ಶ್ರೀ ಉದ್ಭವ ಶಿವಲಿಂಗೇಶ್ವರ ಬ್ರಹ್ಮರಥೋತ್ಸವ ಸಂಪನ್ನ Udbhava Shivalingeshwara
ಮುಳಬಾಗಿಲು: ನಗರದ ಮುತ್ಯಾಲಪೇಟೆಯ ಶಿವಕೇಶವನಗರದ ಶ್ರೀ ಉದ್ಭವ ಶಿವಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. Udbhava Shivalingeshwara
ಸಾವಿರು ಭಕ್ತರ ಜಯ ಘೋಷಗಳ ಮಧ್ಯೆ ರಥೋತ್ಸವ ಜರುಗಿತು. ಭಕ್ತರು ರಥಕ್ಕೆ ಹಣ್ಣು-ಕಾಯಿ ಸಮರ್ಪಣೆ ಮಾಡಿ ಬಾಳೆಹಣ್ಣು ದವನ ಹೂವು ಎಸೆದು ಹರಿಕೆ ತೀರಿಸಿದರು. ಕೀಲು ಕುದುರೆ ನೃತ್ಯ, ನಾದಸ್ವರ ಡೋಲು ಸೇರಿ ವಿವಿಧ ತಮಟೆ ಕಲಾವಿದರು, ಜನಪದ ಕಲಾ ತಂಡಗಳ ಕಾರ್ಯಕ್ರಮಗಳು ರಥೋತ್ಸವಕ್ಕೆ ಮೆರುಗು ತಂದವು. ಭಕ್ತರಿಗೆ ಸೇವಾಕರ್ತರು ಪಾನಕ, ಕೋಸಂಬರಿ, ಮಜ್ಜಿಗೆ, ಪ್ರಸಾದ ವಿನಿಯೋಗ ಮಾಡಿದರು.
ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಒಂದು ವಾರದಿಂದ ವಿಶೇಷ ಪೂಜೆಗಳು ಹಮ್ಮಿಕೊಂಡಿದ್ದು, ಈ ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.