ದಾವಣಗೆರೆಯಲ್ಲಿ ನಡೆಯುವ ಶ್ರೀಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದ ಪೂರ್ವಭಾವಿ ಸಭೆಯು ಶ್ರೀರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಿತು. ವಿವಿಧ ಮಠಗಳ ಶ್ರೀಗಳು, ಮುಖಂಡರು ಪಾಲ್ಗೊಂಡಿದ್ದರು.  
ರಾಜ್ಯ

ಮಾ.23ರಿಂದ ದಾವಣಗೆರೆಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ

ಪ್ರಮುಖ ಮುಖ್ಯಾಂಶಗಳು

  • ಮಾ.23ರಿಂದ ದಾವಣಗೆರೆಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ
  • ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀರಂಭಾಪುರಿ ಜಗದ್ಗುರುಗಳು ಮಾಹಿತಿ
  • ಪಂಚಸೂತ್ರಗಳ ಕುರಿತು ಮೂರುದಿನಗಳ ಕಾಲ ವಿಸ್ತೃತ ಉಪನ್ಯಾಸ ಆಯೋಜನೆ

ಬೆಂಗಳೂರು:ವೀರಶೈವ ಧರ್ಮದಪಂಚಪೀಠಗಳು ಪ್ರತಿ ವರ್ಷ ಯುಗಾದಿಹೊಸ ವರ್ಷದ ಪಂಚಮಿಯಿಂದ ಸಪ್ತಮಿಯವರಿಗೆ ಆಚರಿಸಿಕೊಂಡು ಬರುವ ಶ್ರೀಜಗದ್ಗುರುಪಂಚಾಚಾರ್ಯ ಯುಗಮಾನೋತ್ಸವವುಇದೇ ಮಾ. 23, 24 ಮತ್ತು25ರಂದುದಾವಣಗೆರೆ ಮಹಾನಗರದ ಶ್ರೀಮದ್ಅಭಿನವ ರೇಣುಕ ಮಂದಿರದ ಶ್ರೀರಂಭಾಪುರಿಜಗದ್ಗುರು ವೀರಗಂಗಾಧರ ಮಂಗಳಭವನದಲ್ಲಿಶ್ರೀಜಗದ್ಗುರು ಪಂಚಪೀಠಾಧೀಶ್ವರರಸಾನಿಧ್ಯದಲ್ಲಿ ನಡೆಯಲಿದೆ ಎಂದುಪಂಚಪೀಠಗಳ ಒಕ್ಕೂಟದ ಸಂಚಾಲಕರಾದಬಾಳೆಹೊನ್ನೂರು ಶ್ರೀರಂಭಾಪುರಿಡಾ. ವೀರಸೋಮೇಶ್ವರಜಗದ್ಗುರುಗಳು ತಿಳಿಸಿದ್ದಾರೆ.

ಜೆ.ಪಿ.ನಗರದಶ್ರೀಸೋಮೇಶ್ವರ ಸಭಾಭವನದಲ್ಲಿಜರುಗಿದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು,ಸಕಲ ಜೀವಾತ್ಮರಿಗೂಸದಾ ಒಳಿತನ್ನೆ ಬಯಸಿದ ವೀರಶೈವಧರ್ಮದ ಸೈದ್ಧಾಂತಿಕ ತತ್ವಸಿದ್ಧಾಂತಗಳನ್ನು ತಿಳಿಸುವಮತ್ತು ಅವುಗಳನ್ನು ಪರಿಪಾಲಿಸಿಕೊಂಡುಬರುವ ನಿಟ್ಟಿನಲ್ಲಿ ಈ ಸಮಾರಂಭಬಹಳ ಔಚಿತ್ಯಪೂರ್ಣವಾಗಿದೆ. ಸಮ್ಮೇಳನದಸರ್ವಾಧ್ಯಕ್ಷರನ್ನಾಗಿ ಮಹಾರಾಷ್ಟ್ರದ ಗೌಡಗಾವ್ ಹಿರೇಮಠದ ಡಾ.ಜಯಸಿದ್ದೇಶ್ವರಶಿವಾಚಾರ್ಯ ಸ್ವಾಮಿಗಳನ್ನುಆಯ್ಕೆ ಮಾಡಲಾಗಿದೆ.ಶ್ರೀರಂಭಾಪುರಿಶ್ರೀಉಜ್ಜಯಿನಿ ಶ್ರೀಶೈಲ ಮತ್ತುಶ್ರೀಕಾಶಿ ಉಭಯ ಜಗದ್ಗುರುಗಳುಸಾನಿಧ್ಯ ವಹಿಸಿ ಧರ್ಮ ಸಂದೇಶನೀಡಲಿದ್ದಾರೆ.

