- ಅಧಿವೇಶನದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ಮನವಿ
- ವಿವಿಧ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡಿ
ಯಾದಗಿರಿ: ವಡಗೇರಾ ತಾಲೂಕಿನಲ್ಲಿ ಕಳೆದ ಮಂಗಳವಾರ ರಾತ್ರಿ ಹಾಗೂ ಬುಧವಾರ ಸುರಿದ ಮಳೆ, ಗಾಳಿಯಿಂದ ಚನ್ನೂರು, ಗೊಂದೇನೂರು, ಐಕೂರು, ಕೊಂಕಲ್ ಸೇರಿ ಹಲವು ಗ್ರಾಮಗಳಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಭತ್ತ, ಜೋಳ, ಸಜ್ಜೆ ಹಾಗೂ ಹತ್ತಿ ಬೆಳೆ ಹಾನಿಗೊಳಗಾಗಿದ್ದು, ಜಿಲ್ಲಾಧಿಕಾರಿಗಳಿಂದ ತುರ್ತು ವರದಿ ಪಡೆದು ರೈತರಿಗೆ ಶ್ರೀ ಪರಿಹಾರ ನೀಡುವಂತೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಕಂದಾಯ ಸಚಿವರಿಗೆ ಮನವಿ ಮಾಡಿದರು.
ಅಧಿವೇಶನದ ಶೂನ್ಯ ವೇಳೆಯಲ್ಲಿ ತಮ್ಮ ಮತೇತ್ರದ ವಿವಿಧ ಅಭಿವೃದ್ಧಿ ವಿಷಯ ಕುರಿತು ಸುಮಾರು 12 ನಿಮಿಷ ಮಾತನಾಡಿ ಗಮನ ಸೇಳೆದ ಅವರು, ಈ ಹಿಂದೆ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಇನ್ನೂ ಪರಿಹಾರ ಸಿಗದಿರುವುದನ್ನು ಸದನದ ಗಮನ ಸೆಳೆದರು.
ನಗರದ ಯಿಮ್ಸ್ನಲ್ಲಿ 200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 100 ಕೋಟಿ ರೂ. ಅನುದಾನ ಹಾಗೂ ಯುಜಿಡಿ (ಅಂಡರ್ಗ್ರೌಂಡ್ ಡೆನೇಜ್) ಯೋಜನೆಗೆ 287 ಕೋಟಿ ರೂ. ಅನುದಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರಿಗೆ ಶಾಸಕ ಧನ್ಯವಾದಗಳು ಸಲ್ಲಿಸಿದರು.
ದೊರನಹಳ್ಳಿಗೆ ಕಾಲೇಜು ಮಂಜೂರು ಮಾಡಿದಂತೆ ಹೊಸ ತಾಲೂಕು ಕೇಂದ್ರವಾದ ವಡಗೇರಾಕ್ಕೂ ಕೂಡ ಪಿಯು ಕಾಲೇಜು ಮಂಜೂರು ಮಾಡಬೇಕು. ಸುತ್ತಮುತ್ತಲಿನ ವಿದ್ಯಾರ್ಥಿಗಳು ದೂರದ ಉರಿಗೆ ತೆರಳಬೇಕಾದ ಪರಿಸ್ಥಿತಿ ಇರುವ ಕಾರಣ ತುರ್ತಾಗಿ ಕಾಲೇಜು ಅಗತ್ಯವಿದೆ ಎಂದು ಹೇಳಿದರು.
ಯಾದಗಿರಿ ೇತ್ರದಲ್ಲಿರುವ ಪ್ರಾಚಿನ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಜರಾಯಿ ಸಚಿವರನ್ನು ಮನವಿ ಮಾಡಿದರು. ಇಲ್ಲಿನ ಸರ್ಕಾರಿ ವಸತಿ ನಿಲಯಗಳು ಶಿಥಿಲಾವಸ್ಥೆಗೊಂಡಿವೆ. ಕಾರಣ ಹೊಸ ಕಟ್ಟಡಕ್ಕೆ ಅನುದಾನ ನೀಡುವಂತೆ ಸಚಿವ ಜಾರಕಿಹೊಳಿ ಅವರಿಗೆ ಶಾಸಕರು ಮನವಿ ಮಾಡಿದರು.
