ಆನೇಕಲ್​ ತಾಲೂಕಿನ ನೆರಳೂರಿನ ಕಾಶಿ ವಿಶ್ವನಾಥೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಸಂಭ್ರಮದಿಂದ ನೆರವೇರಿತು. 
ರಾಜ್ಯ

ಶ್ರೀ ಕಾಶಿ ವಿಶ್ವನಾಥೇಶ್ವರಸ್ವಾಮಿ ರಥೋತ್ಸವ ಸಂಪನ್ನ / ANEKAL

ಆನೇಕಲ್​: ತಾಲೂಕಿನ ನೆರಳೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಕಾಶಿ ವಿಶ್ವನಾಥೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ರಥೋತ್ಸವ ಅಂಗವಾಗಿ ನೂರಾರು ಮಹಿಳೆಯರು ತಮಟೆ ವಾದ್ಯದ ಮೂಲಕ ಒಟ್ಟಾಗಿ ಆಗಮಿಸಿ ರಥಕ್ಕೆ ಆರತಿ ಬೆಳಗಿದರು. ಜತೆಗೆ ಹೋಮ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು. ರಥೋತ್ಸವವನ್ನು ಗ್ರಾಮದ ಜನರು ಶ್ರದ್ಧಾ ಭಕ್ತಿಯಿಂದ ಎಳೆದ ದೃಶ್ಯ ಕಂಡು ಬಂತು. ಭಕ್ತರು ರಥದ ಮೇಲೆ ಬಾಳೆ ಹಣ್ಣು ಎಸೆದು ಗೋವಿಂದ ಗೋವಿಂದ ಎಂದು ಜಯ ೂಷಣೆ ಕೂಗಿದರು.
ಜತೆಗೆ ಭಕ್ತರಿಗೆ ಅರವಂಟಿಗೆ ಮತ್ತು ದಾಸೋಹ ಕುಟೀರಗಳನ್ನು ರಸ್ತೆ ಉದ್ದಕ್ಕೂ ಆಯೋಜಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ನೆರಳೂರು ಗ್ರಾಮಸ್ಥರು ಭಾಗವಹಿಸಿದ್ದರು.