ಬಸವಕಲ್ಯಾಣದಲ್ಲಿ ಶ್ರೀರಾಮ ನವಮಿ ಮಹೋತ್ಸವದ ಪ್ರಚಾರ ರಥಕ್ಕೆ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು. ಶಾಸಕ ಶರಣು ಸಲಗರ, ಎಂಎಲ್​ಸಿ ಎಂ.ಜಿ.ಮುಳೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಧನರಾಜ ತಾಳಂಪಳ್ಳಿ, ಮಲ್ಲಿಕಾರ್ಜುನ ಗುಂಗೆ, ಸುನೀಲ ಪಾಟೀಲ್​, ಡಾ.ಜಿ.ಎಸ್​.ಭುರಳೆ, ಅರ್ಜುನ ಕನಕ, ಯುವರಾಜ ಭೆಂಡೆ, ಸಂತೋಷ ಸಾಳುಂಕೆ, ಸಂದಿಪ ಬುಯೆ, ಕಿರಣ ಆರ್ಯ, ರಾಜು ಧನ್ನೂರೆ, ರಾಮ ಜಾಧವ ಇತರರಿದ್ದರು. 
ರಾಜ್ಯ

ಶ್ರೀರಾಮ ನವಮಿ ಮಹೋತ್ಸವ 26ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಬಸವಕಲ್ಯಾಣದಲ್ಲಿ ಪ್ರಚಾರ ರಥಕ್ಕೆ ಚಾಲನೆ
ಬಸವಕಲ್ಯಾಣ: ನಗರದಲ್ಲಿ ಶ್ರೀ ರಾಮನ ನವಮಿ ಮಹೋತ್ಸವ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಣೆ ಆಗಲಿ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ ಸದಾಶಯ ವ್ಯಕ್ತಪಡಿಸಿದರು.
ಶ್ರೀ ರಾಮ ನವಮಿ ಉತ್ಸವ ಸಮಿತಿಯಿಂದ ಮಾ.26ರಂದು ಆಯೋಜಿಸಿರುವ ಶ್ರೀ ರಾಮ ನವಮಿ, ಭವ್ಯ ಶೋಭಾಯತ್ರೆ ಹಾಗೂ ಪಲ್ಲಕ್ಕಿ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಪರಿಸರದಲ್ಲಿ ಶನಿವಾರ ಸಂಜೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಅವರು, ಎಲ್ಲರೂ ಒಗ್ಗಟ್ಟಿನಿಂದ ಉತ್ಸವ ಮಾದರಿಯಾಗಿ ಅಚರಿಸೋಣ ಎಂದರು.
ಶ್ರೀರಾಮ ಅಖಂಡ ಭಾರತದ ಸಾಂಸತಿಕ ನಾಯಕ, ಮರ್ಯಾದಾ ಪುರುಷೋತ್ತಮ. ಶ್ರೀ ರಾಮನ ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಶೋಭಾಯಾತ್ರೆಯ ಸಂದರ್ಭದಲ್ಲಿ ಪ್ರಮುಖ ವೃತ್ತಗಳಲ್ಲಿ ಪರಾಯಣಗಳಂಥ ಕಾರ್ಯಕ್ರಮ ಆಯೋಜಿಸಲು ಯೋಚಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಶರಣು ಸಲಗರ, ಎಂಎಲ್​ಸಿ ಎಂ.ಜಿ.ಮುಳೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಮುಖಂಡ ಸುನೀಲ ಪಾಟೀಲ್​, ಬಿಡಿವಿಎಸ್​ ಉಪಾದ್ಯಕ್ಷ ಡಾ.ಜಿ.ಎಸ್​.ಭುರಳೆ, ಬೀದರ್​ ವಿವಿ ಸಿಂಡಿಕೇಟ್​ ಸದಸ್ಯ ಅರ್ಜುನ ಕನಕ, ತಾಪಂ ಕೆಡಿಪಿ ಸದಸ್ಯ ಶಿವಕುಮಾರ ಶಟಗರ ಮಾತನಾಡಿದರು.
ಪ್ರಮುಖರಾದ ದೀಪಕ ಗಾಯಕವಾಡ, ಯುವರಾಜ ಭೆಂಡೆ, ಸಂಜುಕುಮಾರ ಸುಗರೆ, ಜ್ಞಾನೇಶ್ವರ ಮುಳೆ, ರಾಮ ಜಾಧವ, ಅಕಾಶ ಖಂಡಾಳೆ, ರವಿ ಬೊರಾಳೆ, ರವಿ ನಾವದ್ಗೆಕರ್​, ಅರವಿಂದ ಮುತ್ತೆ, ಪ್ರಥ್ವೀಗಿರ ಗೋಸ್ವಾಮಿ, ಚನ್ನಪ್ಪ ರಾಜಪುರೆ, ರಾಜು ಮಂಠಾಳೆ, ತಾತೇರಾವ ಪಾಟೀಲ್​, ಸಂತೋಷ ಸಾಳುಂಕೆ, ಸಂದೀಪ ಬುಯೆ, ಕಿರಣ ಆರ್ಯ, ರಾಜು ಧನ್ನೂರೆ, ರಾಮ ಜಾಧವ, ದತ್ತು ಭೆಂಡೆ, ಕೃಷ್ಣ ಗೋಣೆ, ದಿಗಂಬರ ಜಲ್ದೆ, ದತ್ತು ಚೌಧರಿ, ಪ್ರದಿಪ ಗಡವಂತೆ, ಶಿವಕುಮಾರ ಸ್ವಾಮಿ, ರವಿ ಡೆಂಗಳೆ, ರಾಜು ಕಾಲಿಕರ್​, ಮನೋಜ ಮಾಶೆಟ್ಟಿ, ವಿನೋದ ಬಡಗೆಕರ್​, ಸೋಮಶೇಖರ ರಾಠೋಡ, ಚೇತನ ರ್ಜಗೆ ಇದ್ದರು.
ಶೋಭಾಯತ್ರೆ: ಮಾ.26ರಂದು ಶ್ರೀ ರಾಮ ನವಮಿ ಮಹೋತ್ಸವ, ಭವ್ಯ ಶೋಭಾಯತ್ರೆ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಅಂದು ಸಂಜೆ 4ಕ್ಕೆ ಕಾಳಿಗಲ್ಲಿಯ ಶ್ರೀ ಬಾಲಾಜಿ ಮಂದಿರದಿಂದ ಆರಂಭವಾಗಿ ಬಸವೇಶ್ವರ ದೇವಸ್ಥಾನ, ಗಾಂಧಿ ವೃತ್ತದ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದವರೆಗೆ ಭವ್ಯ ಶೋಭಾಯತ್ರೆ ಹಾಗೂ ಪಲ್ಲಕ್ಕಿ ಮೆರವಣಿಗೆ ಸಾಂಸತಿಕ ವೈಭವದೊಂದಿಗೆ ನಡೆಯಲಿದೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.