭ್ಯಗಳನ್ನು ನೀಡುವ ಮೂಲಕಶೈಕ್ಷಣಿಕ ಸೇವೆಯಲ್ಲೂ ತೊಡಗಿಸಿಕೊಂಡಿದೆ.ವನಮಹೋತ್ಸವದಂತಹಪರಿಸರ ಕಾಳಜಿ,ಉಚಿತ ವೈದ್ಯಕೀಯಶಿಬಿರ ಇತ್ಯಾದಿ ಸಾಮಾಜಿಕಬದ್ಧತೆಯನ್ನು ಮಂಡಳಿ ಇರಿಸಿಕೊಂಡಿದೆ.
ಹಿಂದೂಸಮಾಜದ ಉನ್ನತ ಸಾಂಪ್ರದಾಯಿಕಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿಮುಂಚೂಣಿಯಲ್ಲಿರುವ ವಿನಾಯಕಮಿತ್ರಮಂಡಳಿಯು ಕೇವಲ ಗಣೇಶೋತ್ಸವಮಾತ್ರವಲ್ಲದೆ,ಕಾರ್ತಿಕ ಮಾಸದಲ್ಲಿನಡೆಸುವ ದೀಪೋತ್ಸವ,ರಂಗೋಲಿ ಸ್ಪರ್ಧೆಬಹಳ ಪ್ರಸಿದ್ಧವಾಗಿವೆ.
ಯಾವುದೇ ಸಂಘಟನೆಗಳು ಸರಿದಾಯಲ್ಲಿ ಸಾಗಬೇಕಾದರೆ ಪದಾಧಿಕಾರಿಗಳಲ್ಲಿ ಇಗೋ ಇರಬಾರದು. ಹುದ್ದೆ ಯಾವುದೇ ಇದ್ದರೂ ಎಲ್ಲರೂ ಸಮಾನವಾಗಿ ಟೀಮ್ ವರ್ಕ್ ಮಾಡಬೇಕು. ಸಮಯ ಕೊಡುವವರು ಸಂಘಟನೆಯಲ್ಲಿದ್ದರೆ ಉತ್ತಮ ಕೆಲಸ ಸಾಧ್ಯ.