ಇದೇವೇಳೆ ಕಾಶಿ ಡಾ.ಚಂದ್ರಶೇಖರಜಗದ್ಗುರುಗಳಿಂದ ರಚಿಸಲ್ಪಟ್ಟವೀರಶೈವ ಪಂಚ ಸೂತ್ರಗಳು ಅಮೂಲ್ಯಕೃತಿಯನ್ನು ಅಮೆರಿಕಾ ಚಿಕಾಗೋದಸಂಶೋಧಕರಾದ ರವಿ ಹಂಜ್ ಬಿಡುಗಡೆಮಾಡಲಿದ್ದಾರೆ.ಸಾಹಿತಿಗಳಾದಡಾ. ಸಿ.ಶಿವಕುಮಾರಸ್ವಾಮಿ ಗ್ರಂಥ ಪರಿಚಯ ಮಾಡಲಿದ್ದಾರೆ. ಪಂಚ ಸೂತ್ರಗಳಬಗ್ಗೆ ಶಿವಗಂಗೆ,ನರೇಗಲ್ ಮಠದಶ್ರೀಗಳು, ವಿಜಯವಾಣಿ ಹಿರಿಯ ವರದಿಗಾರ ಪ್ರಶಾಂತರಿಪ್ಪನ್‌ಪೇಟೆ ಉಪನ್ಯಾಸನಡೆಸಿಕೊಡಲಿದ್ದಾರೆ.ಎಮ್ಮಿಗನೂರು,ವಿಭೂತಿಪುರ ಮಠದಶ್ರೀಗಳು,ಸಾಹಿತಿಗಳಾದಡಾ..ಸಿ.ವಾಲಿಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.ಸಿಂಧಗಿ ಎಡೆಯೂರು,ಮುಕ್ತಿಮಂದಿರ,ಅವರಗೊಳ್ಳ,ಹೊನ್ನ ಕಿರಣಗಿ,ಬಿಳಿಕಿ ಶ್ರೀಗಳುನೇತೃತ್ವ ವಹಿಸಲಿದ್ದಾರೆ.ಅಖಿಲ ಭಾರತವೀರಶೈವ ಮಹಾಸಭೆಯ ರಾಷ್ಟ್ರೀಯಅಧ್ಯಕ್ಷ ಈಶ್ವರ ಖಂಡ್ರೆ ಕಾರ್ಯಕ್ರಮಉದ್ಘಾಟಿಸಲಿದ್ದು,ಸಚಿವಎಸ್.ಎಸ್.ಮಲ್ಲಿಕಾರ್ಜುನಸೇರಿದಂತೆ ವಿವಿಧ ಮುಖಂಡರುಪಾಲ್ಗೊಳ್ಳಲಿದ್ದಾರೆ.

ಪೂರ್ವಭಾವಿಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು,ದಾವಣಗೆರೆಯಎಸ್.ಜಿ.ಉಳುವಯ್ಯ,ಎನ್..ಮುರುಗೇಶಆರಾಧ್ಯ,ಬಿ.ಎಮ್.ವಾಗೀಶಸ್ವಾಮಿ,ರಾಜ್ಯ ಸರ್ಕಾರಿನೌಕರರ ಸಂಘದ ಅಧ್ಯಕ್ಷ ಷಡಕ್ಷರಿಮತ್ತಿತರರು ಪಾಲ್ಗೊಂಡಿದ್ದರು.