ಶ್ರೀಕೋದಂಡರಾಮಸ್ವಾಮಿ ರಥೋತ್ಸವ ಅದ್ದೂರಿ Kodandaramaswamy  
ರಾಜ್ಯ

ಶ್ರೀಕೋದಂಡರಾಮಸ್ವಾಮಿ ರಥೋತ್ಸವ ಅದ್ದೂರಿ Kodandaramaswamy

ಬೂದಿಕೋಟೆ: ಗ್ರಾಮದ ಗಾಣಿಗರಪೇಟೆಯಲ್ಲಿ ನೆಲೆಸಿರುವ ಶ್ರೀ ಸಿತಾರಾಮ ಹನುಮಂತ ಸಮೇತ ಕೋದಂಡರಾಮಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.Kodandaramaswamy
ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಸಹಸ್ರ ನಾಮಾರ್ಚನೆ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನೆರವೇರಿತು.
ರಥೋತ್ಸವವು 12.30ಕ್ಕೆ ದೇವಾಲಯದಿಂದ ಹೊರಟು ನಗರ್ತಪೇಟೆ, ರೈತರಪೇಟೆ, ಗಾಣಿಗರಪೇಟೆ ಮತ್ತು ದೇಸಿಂಗರಾಜಪೇಟೆ ಮೂಲಕ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಸಂಜೆ 6.30ಕ್ಕೆ ಮತ್ತೆ ದೇವಾಲಯ ತಲುಪಿತು.
ಭಕ್ತರು ಜೈ ಶ್ರೀ ರಾಮ್​ ಘೋಷಣೆ ಕೂಗುತ್ತ ರಥಕ್ಕೆ ದವನ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಗ್ರಾಮದ ಹಲವೆಡೆ ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ ನೀಡಲಾಯಿತು. ರಥೋತ್ಸವಕ್ಕೆ ಸುತ್ತಮುತ್ತಲ್ಲಿನ ಗ್ರಾಮಸ್ಥರು ಸೇರಿ ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ರಥಕ್ಕೆ ವಿವಿಧ ಹೂವು, ಬಾಳೆದಿಂಡಿನ ಮಾಡಲಾಗಿತ್ತು. ಅರ್ಚಕ ವೇಣುಗೋಪಾಲಚಾರ್ಯ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದವು.
ಡೊಳ್ಳು ಕುಣಿತ, ಬ್ಯಾಂಡ್​ಸೆಟ್​ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಜನರ ಗಮನ ಸೆಳೆಯಿತು.
ದೇವಾಲಯ ಟ್ರಸ್ಟ್​ನ ಅಧ್ಯಕ್ಷ ಜೆ.ಎಂ.ರಾಜಣ್ಣ ಶೆಟ್ಟಿ, ಸಮಾಜ ಸೇವಕ ಎ.ಬಾಬು, ಅಮರಬಾಬು, ಎಚ್​.ಎಲ್​.ನಾಗರಾಜ್​, ಮುನಿಸ್ವಾಮಿ ಶೆಟ್ಟಿ, ಎ.ಪ್ರಶಾಂತ್​, ಬಿ.ಕೃಷ್ಣ್ಣಪ್ಪ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಆರ್​ ಮಂಜುನಾಥ್​, ಬಿ.ವಿ.ಭಾಸ್ಕರ್​, ಎಸ್​.ಎಂ ಗೋಪಾಲ್​, ರಾಮು, ಜೆ.ಎಂ.ಸಿ ರಾಜು, ಟೇಲರ್​ ರಾಮು, ಗಿರಿಧರ್​, ಮುರಳಿ, ಎಸ್​.ಮಹೇಶ್​, ಸುದಿ, ಬಿ.ಆರ್​.ಬಾಲಾಜಿ, ಬಿ.ಎನ್​.ಉದಯ್​ ಕುಮಾರ್​, ಚಿರು ಇದ್ದರು.