ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಅ.19ರಂದು ನಡೆಯಲಿರುವ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯ ಭಕ್ತರಿಗೆ ನೀಡಿದರು. ಮಲ್ಲಿನಾಥ ಹಿರೇಮಠ, ನಾಗೇಶ ಮಹಾಜನ್, ದಯಾನಂದ ಹಿರೇಮಠ, ನಾಗೇಂದ್ರಪ್ಪ ಪಾಟೀಲ್ ಇದ್ದರು.
- ಹಾರಕೂಡ ಶ್ರೀ ಡಾ.ಚನ್ನವಿರ ಶಿವಾಚಾರ್ಯ ಮಾಹಿತಿ
- ಸಂಸ್ಥಾನ ಹಿರೇಮಠದಲ್ಲಿ ಪ್ರದಾನ ಅ.19ಕ್ಕೆ
ಬಸವಕಲ್ಯಾಣ: ಹಾರಕೂಡದ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪ್ರತಿಷ್ಠಿತ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜ ಪದ್ಮಶ್ರೀ ಪಂಡಿತ ಡಾ.ಎಂ. ವೆಂಕಟೇಶಕುಮಾರ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯ ಪ್ರಕಟಿಸಿದರು.
ಪ್ರಶಸ್ತಿ ಒಂದು ಲಕ್ಷ ರೂ. ನಗದು, ಎರಡು ತೊಲ ಚಿನ್ನದ ಪದಕ ಮತ್ತು ಫಲಕವನ್ನು ಒಳಗೊಂಡಿದೆ. ಹಾರಕೂಡ ಹಿರೇಮಠದಲ್ಲಿ ಅ.19ರಂದು ನಡೆಯಲಿರುವ ಶ್ರೀ ಗುರುಲಿಂಗ ಶಿವಾಚಾರ್ಯರ 57ನೇ ಪುಣ್ಯ ಸ್ಮರಣೋತ್ಸವ ಹಾಗೂ 40ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರು&ಶಿಷ್ಯ ಪರಂಪರೆಯಡಿ ಗಾನಯೋಗಿ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳು ವೆಂಕಟೇಶಕುಮಾರ್ ಅವರಿಗೆ ಕಿರಾಣಾ ಮತ್ತು ಗ್ವಾಲಿಯರ್ ರಾನಾ ಗಾಯನ ಶೈಲಿಯಲ್ಲಿ 12 ವರ್ಷ ಕಠಿಣ ತರಬೇತಿ ನೀಡಿ ಶಾಸಿಯ ಸಂಗೀತದ ಭದ್ರ ಬುನಾದಿ ಹಾಕಿಕೊಟ್ಟರು. ಪಂಡಿತಜೀ ಭಾರತ ಹಾಗೂ ವಿದೇಶದ ಪ್ರತಿಷ್ಠಿತ ಸಂಗೀತ ಮಹೋತ್ಸವ ಮತ್ತು ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಶ್ರೀಯುತರ ಮಹೋನ್ನತ ಸಾಧನೆಗಾಗಿ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿವೆ. ನಾಡೋಜ ಪ್ರಶಸ್ತಿ, ಪದ್ಮಶ್ರೀ, ಕಾಳಿದಾಸ ಸಮ್ಮಾನ, ವತ್ಸಲಾ ಭೀಮಸೇನ ಜೋಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರ ಮುಡಿಗೇರಿವೆ ಎಂದು ಹೇಳಿದರು.
ಮಲ್ಲಿನಾಥ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ದಯಾನಂದ ಹಿರೇಮಠ ಇದ್ದರು.
ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ 2011ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಆರಂಭಿಸಿದ್ದು, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯ, ಸಂಸತಿ, ಕಲೆ, ಸಂಗೀತ ಸೇರಿ ವಿವಿಧ ೇತ್ರದ ಸಾಧಕರನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಧರ್ಮ, ಸಾಹಿತ್ಯ, ಸಂಗೀತ ಸಂಸತಿ, ಕ್ರೀಡೆ ಹೀಗೆ ಎಲ್ಲ ೇತ್ರಗಳಲ್ಲಿ ಕಾರ್ಯ ಮಾಡುತ್ತಿರುವ ಹಾರಕೂಡ ಮಠದಿಂದ ಇದುವರೆಗೆ 107 ಮೌಲಿಕ ಗ್ರಂಥಗಳನ್ನು ಪ್ರಕಟಿಸಲಾಗಿದೆ. ಈ ವರ್ಷ ಎರಡು ಗ್ರಂಥ ಪ್ರಕಟವಾಗುತ್ತಿವೆ. ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿಯಲ್ಲಿ ಸಮನ್ವಯತೆ ಇದೆ. ಹಾರಕೂಡ ಮಠ ಸಮನ್ವಯ ಮಠ. ಚೆನ್ನ ಎಂದರೆ ಚನ್ನಬಸವ ಶಿವಯೋಗಿಗಳು, ರೇಣುಕ ಎಂದರೆ ಆದಿ ಜಗದ್ಗುರು ರೇಣುಕಾಚಾರ್ಯ, ಬಸವ ಎಂದರೆ ವಿಶ್ವಗುರು ಬಸವೇಶ್ವರ. ಹೀಗಾಗಿ ಇದು ಸಮನ್ವಯದ ಪ್ರಶಸ್ತಿಯಾಗಿದ್ದು. ಇದುವರೆಗೆ 13 ಮಹನೀಯರಿಗೆ ನೀಡಲಾಗಿದೆ ಎಂದು ಶ್ರೀ ಡಾ.ಚನ್ನವಿರ ಶಿವಾಚಾರ್ಯ ತಿಳಿಸಿದರು.
ಉಪನ್ಯಾಸ ಮಾಲೆ, ಗಂಥ ಬಿಡುಗಡೆ
ಹಾರಕೂಡ ಹಿರೇಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯರ 57ನೇ ಪುಣ್ಯ ಸ್ಮರಣೋತ್ಸವ, 40ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.19ರಂದು ಬೆಳಗ್ಗೆ 11ಕ್ಕೆ ಜರುಗಲಿದೆ. ಶ್ರೀ ಡಾ.ಚನ್ನವಿರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಲಿದ್ದು, ಪದ್ಮಶ್ರೀ ಪಂಡಿತ ಡಾ.ಎಂ. ವೆಂಕಟೇಶಕುಮಾರ ಅವರಿಗೆ ಶ್ರೀ ಚೆನ್ನರೇಣುಕ ಬಸವ ಪ್ರಸಸ್ತಿಯನ್ನು ಹಾರಕೂಡ ಶ್ರೀಗಳು ಪ್ರದಾನ ಮಾಡಲಿದ್ದಾರೆ. ಮಲ್ಲಿನಾಥ ಹಿರೇಮಠ ಸಂಪಾದಿಸಿದ ಸದ್ಗುರು ಶ್ರೀ ಹಾರಕೂಡ ಚೆನ್ನಬಸವ ಶಿವಯೋಗಿಗಳ ಕುರಿತ ಭಕ್ತೀಗಿತೆಗಳು ಹಾಗೂ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಬರೆದ ಬೇಂದ್ರೆ ಕಾವ್ಯ: ಮತನ್ಯದಲ್ಲಿ ಅರಳಿದ ದೇವಲೋಕ ಗ್ರಂಥವನ್ನು ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸುಭಾಷ ಮುರುಡ ಬೆಳಮಗಿ ಬಿಡುಗಡೆ ಮಾಡುವರು. ಧಾರವಾಡದ ಹಿರಿಯ ಪ್ರಾಧ್ಯಾಪಕ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ವಿಶೇಷ ಉಪನ್ಯಾಸ ನೀಡಲಿದ್ದು, ಡಾ.ಸಂಗಮೇಶ ಸವದತ್ತಿಮಠ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಡಿವೈಎಸ್ಪಿ ಮಡೋಳಪ್ಪ ಪಿ.ಎಸ್., ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಬಿಡಿವಿಎಸ್ ಅಧ್ಯಕ್ಷ ಶಶಿಕಾಂತ ದುರ್ಗೆ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್. ನಾಗರಾಳೆ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ದೇವಿದಾಸ ಚವ್ಹಾಣ್ ಮುಖ್ಯ ಅತಿಥಿಗಳಾಗಿರುವರು.