ರಾಯಲ್ಪಾಡು ಸರ್ಕಾರಿ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ಕೃಷ್ಣ ಹಾಗೂ ರಾಧೆಯ ವೇಷ&ಭೂಷಣ ಹಾಕಿದ್ದರು. ಶಿಕ್ಷಕರಾದ ಆರ್​.ಎನ್​.ಸೋಮಶೇಖರರೆಡ್ಡಿ, ನಾರಾಯಣಸ್ವಾಮಿ, ರಾಜಶೇಖರ್​, ಅಥಿತಿ ಶಿಕ್ಷಕಿ ನೇತ್ರಾವತಿ ಇದ್ದರು.  
ರಾಜ್ಯ

ಶ್ರೀಕೃಷ್ಣನ ಬೋಧನೆಗಳು ಸನ್ಮಾರ್ಗಕ್ಕೆ ಪ್ರೇರಣೆ

ಕೋಲಾರ ಡೆಸ್ಕ್
ರಾಯಲ್ಪಾಡು :ಭಾರತ ವರ್ಷವಿಡೀ ಹಲವು ಹಬ್ಬಗಳನ್ನು ಆಚರಿಸುವ ವೈವಿದ್ಯಮಯ ದೇಶವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿಮೆಂಟ್​ ನಾರಾಯಣಸ್ವಾಮಿ ಹೇಳಿದರು.
ರಾಯಲ್ಪಾಡು ಸರ್ಕಾರಿ ಪಬ್ಲಿಕ್​ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿಗೆ ಚಾಲನೆ ನೀಡಿ ಮಾತನಾಡಿ, ಕೃಷ್ಣನದು ಮಹಾ ಭಾರತದ ಪಾತ್ರಗಳಲ್ಲಿ ಮಹತ್ವದ ಪಾತ್ರ. ಮಹಾ ಕಾವ್ಯಗಳು ಭಾರತೀಯ ಸಂಸತಿಯ ಪ್ರತಿಕವಾಗಿ ಸನ್ಮಾರ್ಗ ತೋರಿಸುವ ಸಾಧನ. ಆದ್ದರಿಂದ ಪ್ರತಿಯೊಬ್ಬರೂ ರಾಮಾಯಣ, ಮಹಾಭಾರತ ಓದಬೇಕು. ಹಿರಿಯರು ಮಕ್ಕಳಿಗೆ ಮಹಾ ಕಾವ್ಯದ ಕತೆಗಳನ್ನು ಓದಲು ತಿಳಿಸಬೇಕು. ಜತೆಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಬೇಕು ಎಂದರು.
ಈ ಹಬ್ಬವು ಪ್ರೀತಿ, ಭಕ್ತಿ, ಧರ್ಮದ ಮಾರ್ಗ ಮತ್ತು ಒಳ್ಳೆಯತನದ ಸಂದೇಶ ಸಾರುತ್ತದೆ. ಶ್ರೀ ಕೃಷ್ಣನ ಬಾಲ್ಯದ ಲೀಲೆಗಳು ಮತ್ತು ಗೀತೆಯ ಬೋಧನೆಗಳು ಸದಾ ಮಾರ್ಗದರ್ಶಿಯಾಗಿವೆ ಎಂದರು.
ಮುಖ್ಯಶಿಕ್ಷಕ ಟಿ.ಆಂಜಪ್ಪ ಮಾತನಾಡಿ, ಕೃಷ್ಣನು ಪ್ರೀತಿ, ಆನಂದವನ್ನು ಭಗವದ್ಗೀತೆಯ ಮೂಲಕ ಸತ್ಕರ್ಮ ಮತ್ತು ಜ್ಞಾನದ ಸಂದೇಶವನ್ನು ಮನುಕುಲಕ್ಕೆ ನೀಡಿದನು. ವಿದ್ಯಾರ್ಥಿಗಳು ಕೃಷ್ಣನ ಜೀವನದ ಕುರಿತು ಅರಿತುಕೊಂಡು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.