ಶ್ರೀ ಚಂದ್ರಶೇಖರಸ್ವಾಮಿ ರಥೋತ್ಸವ ವಿಜೃಂಭಣೆ Festival  
ರಾಜ್ಯ

ಶ್ರೀ ಚಂದ್ರಶೇಖರಸ್ವಾಮಿ ರಥೋತ್ಸವ ವಿಜೃಂಭಣೆ Festival

ಕ್ಯಾಲನೂರು: ಕೋಲಾರ ತಾಲೂಕು ಕ್ಯಾಲನೂರು ಗ್ರಾಮದ ಶ್ರೀ ಚಂದ್ರಶೇಖರಸ್ವಾಮಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.Festival
ಶ್ರೀ ಚಂದ್ರಶೇಖರಸ್ವಾಮಿ ರಥೋತ್ಸವಕ್ಕೆ ಶಾಸಕ ಕೊತ್ತೂರು ಮಂಜುನಾಥ ಚಾಲನೆ ನೀಡಿದರು. ಭಕ್ತರು ಓಂ ಭಲಾ ಶಂಕರ, ಭಲಾ ಶ್ರೀ ಚಂದ್ರಶೇಖರ್​ಸ್ವಾಮಿ, ಓಂ ಭಲಾ ಈಶ್ವರ ಎಂದು ೂಷಣೆ ಕೂಗಿದರು. ಶಾಲಾ ಮಕ್ಕಳು ಸಾಂಸತಿಕ ಕಾರ್ಯಕ್ರಮ, ಕೋಲಾಟ ಪ್ರದರ್ಶನ, ಪುರವಂತರ ಸೇವೆ ನಡೆಸಿಕೊಟ್ಟರು. 10 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಬ್ರಹ್ಮ ರಥೋತ್ಸವ ಅಂಗವಾಘಿ ಕಳೆದ 6 ದಿನಗಂಮದ ವಿವಿಧ ಹೋಮ, ಹವನ, ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ರಥಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು ಮತ್ತು ಹೂವು ಎಸೆದು ಹರಕೆ ತೀರಿಸಿಕೊಂಡರು.
ಸನಾತನ ಹಿಂದೂ ಯುವಕರ ಬಳಗದ ತಂಡ ಭಕ್ತರಿಗೆ ಪ್ರಸಾದ ಬಡಿಸಿದರು. ಬ್ರಹ್ಮರಥೋತ್ಸವದ ಸಮಾಪ್ತಿಯ ಅಂಗವಾಗಿ ರಾತ್ರಿ ವಿಶೇಷ ಕರಗದ ಮೆರವಣಿಗೆ ನಡೆಯಿತು. ದೇವಸ್ಥಾನದ ಆವರಣದಿಂದ ಹೊರಟ ಕರಗ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಿ ಕೊನೆಗೊಂಡಿತು. ಸಾಂಪ್ರದಾಯಿಕ ವಾದ್ಯಗಳೊಂದಿಗೆ ನಡೆಯುವ ಈ ಮೆರವಣಿಗೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಹಾಲು ಉತ್ಪಾದಕರ ಸಹಕಾರ ಸಂದ ಸದಸ್ಯ ಜಂಜಿಮಲ್ಲೆ ರಮೇಶ್​, ಎಂಎಲ್​ಸಿ ಅನಿಲ ಕುಮಾರ್​, ಮಾಜಿ ಮಂತ್ರಿ ವರ್ತೂರ್​ ಪ್ರಕಾಶ್​, ಸಿಎಂಆರ್​ ಶ್ರೀನಾಥ್​, ವೃತ್ತ ನಿರೀಕ್ಷಕ ಮಂಜುನಾಥ್​, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್​ ವೆಂಕಟೇಶ್​, ಸದಸ್ಯ ಮರಿಯಪ್ಪ ಲೋಕೇಶ್​, ಚೌಡರೆಡ್ಡಿ, ಊರಿನ ಗ್ರಾಮಸ್ಥರು ಇದ್ದರು.