ಕಳೆದ ಮೂರು ವರ್ಷಗಳಲ್ಲಿ ಮನೆಗಳು ಮಂಜೂರಾಗಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ನೀಡಬೇಕು. ಅಲ್ಲದೆ ವಡಗೇರಾ ಪಟ್ಟಣದಲ್ಲಿ 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 20.58 ಕೋಟಿ ರೂ.ಮಂಜೂರು, ಯಾದಗಿರಿ ಸರ್ಕಾರಿ ಜಿಟಿಟಿಸಿ ಕಾಲೇಜು ಸ್ಥಾಪನೆಗೆ 73 ಕೋಟಿ ರೂ. ಅನುದಾನ ನೀಡಬೇಕು ಎಂದರು.
75 ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಿ
ವನಮಾರಪಲ್ಲಿ&ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸುಮಾರು 100 ವರ್ಷ ಹಳೆಯ ಸೇತುವೆ ಜೀರ್ಣಾವಸ್ಥೆಯಲ್ಲಿದ್ದು, ಸಾರ್ವಜನಿಕರ ಸುರತೆ ದೃಷ್ಟಿಯಿಂದ 75 ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕು. ನಗರದಲ್ಲಿ ಪ್ರವಾಸಿಗರಿಗಾಗಿ ವಸತಿ ಸಂಕೀರ್ಣ ಹಾಗೂ ಸರ್ಕಾರಿ ಕಟ್ಟಡಗಳ ಪುನರ್ ನಿರ್ಮಾಣಕ್ಕೂ ಅನುದಾನ ನೀಡುವಂತೆ ಮನವಿ ಮಾಡಿದರು.
ಹಿರೇಹಾನೂರು ಗ್ರಾಮದ ಬಳಿ ಭೀಮಾ ನದಿಗೆ ನಿರ್ಮಿಸಿರುವ ಬ್ರಿಜ್ಡ್&ಕಂ&ಬ್ಯಾರೇಜ್ ಗೇಟ್ಗಳು ಹಾಳಾಗಿದ್ದು ನೀರಿನ ಸೋರಿಕೆಯಾಗುತ್ತಿದೆ. 75 ಕೋಟಿ ರೂ. ವೆಚ್ಚದಲ್ಲಿ ಹೊಸ ಮೆಕಾನಿಕಲ್ ವರ್ಟಿಕಲ್ ಗೇಟ್ ಅಳವಡಿಸುವ ಕಾಮಗಾರಿ ತಣ ಆರಂಭಿಸುವಂತೆ ಸಣ್ಣ ನೀರಾವರಿ ಸಚಿವಗೆ ಒತ್ತಾಯಿಸಿದರು.
ಪ್ರತ್ಯೇಕ ಜೆಸ್ಕಾಂ ಉಪ ವಿಭಾಗ ಕಚೇರಿ ಸ್ಥಾಪಿಸಿ
ಯಾದಗಿರಿ ನಗರದಲ್ಲಿ ಪ್ರತ್ಯೇಕ ಜೆಸ್ಕಾಂ ಉಪ ವಿಭಾಗ ಕಚೇರಿ ಸ್ಥಾಪನೆ, ವಡಗೇರಾದಲ್ಲಿ ಜೆಸ್ಕಾಂ ಉಪ ವಿಭಾಗ ಮಂಜೂರು ಹಾಗೂ ಯಾದಗಿರಿ ಜಿಲ್ಲೆಗೆ ಹೊಸ ಜೆಸ್ಕಾಂ ವೃತ್ತ ಕಚೇರಿ ರಚಿಸುವಂತೆ ಮನವಿ ಮಾಡಿದರು. ಅರಕಲ್ ಬಂಡ ಹಾಗೂ ಗಡ್ಡೆಸೂಗುರು ಗ್ರಾಮಗಳಲ್ಲಿ ಮಂಜೂರಾದ 110 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಶ್ರೀ ಆರಂಭಿಸುವಂತೆ ಆಗ್ರಹಿಸಿದರು.
ಗ್ಯಾರಂಟಿಯಿಂದ ಬಡವರ ಬದುಕು ಹಸನು
ಬಜೆಟ್ ಕುರಿತು ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 51,000 ಕೋಟಿ ಮೀಸಲು ಇಟ್ಟಿರುವುದು ಸರ್ಕಾರದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತೋರಿಸುತ್ತದೆ ಮಹಿಳೆಯರಿಗೆ ಶಕ್ತಿ ಯೋಜನೆ, ಗೃಹಲ್ಮ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದರು.