Sri Rama Saptaha Sampanna 
ರಾಜ್ಯ

ಶ್ರೀರಾಮಸಪ್ತಾಹ ಸಂಪನ್ನ

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿನ ಪುರಾತನ ಶ್ರೀಬ್ರಹ್ಮಪುರಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ 63ನೇ ವರ್ಷದ ಶ್ರೀರಾಮಸಪ್ತಾಹ ಧಾರ್ಮಿಕ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.
ಶ್ರೀರಾಮಸಪ್ತಾಹ ಅಂಗವಾಗಿ ಪ್ರತಿದಿನ ಬೆಳಗ್ಗೆ ಮೂಲ ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ನವಗ್ರಹ ಪೂಜೆ, ಸೂರ್ಯನಮಸ್ಕಾರ, ಲಲಿತಾ ಸಹಸ್ರನಾಮದ ನಂತರ ಮಹಾಮಂಗಳಾರತಿ, ಸಂಜೆ ಅಷ್ಠಾವಧಾನ ಪೂಜೆ, ಶ್ರೀರಾಮಭಜನೆ, ಮಹಾಮಂಗಳಾರತಿಯು ವಿವಿಧ ಸೇವಾಕರ್ತರಿಂದ ನೆರವೇರಿಸಲಾಯಿತು.
ಸಪ್ತಾಹದ ಅಂತಿಮ ದಿನದಂದು ಶ್ರೀಶಾರದಾ ದ್ಯಾನ ಮಂದಿರದಲ್ಲಿ ನವಗ್ರಹ ಹೋಮ, ಶ್ರೀರಾಮತಾರಕ ಹೋಮ, ಶ್ರೀರಾಮಪಟ್ಟಾಭಷೇಕ, ನೆರವೇರಿತು. ಅಲಂಕೃತ ಉತ್ವಮಮೂರ್ತಿಯ ಮೆರವಣಗೆಯು ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ರಾಜಬೀದಿಯಲ್ಲಿ ಸಂಚರಿಸಿತು. ಸೋಮವಾರ ಅವಭೃತ ಸ್ನಾನದೊಂದಿಗೆ ಶ್ರೀರಾಮಸಪ್ತಾಹ ಸಂಪನ್ನಗೊಂಡಿತು.