ದೊಡ್ಡಮ್ಮ ತಾಯಿ, ಚಿಕ್ಕಮ್ಮ ತಾಯಿ ದೇವಿಯ ವಾರ್ಷಿಕ ಮಹೋತ್ಸವ ಪ್ರಯುಕ್ತ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. 
ರಾಜ್ಯ

ಶ್ರೀದೊಡ್ಡಮ್ಮ ತಾಯಿ ವಾರ್ಷಿಕ ಮಹೋತ್ಸವ

ವಿರಾಜಪೇಟೆ: ವಿರಾಜಪೇಟೆ ನಗರದ ಹರಿಕೇರಿಯ ಶ್ರೀ ದೊಡ್ಡಮ್ಮ ತಾಯಿ, ಚಿಕ್ಕಮ್ಮ ತಾಯಿ ದೇವರ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ನಡೆಯಿತು. ಹಬ್ಬದಂದು ಬೆಳಗ್ಗೆ ಗಣಪತಿ ಹೋಮವನ್ನು ನೆರವೇರಿಸುವುದರ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ನಂತರ ಭೇತ್ರಿಯಿಂದ ಕಳಸಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ವಿವಿಧ ಅರ್ಚನೆಗಳು ನಡೆದವು. ಮಧ್ಯಾಹ್ನ ಮಹಾ ಪೂಜೆ , ಪ್ರಸಾದ ವಿತರಣೆ ಮತ್ತು ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.