ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದ ಅಭಿವೃದ್ಧಿ ಸಂಬಂಧ ಕ್ರೀಡಾಂಗಣ ವೀಕ್ಷಿಸಿದ ಶಾಸಕ ಶಾಸಕ ಶರತ್ ಬಚ್ಚೇಗೌಡ.
ಹೊಸಕೋಟೆ : ಸರ್ಕಾರದ 4 ಕೋಟಿ ಹಾಗೂ 3 ಕೋಟಿ ಸಿಎಸ್ಆರ್ ಅನುದಾನದಲ್ಲಿ 8 ರನ್ನಿಂಗ್ ಮತ್ತು ವಾಕಿಂಗ್ ಟ್ರ್ಯಾಕ್, ಎರಡು ವಾಲಿಬಾಲ್ ಕೋರ್ಟ್, 2 ಕಬಡ್ಡಿ ಕೋರ್ಟ್ ಹಾಗೂ ಪ್ರೇಕ್ಷಕರ ಗ್ಯಾಲರಿಗೆ ಹೈಟೆಕ್ ಸ್ಪರ್ಶ ನೀಡಲು ನೀಲಿನಕ್ಷೆ ತಯಾರಿಸಲಾಗಿದ್ದು, ಇಂಜಿನಿಯರ್ ಹಾಗೂ ಸ್ಥಳಿಯ ಕ್ರೀಡಾಪಟುಗಳೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಸದ್ಯ 6 ಟ್ರ್ಯಾಕ್ಗಳನ್ನೊಳಗೊಂಡ ಕ್ರೀಡಾಂಗಣ ಕ್ರಿಕೆಟ್, ಜಾಗಿಂಗ್, ವಾಕಿಂಗ್ಗೆ ಮಾತ್ರ ಸೀಮಿತವಾಗಿತ್ತು. ಕ್ರೀಡಾಂಗಣದಲ್ಲಿರುವ ವ್ಯಾಯಾಮ ಶಾಲೆ ಪುರಾತನವಾಗಿದ್ದು, ಅದನ್ನು ತೆರವುಗೊಳಿಸಿ ನೂತನ ವ್ಯಾಯಾಮ ಕೊಠಡಿ ಜತೆಗೆ ಶೌಚಗೃಹ ನಿಮಾರ್ಣ ಕಾರ್ಯವನ್ನು ಎರಡನೇ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕ್ರೀಡಾಂಗಣಕ್ಕೆ ಶ್ರೀ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಯೋಜನಾ ಪ್ರಾಧಿಕಾರ ನಿರ್ದೇಶಕ ಡಾ.ಎಚ್.ಎಂ.ಸುಬ್ಬರಾಜ್, ಕೆ.ಸಿ.ಸುರೇಶ್ ಗೌಡ, ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್, ಮುಖಂಡರಾದ ಮಂಜುನಾಥ್, ಅರುಣ್ ಕುಮಾರ್, ಸೂರ್ಯ, ಹಿರಿಯ ಕ್ರೀಡಾಪಟುಗಳಾದ ಸೋಮಸುಂದರ್, ಲಕ್ಷ$್ಮಣ್ ಇತರರು ಇದ್ದರು.
ಈ ಮೊದಲು 6 ಟ್ರ್ಯಾಕ್ಗಳನ್ನೊಳಗೊಂಡ ಕ್ರೀಡಾಂಗಣ ಆಗಿದ್ದು, ಶಾಲಾ ಮತ್ತು ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ 8 ಟ್ರಾ$್ಯಕ್ ನಿಮಾರ್ಣ ಮಾಡುವುದರಿಂದ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನೂ ಆಯೋಜನೆ ಮಾಡಬಹುದಾಗಿದೆ. ತಾಲೂಕಿನ ಕ್ರೀಡಾಪಟುಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾದಲ್ಲಿ ಬೇರೆ ಕ್ರೀಡಾಂಗಣಕ್ಕೆ ಹೋಗಿ ಸ್ಪರ್ಧಿಸುವ ಪ್ರಸಂಗ ಬರುವುದಿಲ್ಲ.